»   » ಅನಾಥ ಮಕ್ಕಳಿಗೆ ನಟಿ ಸಮಂತಾ ಬರ್ತ್‌ಡೇ ಟ್ರೀಟ್ ಏನು ಗೊತ್ತಾ?

ಅನಾಥ ಮಕ್ಕಳಿಗೆ ನಟಿ ಸಮಂತಾ ಬರ್ತ್‌ಡೇ ಟ್ರೀಟ್ ಏನು ಗೊತ್ತಾ?

Posted By:
Subscribe to Filmibeat Kannada

ಸೆಲೆಬ್ರಿಟಿಗಳ ಹುಟ್ಟುಹಬ್ಬ ಆಚರಣೆ ಅಂದಮೇಲೆ ಯಾವಾಗಲು ಗ್ರ್ಯಾಂಡ್ ಆಗಿಯೇ ಇರುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಅಲ್ಲದೇ ಕೆಲವು ತಾರೆಯರು ವಿಶೇಷ ಸ್ಥಳಗಳಿಗೆ ಅಥವಾ ವಿದೇಶಕ್ಕೆ ಪ್ರವಾಸ ಹೋಗುವುದರ ಮೂಲಕ ತಮ್ಮ ಬರ್ತ್‌ ಡೇ ಸೆಲೆಬ್ರೇಷನ್ ಮಾಡಿಕೊಳ್ಳುವುದು ಸಾಮಾನ್ಯ.[ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಒಲವನ್ನು ಬಯಲು ಮಾಡಿದ ಸಮಂತಾ]

ಆದರೆ ಟಾಲಿವುಡ್ ನ ಬಹು ಬೇಡಿಕೆ ನಟಿ ಸಮಂತಾ ರುತ್ ಪ್ರಭು ತಮ್ಮ ಹುಟ್ಟು ಹಬ್ಬವನ್ನು ಇತರೆ ಸೆಲೆಬ್ರಿಟಿಗಳಿಗಿಂತ ಡಿಫರೆಂಟ್ ಆಗಿ ಆಚರಣೆ ಮಾಡಿಕೊಂಡು, ಅನಾಥ ಮಕ್ಕಳಿಗೆ ವಿಶೇಷ ಟ್ರೀಟ್ ನೀಡುವ ಮೂಲಕ ಸಂತೋಷ ಪಟ್ಟಿದ್ದಾರೆ. ಅದೇನು ಗೊತ್ತಾ?

'ಬಾಹುಬಲಿ 2' ಸಿನಿಮಾ ತೋರಿಸಿದ್ದಾರೆ

ಹೌದು, ಟಾಲಿವುಡ್ ನ ಕ್ಯೂಟ್ ಗರ್ಲ್ ಸಮಂತಾ ರುತ್ ಪ್ರಭು ನಿನ್ನೆ (ಏಪ್ರಿಲ್ 28) ತಮ್ಮ 30 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಬರ್ತ್ ಡೇ ದಿನದಂದೇ 'ಬಾಹುಬಲಿ 2' ಸಿನಿಮಾ ರಿಲೀಸ್ ಆಗಿದ್ದು, ಹೈದರಾಬಾದಿನ ಥಿಯೇಟರ್ ಒಂದರಲ್ಲಿ ಅನಾಥ ಮಕ್ಕಳಿಗೆ ಈ ಸಿನಿಮಾ ತೋರಿಸಿದ್ದಾರೆ.

100 ಅನಾಥ ಮಕ್ಕಳಿಂದ 'ಬಾಹುಬಲಿ' ಚಿತ್ರ ವೀಕ್ಷಣೆ

ಅಂದಹಾಗೆ ಸಮಂತಾ ಇತ್ತೀಚೆಗೆ ತಾನೆ ತಮ್ಮ ಎನ್ ಜಿಒ ಪ್ರತ್ಯುಶಾ ಮೂಲಕ ಒಂದು ಅನಾಥಶ್ರಮವನ್ನು ದತ್ತು ತೆಗೆದುಕೊಂಡಿದ್ದರು. ಅಲ್ಲಿನ ಮಕ್ಕಳು 'ಬಾಹುಬಲಿ 2' ಸಿನಿಮಾ ನೋಡಬೇಕೆಂಬ ಆಸೆಯನ್ನು ಸಮಂತಾ ಅವರಲ್ಲಿ ಹೇಳಿಕೊಂಡಿದ್ದಕ್ಕೆ, ಅವರ ಹುಟ್ಟುಹಬ್ಬದ ಪ್ರಯುಕ್ತ 100 ಅನಾಥ ಮಕ್ಕಳಿಗೆ ಸಿನಿಮಾ ತೋರಿಸಿದ್ದಾರೆ.

ಅನಾಥ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ

ಅನಾಥ ಮಕ್ಕಳಿಗೆ 'ಬಾಹುಬಲಿ 2' ಸಿನಿಮಾ ತೋರಿಸಿದ ಸಮಂತಾ ರವರು 'ಒಬ್ಬರೇ ಬರ್ತ್ ಡೇ ಆಚರಣೆ ಮಾಡಿಕೊಳ್ಳುವುದರ ಬದಲು ಇತರರಿಗೆ ಸಹಾಯ ಮಾಡಿದರೆ ನನಗೆ ಹೆಚ್ಚಿನ ಸಂತೋಷ ಸಿಗುತ್ತದೆ. ಇದಕ್ಕೆ ಯಾರಿಂದಲೂ ಸ್ಫೂರ್ತಿ ಹೊಂದಿಲ್ಲ" ಎಂದು ಹೇಳಿದರು.

'ಬಾಹುಬಲಿ 2' ಚಿತ್ರದ ಬಗ್ಗೆ ಸಮಂತಾ ಹೇಳಿದ್ದೇನು?

ಈ ಹಿಂದೆ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಅಭಿನಯಿಸಿದ್ದ ಸಮಂತಾ 'ಬಾಹುಬಲಿ' ಚಿತ್ರದ ಬಗ್ಗೆ ಮಾತಾಡಿ " 'ಬಾಹುಬಲಿ' ಸಿನಿಮಾ ಅಲ್ಲ. ಇದೊಂದು ರೀತಿ ದೀಪಾವಳಿ ಹಬ್ಬ ಆಚರಣೆ ಮಾಡಿದಂತೆ. ರಾಜಮೌಳಿ ಅವರ ಹಾರ್ಡ್ ವರ್ಕ್ ಮತ್ತು ಸಹನೆಯಿಂದ ಈ ಒಂದು ಮಹಾಕಾವ್ಯ ಮೂಡಿಬಂದಿದೆ' ಎಂದರು.

English summary
Tollywood Actress Samantha showed 'Baahubali 2' film to Orphaned Children for her birthday treat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada