'ಎಕ್ಕ' ಅಡ್ಡ ಸೇರಿದ ಸಲಗ ಸುಂದರಿ: ಯುವ ರಾಜ್‌ಕುಮಾರ್ ಜೊತೆ ಸಂಜನಾ ಆನಂದ್ ರೊಮ್ಯಾನ್ಸ್ ಫಿಕ್ಸ್

ಯುವ ರಾಜ್‌ಕುಮಾರ್ ಎರಡನೇ ಸಿನಿಮಾ 'ಎಕ್ಕ'ದ ಶೂಟಿಂಗ್ ನಡೆಯುತ್ತಿದೆ. ಮೊದಲ ಸಿನಿಮಾ 'ಯುವ' ಬಳಿಕ ಪಕ್ಕಾ ಮಾಸ್ ಅವತಾರದಲ್ಲಿ ಮತ್ತೆ ಅಭಿಮಾನಿಗಳ ಮುಂದೆ ಬರುವುದಕ್ಕೆ ಶತಪ್ರಯತ್ನಗಳು ನಡೆಯುತ್ತಿವೆ. ಈ ಬಾರಿನೂ ಯುವ ರಾಜ್‌ಕುಮಾರ್‌ಗೆ ಸ್ಯಾಂಡಲ್‌ವುಡ್‌ನ ದಿಗ್ಗಜರು ಜೊತೆಯಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಹೊರಬಿದ್ದಿದ್ದು, ರಗಡ್ ಲುಕ್ ನೋಡಿ ದೊಡ್ಮನೆ ಅಭಿಮಾನಿಗಳಿಗೆ ಕಿಕ್ ಏರಿತ್ತು.

ಅಶ್ವಿನಿ ಪುನೀತ್ ರಾಜ್‌ಕುಮಾರ್ (ಪಿಆರ್‌ಕೆ), ಕಾರ್ತಿಕ್ ಗೌಡ-ಯೋಗಿ ಜಿ ರಾಜ್ ಅವರ ಕೆಆರ್‌ಜಿ ಸ್ಟುಡಿಯೋ ಹಾಗೂ ಜಯಣ್ಣ-ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. 'ಉತ್ತರಕಾಂಡ' ಸಿನಿಮಾದ ನಿರ್ದೇಶಕ ರೋಹಿತ್ ಪದಕಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಪಕ್ಕಾ ಮಾಸ್ ರಗಡ್ ಸಿನಿಮಾ ಈ ವರ್ಷ ರಿಲೀಸ್ ಆಗಲಿದೆ.

Salaga Sanjana Anand Joined as female lead in Yuva Rajkumar starrer Ekka kannada film

'ಎಕ್ಕ' ಆರಂಭದ ಆದ ಹೊಸತರಲ್ಲೇ ಈ ಸಿನಿಮಾಗೆ ಇಬ್ಬರು ನಾಯಕಿಯರು ಎಂದು ನಿರ್ದೇಶಕರು ಹೇಳಿದ್ದರು. ಆರಂಭದಲ್ಲಿ ಒಬ್ಬ ನಾಯಕಿ ಸಂಪದ ಅವರನ್ನು ಪರಿಚಯ ಕೂಡ ಮಾಡಿದ್ದರು. ಇನ್ನು ಎರಡನೇ ನಾಯಕಿಯನ್ನು ಗುಟ್ಟಾಗಿಯೇ ಇಟ್ಟಿದ್ದ 'ಎಕ್ಕ' ಸಿನಿಮಾ ತಂಡ ಸಂಕ್ರಾಂತಿಯ ಈ ಶುಭ ಸಂಭ್ರಮದಲ್ಲಿ ಅದನ್ನು ರಿವೀಲ್ ಮಾಡಿದೆ. ಯುವ ರಾಜ್‌ಕುಮಾರ್ ಜೊತೆ ಹೆಜ್ಜೆ ಹಾಕಲಿರುವ ಮತ್ತೊಬ್ಬ ನಾಯಕಿ ಸಂಜನಾ ಆನಂದ್ ಎಂದು ಅನೌನ್ಸ್ ಆಗಿದೆ.

ಸಂಜನಾ ಆನಂದ್‌ಗೆ ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೊಳ್ಳೆ ಆಫರ್‌ಗಳು ಸಿಗುತ್ತಿವೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ 'ಸಲಗ' ಸಿನಿಮಾ ಸಂಜನಾ ಆನಂದ್‌ಗೆ ಒಂದೊಳ್ಳೆ ಬ್ರೇಕ್ ಕೊಟ್ಟಿತ್ತು. ಅದಕ್ಕೂ ಮುನ್ನ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಹಾಗೂ ನಾಗಭೂಷಣ್ ಜೊತೆ ವೆಬ್ ಸೀರಿಸ್‌ನಲ್ಲಿ ನಟಿಸಿದ್ದರು. ಈಗ ದಿನಕರ್ ತೂಗುದೀಪ ನಿರ್ದೇಶಿಸಿರುವ 'ರಾಯಲ್' ಸಿನಿಮಾಗೂ ಇವರೇ ನಾಯಕಿ.

'ರಾಯಲ್' ಸಿನಿಮಾದಲ್ಲಿ ವಿರಾಟ್‌ಗೆ ನಾಯಕಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇದೇ ತಿಂಗಳು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. 'ರಾಯಲ್' ಸಿನಿಮಾವನ್ನೂ ಜಯಣ್ಣ ನಿರ್ಮಾಣ ಮಾಡಿದ್ದಾರೆ. ಈಗ ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾಗೂ ಮೂವರು ನಿರ್ಮಾಪಕರಲ್ಲಿ ಅವರೂ ಕೂಡ ಒಬ್ಬರು. 'ರಾಯಲ್' ಸಿನಿಮಾದಲ್ಲಿ ಸಂಜನಾ ಪರ್ಫಾಮೆನ್ಸ್ ಇಟ್ಟ ಪಟ್ಟು 'ಎಕ್ಕ'ಗೂ ಆಯ್ಕೆ ಮಾಡಿರಬಹುದು ಎಂದು ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ.

Salaga Sanjana Anand Joined as female lead in Yuva Rajkumar starrer Ekka kannada film

'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ ಮೂಲಕ ಸಂಜನಾ ಆನಂದ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ 'ಕುಷ್ಕ', 'ಶೋಕಿವಾಲಾ', 'ವಿಂಡೋ ಸೀಟ್‌', 'ಫುಲ್ ಬಾಟಲ್', 'ಹಯಗ್ರೀವ', 'ಮುಧೋಳ್', 'ಕ್ಷತ್ರಿಯ', 'ಮಳೆ ಬಿಲ್ಲು', ಈಗ ರಿಲೀಸ್‌ಗೆ ರೆಡಿಯಾಗಿರುವ 'ರಾಯಲ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಎಕ್ಕ' ಸಂಜನಾ ಆನಂದ್ ವೃತ್ತಿ ಬದುಕಿನ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಅನ್ನಬಹುದು. ಸದ್ಯ ಇವರ ಪಾತ್ರದ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ.

ಇನ್ನು 'ಎಕ್ಕ' ಸಿನಿಮಾ ಮೂಲಕ ರೋಹಿತ್ ಪದಕಿ ಬೆಂಗಳೂರಿನ ಅಂಡರ್‌ವರ್ಲ್ಡ್ ಕಥೆಯನ್ನು ಹೇಳುತ್ತಿದ್ದಾರೆ. ಈ ಪ್ರಪಂಚಕ್ಕೆ ಯುವ ರಾಜ್‌ಕುಮಾರ್ ಪಾತ್ರ ಹೇಗೆ ಎಂಟ್ರಿ ಕೊಡುತ್ತೆ ಅನ್ನೋದೇ ಈ ಸಿನಿಮಾದ ಹೈಲೈಟ್. ಇನ್ನು ಈಗಾಗಲೇ 'ಎಕ್ಕ' ಸಿನಿಮಾದ ಪೋಸ್ಟರ್ ರಿವೀಲ್ ಆಗಿದೆ. ಯುವ ರಾಜ್‌ಕುಮಾರ್ ರಕ್ತಸಿಕ್ತ ಲುಕ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. 'ಎಕ್ಕ' ಶೂಟಿಂಗ್ ವೇಗವಾಗಿ ನಡೆಯುತ್ತಿದ್ದು, ಇದೇ ವರ್ಷ ರಿಲೀಸ್ ಆಗೋದು ಗ್ಯಾರಂಟಿ.

More from Filmibeat

English summary
Salaga Sanjana Anand Joined as female lead in Yuva Rajkumar starrer Ekka kannada film;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X