ಕಿರುತೆರೆ ನಟ ಸಂಪತ್ ಜಯರಾಂ ಆತ್ಮಹತ್ಯೆ: ಟಿವಿಲೋಕದಲ್ಲಿ ಸೂತಕದ ಛಾಯೆ!
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಯುವ ನಟ ಸಂಪತ್ ಜಯರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರುತೆರೆ, ಸಿನಿಮಾ ಹಾಗೂ ಡಿಜಿಟಲ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದರು. ಇವರ ಹಠಾತ್ ಅಗಲಿಕೆಯ ಸುದ್ದಿಯಿಂದ ಕಿರುತೆರೆ ಹಾಗೂ ಸಿನಿಮಾರಂಗ ಶಾಕ್ ಆಗಿದೆ.
ಸಂಪತ್ ಜಯರಾಮ್ ಅವರ ನಿಧನನದ ಸುದ್ದಿ ತಿಳಿದು ಸ್ನೇಹಿತರು ಹಾಗೂ ಚಿತ್ರರಂಗದ ತಾರೆಯರು ಕಂಬನಿ ಮಿಡಿಯುತ್ತಿದ್ದಾರೆ. ಸಂಪತ್ ಕುಮಾರ್ ಇತ್ತೀಚೆಗೆ 'ಶ್ರೀ ಬಾಲಾಜಿ ಫೋಟೊ ಸ್ಟುಡಿಯೋ' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಹುಮುಖ್ಯ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದರು.

ನಟನೆಯ ಕನಸು ಹೊತ್ತಿದ್ದ ಸಂಪತ್ ಜಯರಾಮ್ ಇತ್ತೀಚೆಗೆ ಅವಕಾಶಗಳು ಇಲ್ಲದೆ ವಿಚಲಿತರಾಗಿದ್ದರು ಎನ್ನಲಾಗಿದೆ. ನಿನ್ನೆ (ಏಪ್ರಿಲ್ 22)ರಂದು ಸಂಪತ್ ಆತ್ಮಹತ್ಯೆಗೆ ಶರಣಾಗಿದ್ದು ಚಿತ್ರರಂಗದ ಸ್ನೇಹಿತರು ಕಂಬನಿ ಮಿಡಿಯುತ್ತಿದ್ದಾರೆ.
ಸಂಪತ್ ಜಯರಾಮ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಿದ್ದ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದರು.
35 ವರ್ಷದ ಸಂಪತ್ ಜಯರಾಮ್ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಒಂದು ವರ್ಷದ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟ ದಿಢೀರನೇ ಆತ್ಮಹತ್ಯೆಗೆ ಶರಣಾಗಿದ್ದು, ಆಪ್ತರನ್ನು ಶೋಕ ಸಾಗರದಲ್ಲಿ ಮುಳುವಂತೆ ಮಾಡಿದೆ. ಕೊಪ್ಪ ಮೂಲದವರಾಗಿದ್ದ ಸಂಪತ್ ಜಯರಾಮ್ ಅವರ ಮೃತದೇಹವನ್ನು ನೆಲಮಂಗಲದಿಂದ ಎನ್ಆರ್ ಪುರಕ್ಕೆ ರವಾನೆ ಮಾಡಲಾಗುತ್ತೆ ಎನ್ನಲಾಗಿದೆ.
ಸಂಪತ್ ಜಯರಾಮ್ ಅಗಲಿಕೆಗೆ 'ಶ್ರೀ ಬಾಲಾಜಿ ಫೋಟೊ ಸ್ಟುಡಿಯೋ'ದ ನಟ ರಾಜೇಶ್ ಧ್ರುವ ಕಂಬನಿ ಮಿಡಿದಿದ್ದಾರೆ. "ಲೋ ನಿನ್ನ ಅಗಲಿಕೆ ತಡ್ಕೊಳೋ ಶಕ್ತಿ ನಮಗಿಲ್ಲ ಮಗ. ಅದೆಷ್ಟೋ ಸಿನೆಮಾ ಮಾಡೋದಿದೆ. ಅದೆಷ್ಟೋ ಜಗಳ ಬಾಕಿ ಇದೆ. ಕಂಡ ಕನಸು ನನಸು ಮಾಡ್ಕೋಳೋಕೆ ಇನ್ನೂ ಸಾಕಷ್ಟು ಸಮಯ ಇದೆ ಲೋ.. ಇನ್ನೂ ನಿನ್ನ ದೊಡ್ಡ್ ದೊಡ್ಡ್ ಸ್ಟೇಜ್‌ನಲ್ಲಿ ನೋಡೋದ್ ಇದೆ ಕಣೋ. ಮುಚ್ಕೊಂಡು ಬಾರೋ ವಾಪಾಸ್ ಪ್ಲೀಸ್." ಎಂದು ಫೇಸ್‌ಬುಕ್‌ನಲ್ಲಿ ಸಂಪತ್ ಫೋಟೊಗಳನ್ನು ಶೇರ್ ಮಾಡಿ ರಾಜೇಶ್ ಧ್ರುವ ಕಂಬನಿ ಮಿಡಿದಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777


Click it and Unblock the Notifications











