»   » ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಒಲವನ್ನು ಬಯಲು ಮಾಡಿದ ಸಮಂತಾ

ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಒಲವನ್ನು ಬಯಲು ಮಾಡಿದ ಸಮಂತಾ

By: Suni
Subscribe to Filmibeat Kannada

ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬಹುಬೇಡಿಕೆಯುಳ್ಳ ನಟಿ ಸಮಂತಾ ರುತು ಪ್ರಭು ಅವರಿಗೆ ಬಹುದೊಡ್ಡ ಆಸೆ ಒಂದು ಇದೆಯಂತೆ. ಅದೇನಪ್ಪಾ ಅಂದ್ರೆ, ಅವರಿಗೆ ಕನ್ನಡ ಚಿತ್ರದಲ್ಲಿ ನಟಿಸಬೇಕಂತೆ.

ಹೀಗಂತ ಹೇಳಿದ್ದು ಖುದ್ದು ನಟಿ ಸಮಂತಾ ಅವರೇ, ಬೇರೆ ಯಾರೋ ಹೇಳಿದ್ರೆ ನಂಬೋದು ಸ್ವಲ್ಪ ಕಷ್ಟ ಆಗ್ತಿತ್ತೇನೋ. ಆದ್ರೆ ಸಮಂತಾ ಅವರೇ ಮಾಧ್ಯಮಕ್ಕೆ ಹೇಳಿರೋ ಕಾರಣ ಕನ್ನಡಿಗರು ನಂಬಲೇಬೇಕು.[ನಾಗಾರ್ಜುನ ಕುಟುಂಬದಲ್ಲಿ ಬರುವ ವರ್ಷ ಧಾಂ-ಧೂಂ ಮದುವೆ]

I have dream to act kannada movies says Actress Samantha Ruth

ನಟಿ ಸಮಂತಾ ರುತು ಅವರು ಆಗಸ್ಟ್ 14, 2016ರಂದು, ಬಾಹರ್ ಕೆಫೆ ಎಂಬ ರೆಸ್ಟೋರೆಂಟ್ ಒಂದನ್ನು ಉದ್ಘಾಟನೆ ಮಾಡಲು ಬೆಂಗಳೂರಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಮಾಧ್ಯಮದ ಜೊತೆ ಕೊಂಚ ಹರಟಿದ ನಟಿ ಸಮಂತಾ ಅವರು ಕನ್ನಡ ಚಿತ್ರರಂಗದ ಬಗ್ಗೆ ತಮಗಿರುವ ಒಲವನ್ನು ಬಯಲು ಮಾಡಿದರು.[ಸಮಂತಾ, ಕಾಜಲ್ ಇಲ್ಲಾಂದ್ರೆ ಕನ್ನಡ ಸಿನಿಮಾ ಹಿಟ್ ಆಗಲ್ವಾ?]

I have dream to act kannada movies says Actress Samantha Ruth

"ನನಗೆ ಕನ್ನಡ ಸಿನಿಮಾದಲ್ಲಿ ನಟಿಸುವಾಸೆ ಇದೆ. ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ. ನನಗೆ ಸೂಕ್ತವೆನಿಸುವ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ, ಆದಷ್ಟು ಬೇಗ ನನ್ನಾಸೆ ನೆರವೇರಲಿ ಅಂತ ಆಶಿಸುತ್ತೇನೆ" ಎಂದು ಟಾಲಿವುಡ್ ನಟಿ ಸಮಂತಾ ಅವರು ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ.[ರಾಕಿಂಗ್ ಸ್ಟಾರ್ ಯಶ್ ಜೊತೆ ಸಮಂತಾ ಡ್ಯುಯೆಟ್]

I have dream to act kannada movies says Actress Samantha Ruth

ಈ ಮೊದಲು ನಟಿ ಸಮಂತಾ ಅವರು ಪವನ್ ಕುಮಾರ್ ಅವರ 'ಯು-ಟರ್ನ್' ಚಿತ್ರವನ್ನು ಮೆಚ್ಚಿಕೊಂಡು ತೆಲುಗು ವರ್ಷನ್ ನಲ್ಲಿ ನಟಿಸುವ ಆಸಕ್ತಿ ತೋರಿದ್ದರು. ಇದೀಗ ಉತ್ತಮ ಅವಕಾಶ ಸಿಕ್ಕರೆ ಖಂಡಿತ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಮುದ್ದು ಮುಖದ ಚೆಲುವೆ ಸಮಂತಾ ಅಷ್ಟೇ ಮುದ್ದು-ಮುದ್ದಾಗಿ ಉಲಿದಿದ್ದಾರೆ.[ಸಮಂತಾ ಅವರ ಆಕರ್ಷಕ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ...]

English summary
I have dream to act kannada movies says South Actress Samantha Ruth Prabhu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada