ಕಿಚ್ಚನಿಗೆ ಆನೆ ಬಲ: ಹಿಂದಿ ಬೆಲ್ಟ್‌ನಲ್ಲಿ 'ವಿಕ್ರಾಂತ್ ರೋಣ'ನಿಗೆ ಭಾಯ್‌ಜಾನ್ ಬೆಂಬಲ!

ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ವಿಕ್ರಾಂತ್ ರೋಣ'. ರಾಕಿ ಭಾಯ್ 'ಕೆಜಿಎಫ್ 2' ಬಳಿಕ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಅಖಾಡಕ್ಕಿಳಿಯಲು ಸಜ್ಜಾಗಿದೆ. 'ವಿಕ್ರಾಂತ್ ರೋಣ' ರಿಲೀಸ್ ಡೇಟ್ ಹತ್ತಿರವಿರುಗಾಲೇ ಒಂದೊಂದು ಸದ್ದಿ ಹೊರಬರುತ್ತಿದೆ. ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಬಗ್ಗೆ ಕುತೂಹಲ ದುಪ್ಪಟ್ಟಾಗುತ್ತಲೇ ಇದೆ.

'ಕೆಜಿಎಫ್ 2' ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ವಿಶ್ವದಮಟ್ಟದಲ್ಲಿ ಸದ್ದು ಮಾಡಿದೆ. ಈಗ ಕನ್ನಡದ ಮತ್ತೊಂದು ಸಿನಿಮಾ 'ವಿಕ್ರಾಂತ್ ರೋಣ' ವಿಶ್ವದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‌ನಲ್ಲಿ ಸೆಟ್ಟೇರಿದ್ದ ಸಿನಿಮಾ ಸಂಪೂರ್ಣ ಮುಗಿದು, ಬಿಡುಗಡೆ ರೆಡಿಯಾಗಿದೆ. ಬಹು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಬೇಕಾಗಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅದರ ಮೊದಲ ಹಂತವೇ ಭರ್ಜರಿ ಗಾಳ ಹಾಕಿದೆ. ಹಿಂದಿ ಬೆಲ್ಟ್‌ನಲ್ಲಿ 'ವಿಕ್ರಾಂತ್ ರೋಣ'ಗೆ ಬೆನ್ನುಲುಬಾಗಿ ನಿಲ್ಲಲು ಭಜರಂಗಿ ಭಾಯಿಜಾನ್ ನಿಂತಿದ್ದಾರೆ.

'ವಿಕ್ರಾಂತ್ ರೋಣ'ಗೆ ಸಲ್ಮಾನ್ ಖಾನ್ ಸಾಥ್

ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಚಿಕ್ಕ ತುಣುಕುಗಳಿಂದಲೇ ಸದ್ದು ಮಾಡಿದ್ದ 'ವಿಕ್ರಾಂತ್ ರೋಣ' 3ಡಿಯಲ್ಲಿ ಬೇರೆ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇದೇ ವೇಳೆ ಹಿಂದಿ ಬೆಲ್ಟ್‌ನಲ್ಲಿ 'ವಿಕ್ರಾಂತ್ ರೋಣ' ರಿಲೀಸ್ ಮಾಡಲು ಸಲ್ಮಾನ್ ಖಾನ್ ಮುಂದೆ ಬಂದಿದ್ದು, ಕಿಚ್ಚನಿಗೆ ಆನೆ ಬಲ ಬಂದಂತಾಗಿದೆ.

Recommended Video

Vikrant Rona | ಗೆಳೆಯನ ಚಿತ್ರಕ್ಕೆ ಶುಭಕೋರಿದ ವಿರೇಂದರ್ ಸೆಹ್ವಾಗ್ | Sudeep | Virender Sehwag
'ವಿಕ್ರಾಂತ್ ರೋಣ'ಗೆ ಆನೆ ಬಲ

'ವಿಕ್ರಾಂತ್ ರೋಣ'ಗೆ ಆನೆ ಬಲ

ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಮಾಡಲು ಸಲ್ಮಾನ್ ಖಾನ್ ನೆರವು ಸಿಕ್ಕಿದ್ದು ಕಿಚ್ಚನಿಗೆ ಆನೆ ಬಲ ಬಂದಂತಾಗಿದೆ. ಈ ಮೂಲಕ ಭಾರತದ ಅತೀ ದೊಡ್ಡ ಮಾರುಕಟ್ಟೆಗೆ ಬಾಲಿವುಡ್ ಸೂಪರ್‌ಸ್ಟಾರ್ ಬೆಂಬಲ ಸಿಕ್ಕಂತಾಗಿದೆ. ಅಂದ್ಹಾಗೆ ಸಲ್ಮಾನ್ ಖಾನ್ ಫಿಲ್ಮ್ಸ್ ಈ ಸಿನಿಮಾವನ್ನು ಉತ್ತರ ಭಾರತದಲ್ಲಿ ರಿಲೀಸ್ ಮಾಡುತ್ತಿದೆ. ಈ ಮೂಲಕ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 100 ಕೋಟಿ ದಾಟುವುದನ್ನು ನಿರೀಕ್ಷೆ ಮಾಡಬಹುದು.

'ವಿಕ್ರಾಂತ್ ರೋಣ' ಬಿಗ್ ರಿಲೀಸ್

'ವಿಕ್ರಾಂತ್ ರೋಣ' ಬಿಗ್ ರಿಲೀಸ್

'ವಿಕ್ರಾಂತ್ ರೋಣ' ಕನ್ನಡ ಚಿತ್ರರಂಗದ ಮತ್ತೊಂದು ದೊಡ್ಡ ಸಿನಿಮಾ. ಈಗಿರೋ ಕ್ರೇಜ್ ನೋಡಿದರೆ, ಕಿಚ್ಚ ಸುದೀಪ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತವನ್ನೇ ಕಲೆ ಹಾಕುವ ಸಾಧ್ಯತೆಯಿದೆ. ಅಲ್ಲದೆ ಈಗಾಗಲೇ ಓವರ್‌ಸೀಸ್ ರೈಟ್ಸ್ ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಹೀಗಾಗಿ 'ವಿಕ್ರಾಂತ್ ರೋಣ' ವಿದೇಶದಲ್ಲೂ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಒಂದು ವೇಳೆ 'ಕೆಜಿಎಫ್ 2' ನಂತೆಯೇ ಕಿಚ್ಚ ಸುದೀಪ್ ಸಿನಿಮಾ 'ವಿಕ್ರಾಂತ್ ರೋಣ' ಕೂಡ ಸಾವಿರ ಕೋಟಿ ಸಮೀಸಿದರೆ, ಕನ್ನಡ ಚಿತ್ರರಂಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುವುದು ಗ್ಯಾರಂಟಿ.

ಕಿಚ್ಚನ ಮುಂದೆ ನೂರೆಂಟು ಸವಾಲು

ಕಿಚ್ಚನ ಮುಂದೆ ನೂರೆಂಟು ಸವಾಲು

'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ ಹೈಪ್ ಜೋರಾಗಿಯೇ ಇದೆ. ಹೀಗಿದ್ದರೂ, ಸವಾಲುಗಳೇನು ಕಮ್ಮಿಯಿಲ್ಲ. 'ವಿಕ್ರಾಂತ್ ರೋಣ' ಜುಲೈ 28ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಹಿಂದೆ ಮುಂದೆ ರಜೆ ದಿನಗಳೂ ಇಲ್ಲ. ಅಲ್ಲದೆ, ಕಿಚ್ಚನ ಹಿಂದಿ ಭಾಷೆಯ ಹೇಳಿಕೆ ಉತ್ತರ ಕರ್ನಾಟಕದಲ್ಲಿ ಯಾವ ರೀತಿ ಪ್ರಭಾವ ಬೀರಿದೆ ಅನ್ನೋದೂ ಗೊತ್ತಿಲ್ಲ. 'ವಿಕ್ರಾಂತ್ ರೋಣ' ಟಕ್ಕರ್ ಕೊಡಲು ಅಜಯ್ ದೇವಗನ್ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಸವಾಲು ಕಮ್ಮಿಯೇನಿಲ್ಲ. ಇವೆಲ್ಲವನ್ನೂ ಎದುರಿಸಿ ನಿಂತರೆ, ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮತ್ತೊಂದು ಕೀರ್ತಿ ಪತಾಕೆ ಹಾರಿಸೋದು ಗ್ಯಾರಂಟಿ.

More from Filmibeat

English summary
Salman Khan to present the Hindi version of Kichcha Sudeep's Vikrant Rona Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X