Salman Khan: 'ವಿಕ್ರಾಂತ್ ರೋಣ' ಜೊತೆ ನಿಂತ ಬಾಲಿವುಡ್‌ ಸುಲ್ತಾನ್ ಸಲ್ಮಾನ್ ಖಾನ್!

ಸ್ಯಾಂಡಲ್‌ವುಡ್‌ನ ಎರಡು ಬಹುನಿರೀಕ್ಷಿತ ಸಿನಿಮಾಗಳಲ್ಲಿ 'ವಿಕ್ರಾಂತ್ ರೋಣ' ಕೂಡ ಒಂದು. ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಕಾಂಬಿನೇಷನ್ ಸಿನಿಮಾಗೆ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. 'ವಿಕ್ರಾಂತ್ ರೋಣ' ತಂಡ ಪ್ರತಿ ಹಂತದಲ್ಲೂ ಬಿಗ್ ಸರ್ಪ್ರೈಸ್ ಕೊಡುತ್ತಿದ್ದಾರೆ. 3 ಡಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಆರು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ.

ಈ ಮಧ್ಯೆ ಸುದೀಪ್ ಟೀಮ್ 'ವಿಕ್ರಾಂತ್ ರೋಣ' ಟೀಸರ್ ಕೂಡ ಬಿಡುಗಡೆ ಮಾಡುತ್ತಿದೆ. ಯುಗಾದಿ ಹಬ್ಬಕ್ಕೆ ಸುದೀಪ್ ತನ್ನ ಅಭಿಮಾನಿಗಳಿಗೆ ಉಡುಗೊರೆಯನ್ನು ನೀಡುತ್ತಿದ್ದಾರೆ. ಇದೇ ಏಪ್ರಿಲ್ 02 ರಂದು 'ವಿಕ್ರಾಂತ್ ರೋಣ' ಸಿನಿಮಾ ಮೊದಲ ಟೀಸರ್ ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

'ವಿಕ್ರಾಂತ್ ರೋಣ' ಸಿನಿಮಾದ ಟೀಸರ್ ಬಿಡುಗಡೆಗೆ ದಿಗ್ಗಜರು ಕೈ ಜೋಡಿಸಿದ್ದಾರೆ. ಈ ಸಿನಿಮಾ ಹಿಂದಿ ವರ್ಷನ್ ಅನ್ನು ಬಾಲಿವುಡ್‌ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಬಿಡುಗಡೆ ಮಾಡಲಿದ್ದಾರೆ.

ಸಲ್ಮಾನ್ ರಿಂದ 'ವಿಕ್ರಾಂತ್ ರೋಣ' ಟೀಸರ್

ಸಲ್ಮಾನ್ ರಿಂದ 'ವಿಕ್ರಾಂತ್ ರೋಣ' ಟೀಸರ್

'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಸಿನಿಮಾ. ಅಲ್ಲದೆ 3ಡಿಯಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಟೀಸರ್ ಯುಗಾದಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಆರು ಭಾಷೆಯಲ್ಲೂ ಟೀಸರ್ ರಿಲೀಸ್ ಆಗಲಿದೆ. ಈ ಸಿನಿಮಾದ ಹಿಂದಿ ವರ್ಷನ್ ಅನ್ನು ಸಲ್ಮಾನ್ ಖಾನ್ ಏಪ್ರಿಲ್ 02ರಂದು ಬೆಳಗ್ಗೆ 09.55ರಂದು ಬಿಡುಗಡೆ ಮಾಡಲಿದ್ದಾರೆ. ಈ ವಿಷಯವನ್ನು ಸ್ವತ: ಕಿಚ್ಚ ಸುದೀಪ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಟೀಸರ್ ಬಗ್ಗೆ ಸುದೀಪ್ ಹೇಳಿದ್ದೇನು?

ಕಳೆದೆರಡು ದಿನಗಳಿಂದ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ನೀಡುತ್ತಿದ್ದಾರೆ. ಈಗ ಸಲ್ಮಾನ್ ಖಾನ್‌ರಿಂದ 'ವಿಕ್ರಾಂತ್ ರೋಣ' ಟೀಸರ್ ಬಿಡುಗಡೆ ಮಾಡಿಸಲಿದ್ದಾರೆ. " ಲೆಜೆಂಟ್ ಹಾಗೂ ಸೂಪರ್‌ಸ್ಟಾರ್, ಸೂಪರ್ ಹೂಮನ್ ಸಲ್ಮಾನ್ ಖಾನ್ ಸರ್ ವಿಕ್ರಾಂತ್ ರೋಣ ಸಿನಿಮಾದ ಹಿಂದಿ ಅವತರಣಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳುವುದಕ್ಕೆ ಖುಷಿ ಮತ್ತು ಉತ್ಸಾಹವಿದೆ." ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಟೀಸರ್‌ಗೆ ದಿಗ್ಗಜರ ಸಾಥ್

ಟೀಸರ್‌ಗೆ ದಿಗ್ಗಜರ ಸಾಥ್

'ವಿಕ್ರಾಂತ್ ರೋಣ' ಆರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕೇವಲ 2ಡಿಯಲ್ಲಷ್ಟೇ ಅಲ್ಲ. 3ಡಿಯಲ್ಲೂ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಹೀಗಾಗಿ ಕಿಚ್ಚನ ಅಭಿಮಾನಿಗಳಿಗೆ 3ಡಿಯಲ್ಲೂ ಸಿನಿಮಾ ನೋಡಲು ಅವಕಾಶ ಸಿಗಲಿದೆ. ಈ ಕಾರಣಕ್ಕೆ ಬೃಹತ್ ಮಟ್ಟದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ತೆಲುಗಿನ ಅವತರಣಿಕೆಯನ್ನು ಚಿರಂಜೀವಿ, ಮಲಯಾಳಂ ಅವತರಣಿಕೆಯನ್ನು ಮೋಹನ್ ಲಾಲ್ ಹಾಗೂ ತಮಿಳಿನ ಟೀಸರ್ ಅನ್ನು ಸಿಂಬು ಬಿಡುಗಡೆ ಮಾಡಲಿದ್ದಾರೆ.

Recommended Video

Sudeep | RRR ಜೊತೆ ಟೈ ಅಪ್ ಮಾಡಿಕೊಂಡ ವಿಕ್ರಾಂತ್ ರೋಣ ಪ್ಲಾನ್ ವರ್ಕ್ ಔಟ್ ಆಗುತ್ತಾ?
50 ದೇಶಗಳಲ್ಲಿ ಸಿನಿಮಾ ರಿಲೀಸ್

50 ದೇಶಗಳಲ್ಲಿ ಸಿನಿಮಾ ರಿಲೀಸ್

'ವಿಕ್ರಾಂತ್ ರೋಣ' ಸಿನಿಮಾವನ್ನು 50 ದೇಶಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ಇದಕ್ಕಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆ ಅಷ್ಟೇ ಅಲ್ಲ ಇಂಗ್ಲಿಷ್‌ನಲ್ಲೂ ರಿಲೀಸ್ ಆಗುತ್ತಿದೆ. ಇಷ್ಟೇ ಅಲ್ಲದೆ ಅರಾಬಿಕ್, ಜರ್ಮನ್, ರಷ್ಯಾ, ಮ್ಯಾಂಡರೀನ್ ಭಾಷೆಯಲ್ಲೂ ತೆರೆಕಾಣಲಿದೆ. ಆದರೆ, ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎನ್ನುವುದು ಇನ್ನೂ ಚಿತ್ರತಂಡ ಪ್ರಕಟಿಸಿಲ್ಲ.

More from Filmibeat

English summary
Salman Khan to launch the hindi version of Vikrant Rona Release Teaser on 2nd April. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X