ಹಿಂದಿ ಬೆಲ್ಟ್‌ನಲ್ಲಿ ಅಬ್ಬರಿಸಿದ 'ಸಲಾರ್'; ಕಿರುತೆರೆಯಲ್ಲೂ ಧೂಳೆಬ್ಬಿಸಿದ ಪ್ರಭಾಸ್
ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ತೆರೆಕಂಡಿದ್ದ 'ಸಲಾರ್: ಸೀಜ್‌ಫೈಯರ್' ಸಿನಿಮಾ ಥಿಯೇಟರ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ಗೆ ಮತ್ತೆ ಗೆಲುವು ಸಿಗುವಂತೆ ಮಾಡಿತ್ತು. ಈಗ ಸಿನಿಮಾ ಕಿರುತೆರೆಯಲ್ಲೂ ಮೋಡಿ ಮಾಡುತ್ತಿದೆ.
ಈಗ ಬದಲಾದ ಟ್ರೆಂಡ್‌ನಲ್ಲಿ ಕಿರುತೆರೆಯಲ್ಲಿ ಸಿನಿಮಾಗಳು ಮೋಡಿ ಮಾಡುವುದು ತೀರಾ ಕಷ್ಟ. ಯಾಕಂದ್ರೆ, ಬಿಗ್ ಬಜೆಟ್ ಸಿನಿಮಾ ಥಿಯೇಟರ್‌ಗಳಲ್ಲಿ ತೆರೆಕಂಡ ಬಳಿಕ ಕೆಲವೇ ದಿನಗಳಲ್ಲಿ ಓಟಿಟಿಗೆ ಲಗ್ಗೆ ಇಡುತ್ತವೆ. ಅಲ್ಲಿಗೆ ಬಹುತೇಕ ಮಂದಿ ಸಿನಿಮಾವನ್ನು ನೋಡಿ ಮುಗಿಸುತ್ತಾರೆ. ಹೀಗಾಗಿ ಕಿರುತೆರೆಯಲ್ಲಿ ಈ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತೆ.

ಆದರೂ ಸಲಾರ್‌ಗೆ ಕಿರುತೆರೆಯಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಎಂದು ಸಲಾರ್ ಟೀಮ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಅದರಲ್ಲೂ 'ಸಲಾರ್' ಹಿಂದಿ ವರ್ಷನ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದಕ್ಕೆ ಖುಷಿಯನ್ನು ವ್ಯಕ್ತಪಡಿಸಿದೆ. ಹಾಗಿದ್ರೆ, 'ಸಲಾರ್' ಹಿಂದಿ ಕಿರುತೆರೆ ಬರೆದ ದಾಖಲೆಗಳೇನು ಅನ್ನೋದನ್ನು ತಿಳಿಯಲು ಮುಂದೆ ಓದಿ.
ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶೃತಿ ಹಾಸನ್ ಸೇರಿದಂತೆ ದಕ್ಷಿಣ ಭಾರತದ ತಾರೆಯರು ನಟಿಸಿದ್ದ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿತ್ತು. 'ಕೆಜಿಎಫ್ 2' ಬಳಿಕ 'ಸಲಾರ್' ನಿರ್ದೇಶಿಸಿದ್ದ ಪ್ರಶಾಂತ್ ನೀಲ್ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಭರವಸೆಯನ್ನಿಟ್ಟು ಸಿನಿಮಾ ನೋಡಿತ್ತು. ಬಾಕ್ಸಾಫೀಸ್‌ನಲ್ಲಿ 700 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು.
'ಸಲಾರ್' ಹಿಂದಿ ವರ್ಷನ್ ಅನ್ನು ಸ್ಟಾರ್ ಗೋಲ್ಡ್ ಕಳೆದ ಮೇ 25ಕ್ಕೆ ವರ್ಲ್ಡ್ ಪ್ರೀಮಿಯರ್ ಮಾಡಿತ್ತು. ಸಂಜೆ 7.30ರಿಂದ ಸಿನಿಮಾ ಪ್ರಸಾರ ಆಗಿತ್ತು. ಆ ಅವದಿಯಲ್ಲಿ ಹೆಚ್ಚು ಮಂದಿ ಸಲಾರ್ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ ಎಂದು 'ಸಲಾರ್' ಟೀಮ್ ತನ್ನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಈ ಮೂಲಕ ಹಿಂದಿ ಏರಿಯಾದ ಮನೆ ಮನೆಗಳಲ್ಲೂ ಪ್ರಭಾಸ್ ಹವಾ ಕಮ್ಮಿಯಾಗಿಲ್ಲ ಅನ್ನೋದು ಸಾಬೀತಾಗಿದೆ.
'ಸಲಾರ್' ಹಿಂದಿ ಸುಮಾರು 30.4 ಮಿಲಿಯನ್ ರೀಚ್ ಕಂಡಿದೆ ಎಂದು ಹೇಳಿಕೊಂಡಿದೆ. ಹಾಗೇ ಆವರೇಜ್ ಮಿನಿಟ್ ಆಡಿಯನ್ಸ್ ಪಾಯಿಂಟ್‌ನಲ್ಲೂ (AMA) 8.1 ಅಂಕಗಳನ್ನು ಪಡೆದುಕೊಂಡಿದ್ದಾಗಿ ಮಾಹಿತಿ ನೀಡಿದೆ. AMA ಮೂಲಕ ಕಿರುತೆರೆಯಲ್ಲಿ ಈ ಸಿನಿಮಾ ನೋಡಲು ಬಂದ ಆಡಿಯನ್ಸ್ ಸೈಜ್ ಅನ್ನು ಅಳತೆ ಮಾಡಲಾಗುತ್ತೆ.
'ಸಲಾರ್' ಪಾರ್ಟ್ 1 ಭರ್ಜರಿ ಸಕ್ಸಸ್ ಕಂಡಿದೆ. ಹೀಗಾಗಿ ಪ್ರಶಾಂತ್ ನೀಲ್ ಪಾರ್ಟ್ 2 ಕಡೆಗೆ ಗಮನ ಹರಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಜೂ.ಎನ್‌ಟಿಆರ್ ಮುಂದಿನ ಸಿನಿಮಾ ಕಡೆಗೆ ಗಮನ ಹರಿಸಿದ್ದಾರೆ. ಹೀಗಾಗಿ 'ಸಲಾರ್ 2' ಯಾವಾಗ ಆಗುತ್ತೆ? ಅನ್ನೋ ಖಚಿತ ಮಾಹಿತಿ ಇಲ್ಲ. ಕೆಲವು ದಿನಗಳ ಹಿಂದೆ 'ಸಲಾರ್ 2' ಸ್ಥಗಿತಗೊಂಡಿದೆ ಅನ್ನುವ ಸುದ್ದಿ ಹಬ್ಬಿತ್ತು. ಆದರೆ, ಹೊಂಬಾಳೆ ಫಿಲ್ಮ್ಸ್ ಅದನ್ನು ಪರೋಕ್ಷವಾಗಿ ತಿರಸ್ಕರಿಸಿತ್ತು.


Click it and Unblock the Notifications











