"ನಿಮ್ಮೊಂದಿಗೆ ಕಳೆದ ಕ್ಷಣಗಳು ಎಂದೆಂದಿಗೂ ಅದ್ಭುತ": ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ಕಿಚ್ಚನ ಪೋಸ್ಟ್ ವೈರಲ್
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇಂದು (ಡಿಸೆಂಬರ್ 27) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟನಿಗೆ ವಿಶ್ವದ ಮೂಲೆ ಮೂಲೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಬಾಲಿವುಡ್ ಮಂದಿ ಸಲ್ಮಾನ್ ಖಾನ್‌ಗೆ ಬರ್ತ್‌ಡೇ ವಿಶ್ ಮಾಡುತ್ತಿದ್ದಾರೆ.
ಇತ್ತ ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಕೂಡ ಸಲ್ಮಾನ್ ಖಾನ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸಲ್ಮಾನ್ ಖಾನ್‌ಗೆ ಶುಭ ಕೋರಿ ಇಬ್ಬರೂ ಜೊತೆಗಿರುವ ಫೋಟೊವನ್ನು ಶೇರ್ ಮಾಡಿದ್ದಾರೆ. ಇಬ್ಬರೂ ಜೊತೆಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. " ನಿಮ್ಮೊಂದಿಗೆ ಕಳೆದ ಕ್ಷಣಗಳು ಅದ್ಭುತ" ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ನಡುವೆ ಉತ್ತಮ ಬಾಂಧವ್ಯವಿದೆ. 'ದಬಾಂಗ್ 3' ಸಿನಿಮಾದಲ್ಲಿ ಒಟ್ಟಿಗೆ ನಟಿಸುವಾಗ ಇಬ್ಬರ ನಡುವಿನ ಆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿತ್ತು. ಅತ್ತ ಸಲ್ಮಾನ್ ಖಾನ್ ಕೂಡ ಕಿಚ್ಚ ಸುದೀಪ್ ಜೊತೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಸುದೀಪ್ ತಮ್ಮ ನೆಚ್ಚಿನ ನಟನಿಗೆ ಶುಭ ಕೋರಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
"ನನ್ನ ಪ್ರೀತಿಯ ಸಲ್ಮಾನ್ ಖಾನ್ ಸರ್ ಹಾಗೂ ಸಹೋದರ ನಿಮ್ಮ ಹುಟ್ಟುಹಬ್ಬಕ್ಕೆ ನನ್ನ ಕಡೆಯಿಂದ ಶುಭಾಶಯಗಳು. ನಿಮ್ಮೊಂದಿಗೆ ಕಳೆದ ಪ್ರತಿಯೊಂದು ಕ್ಷಣಗಳು ಎಂದೆಂದಿಗೂ ಅದ್ಭುತ. ನಮ್ಮ ಬದುಕಿನಲ್ಲಿ ನೀವು ಯಾವಾಗಲೂ ಅದ್ಬುತ ವ್ಯಕ್ತಿಯಾಗಿರುವುದಕ್ಕೆ ಧನ್ಯವಾದಗಳು." ಎಂದು ಕಿಚ್ಚ ಸುದೀಪ್ ಎಕ್ಸ್ ಖಾತೆಯಲ್ಲಿ ಫೋಟೊ ಜೊತೆ ಬರೆದುಕೊಂಡಿದ್ದಾರೆ.
ಸಲ್ಮಾನ್ ಖಾನ್ ಸಿನಿಮಾ ಕನ್ನಡದಲ್ಲಿ ತೆರೆಕಂಡಾಗ ಕಿಚ್ಚ ಸುದೀಪ್ ಸಾಥ್ ಕೊಟ್ಟಿದ್ದರು. ಹಾಗೇ ಕಿಚ್ಚನ ಸಿನಿಮಾ 'ವಿಕ್ರಾಂತ್ ರೋಣ' ತೆರೆಕಂಡಾಗ ಹಿಂದಿ ಬೆಲ್ಟ್‌ನಲ್ಲಿ ಸ್ವತ: ಸಲ್ಮಾನ್ ಖಾನ್ ನಿರ್ಮಾಣ ಸಂಸ್ಥೆ ಬೆಂಬಲವಾಗಿ ನಿಂತಿತ್ತು. ಆ ಮಟ್ಟಿಗೆ ಇಬ್ಬರ ನಡುವೆ ಒಡನಾಟವಿದೆ. ಇತ್ತ ಕಿಚ್ಚನ ಅಭಿಮಾನಿಗಳು ಮತ್ತೆ ಸಲ್ಮಾನ್ ಖಾನ್ ಜೊತೆ ನಟಿಸಲಿ ಎಂದು ಹಾರೈಸುತ್ತಿದ್ದಾರೆ.
ಸದ್ಯ ಸಲ್ಮಾನ್ ಖಾನ್ ನಟಿಸಿದ 'ಟೈಗರ್ 3' ಸಿನಿಮಾ ರಿಲೀಸ್ ಆಗಿದೆ. ಇನ್ನು ಕೈ ತುಂಬಾ ಸಿನಿಮಾಗಳಿವೆ. ಕರಣ್ ಜೋಹರ್ ಜೊತೆ 'ದಿ ಬುಲ್' ಸಿನಿಮಾ ಮಾಡುತ್ತಿದ್ದಾರೆ. 'ದಬಾಂಗ್ 4' ಸಿನಿಮಾ ಕೂಡ ಆರಂಭ ಆಗಲಿದೆ. ಇದು 2025ರಂದು ರಿಲೀಸ್ ಆಗಲಿದೆ. ಸಲ್ಮಾನ್ ಖಾನ್ ಫೇವರಿಟ್ ನಿರ್ದೇಶಕ 'ಪ್ರೇಮ್ ಕಿ ಶಾದಿ' 2024ರಲ್ಲಿ ಶುರುವಾಗಲಿದ್ದು, ಇದೂ ಕೂಡ 2025ಕ್ಕೆ ಬಿಡುಗಡೆಯಾಗಲಿದೆ. 'ಕಿಕ್ 2' ಕೂಡ ಆರಂಭ ಆಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಜೊತೆಯಾಗಿ 'ಟೈಗರ್ Vs ಪಠಾಣ್' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತ ಕಿಚ್ಚ ಸುದೀಪ್ ಕೂಡ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಮ್ಯಾಕ್' ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಅದೇ ಇನ್ನೊಂದು ಕಡೆ ಕೆಜಿಆರ್ ಸ್ಟುಡಿಯೋ ನಿರ್ಮಾಣದ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಗೇ 'ಕಬ್ಜ 2' ಕೂಡ ಅನೌನ್ಸ್ ಆಗಿದ್ದು, ಆರ್.ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. 2024ರಲ್ಲಿ ಈ ಮೂರು ಸಿನಿಮಾ ರಿಲೀಸ್ ಆಗಬಹುದು. ಇಲ್ಲ 'ಮ್ಯಾಕ್ಸ್' ರಿಲೀಸ್ ಆಗೋದಂತೂ ಕನ್ಫರ್ಮ್.


Click it and Unblock the Notifications











