Salaar Trailer 2: "ಇಡೀ ಕಥೆ ಹೇಳಿದ್ರಲ್ಲ, ಸಂಕ್ರಾಂತಿವರೆಗೂ ಬಾಕ್ಸಾಫೀಸ್‌ಗೆ ನಿದ್ರೆ ಇರಲ್ಲ" ನೆಟ್ಟಿಗರ ರಿಯಾಕ್ಷನ್ ಏನು?
'ಸಲಾರ್' ರಿಲೀಸ್‌ಗೆ ಇನ್ನೇನು ಮೂರು ದಿನಗಳು ಬಾಕಿ ಉಳಿದಿವೆ. ಈ ಹೊತ್ತಲ್ಲೇ ಹೊಂಬಾಳೆ ಫಿಲ್ಮ್ಸ್ ನಿರೀಕ್ಷೆ ಮಾಡಿದಂತೆ ಎರಡನೇ ಟ್ರೈಲರ್ ಅನ್ನು ರಿಲೀಸ್ ಮಾಡಿದೆ. ಈ ರಿಲೀಸ್ ಟ್ರೈಲರ್ ನೋಡಿ ನೆಟ್ಟಿಗರು ಸೋಶಿಯಲ್ ಮೀಡಿಯಾ 'ಎಕ್ಸ್'ನಲ್ಲಿ (ಟ್ವಿಟರ್) ಪ್ರತಿಕ್ರಿಯೆ ನೀಡುವುದಕ್ಕೆ ಶುರು ಮಾಡಿದ್ದಾರೆ.
'ಸಲಾರ್' ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ನಟಿಸುತ್ತಿರುವ ಮತ್ತೊಂದು ಹೈ ಆಕ್ಷನ್ ಸಿನಿಮಾ. ಪ್ಯಾನ್ ಇಂಡಿಯಾ ದಿಗ್ಗಜರೇ ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. 'ಕೆಜಿಎಫ್' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿರೋ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ರೆ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಬಹುತೇಕ ಕೆಜಿಎಫ್ ಜೊತೆ ಕೆಲಸ ಮಾಡಿರೋ ದಿಗ್ಗಜರೇ ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ.

ಮೊದಲ ಬಾರಿಗೆ ಬಿಟ್ಟ ಟ್ರೈಲರ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದು 'ಉಗ್ರಂ' ಸಿನಿಮಾದ ರಿಮೇಕ್ ಅಂತ ಕೆಲವರು ಹೇಳಿಕೊಂಡಿದ್ದರು. ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡದ ತಂಡ ಮತ್ತೊಂದು ಟ್ರೈಲರ್ ರಿಲೀಸ್ ಮಾಡಿದೆ. ಅದಕ್ಕೆ ನೆಟ್ಟಿಗರ ಕೊಟ್ಟ ಕೆಲವು ರೆಸ್ಪಾನ್ಸ್ ಹೀಗಿದೆ.
"ಕೊನೆಯ 20 ಸೆಕೆಂಡ್‌ಗಳು ಅದ್ಭುತ"
"ಟ್ರೈಲರ್ ಬೇರೆ ಲೆವೆಲ್‌ನಲ್ಲಿಯೇ ಇದೆ. ಟ್ರೈಲರ್‌ನ ಕೊನೆಯ 20 ಸೆಕೆಂಡುಗಳಲ್ಲಿ ಖಾನ್ಸಾರ್ ಅದ್ಭುತ ಅಂತ ಅನಿಸುತ್ತಿದೆ. ಪ್ರಭಾಸ್ ನೋಡುವುದಕ್ಕೆ ಸಖತ್ ಆಗಿದೆ. ಸಖತ್ ಆಗಿಯೇ ಹೊಡೆಯುತ್ತಾರೆ. ಸಂಕ್ರಾಂತಿವರೆಗೂ ಬಾಕ್ಸಾಫೀಸ್‌ಗೆ ನಿದ್ರೆ ಅನ್ನೋದೇ ಇರೋದಿಲ್ಲ" ಎಂದು ನೆಟ್ಟಿಗರೊಬ್ಬರು 'ಸಲಾರ್' ಎರಡನೇ ಟ್ರೈಲರ್ ಅನ್ನು ಹಾಡಿಹೊಗಳಿದ್ದಾರೆ.
"ಇಡೀ ಕಥೆ ಹೇಳಿದ್ದೀರಲ್ಲ"
'ಸಲಾರ್' ಟ್ರೈಲರ್ 2 ನೋಡಿದ ಬಳಿಕ ನೆಟ್ಟಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಟ್ರೈಲರ್‌ನಲ್ಲಿ ಇಡೀ ಕಥೆಯನ್ನೇ ಹೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. "ಧನ್ಯವಾದಗಳು.. ಸಲಾರ್ ಟ್ರೈಲರ್ 2ನಲ್ಲಿ ಇಡೀ ಸಿನಿಮಾದ ಕಥೆಯನ್ನು ಹೇಳಿಕೊಂಡಿದ್ದಕ್ಕೆ. ಈಗ ನನಗೆ ಸಿನಿಮಾವನ್ನು ನೋಡುವ ಅಗತ್ಯವಿಲ್ಲ. ನಾನು ಓಟಿಟಿ ರಿಲೀಸ್ ಮಾಡುವವರೆಗೂ ಕಾಯಬಹುದು." ಎಂದು ಬರೆದುಕೊಂಡಿದ್ದಾರೆ.
ಸುಲ್ತಾನ ಬೇಡ ಅಂದ್ರೆ ಅಷ್ಟೇನೆ
"ಸುಲ್ತಾನ್ ಏನೇ ಕೇಳಿಕೊಂಡರೂ ಅವನು ಅದನ್ನು ಅವನಿಗಾಗಿ ತಂದುಕೊಡುತ್ತಾನೆ. ಯಾವಾಗೆಲ್ಲ ಸುಲ್ತಾನ್ ರಿಜೆಕ್ಟ್ ಮಾಡುತ್ತಾನೋ ಆಗೆಲ್ಲ ನಾಶ ಮಾಡುತ್ತಾನೆ. ಡೈನೋಸಾರ್ ಅವತಾರದಲ್ಲಿ ಡಾರ್ಲಿಂಗ್" ಎಂದು ಮತ್ತೊಬ್ಬ ಪ್ರಭಾಸ್ ಅಭಿಮಾನಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ.
"ಆಕ್ಷನ್ ಅಷ್ಟೇ ಅಲ್ಲ ಭಾವನೆಗಳೂ ಇವೆ"
"ಸಲಾರ್ ಸೀಸ್‌ಫೈಯರ್' ಟ್ರೈಲರ್ ಈಗಾಗಲೇ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಟೀಸರ್, ಮೊದಲ ಟ್ರೈಲರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಸೂರಿದೆ ಹಾಡು ಆಕ್ಷನ್ ಅಷ್ಟೇ ಅಲ್ಲ ಭಾವನಾತ್ಮಕವಾಗಿಯೂ ಆಳವಾಗಿದೆ ಅನ್ನೋ ಸುಳಿವು ನೀಡಿದೆ" ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಎಲ್ಲರೂ ಪ್ರಭಾಸ್ ಅಭಿಮಾನಿಗಳೇ?
"ಪ್ರಭಾಸ್ ನಿರ್ದೇಶನ ಮಾಡಬೇಕೆಂದರೆ ಅವರಿಗೆ ಒಂದು ರೇಂಜ್ ಇರಬೇಕು. ಪ್ರಭಾಸ್ ಅನ್ನು ಸರಿಯಾಗಿ ಬಳಸಿಕೊಂಡರೆ ಅವರು ಇವರು ಯಾರೂ ಇಲ್ಲ. ಎಲ್ಲರೂ ಪ್ರಭಾಸ್ ಅಭಿಮಾನಿಗಳೇ" ಎಂದು ಮತ್ತೊಬ್ಬ ಅಭಿಮಾನಿ ಹೇಳಿಕೊಂಡಿದ್ದಾರೆ.
ಮೂರು ಶೋ ಟಿಕೆಟ್ ಬುಕ್
"ಸಲಾರ್ ಸಿನಿಮಾದ ಎರಡನೇ ಟ್ರೈಲರ್ ನೋಡಿದ ಮೇಲೆ ಯುಕೆನಲ್ಲಿ ಇರುವ ನನ್ನ ಒಬ್ಬ ಸ್ನೇಹಿತ ಮೂರು ಶೋಗಳಿಗೆ ನೇರವಾಗಿ ಟಿಕೆಟ್‌ಗಳನ್ನು ಕಾಯ್ದಿಸಿದ್ದಾನೆ" ಎಂದು ನೆಟ್ಟಿಗರೊಬ್ಬರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











