ಸ್ಯಾಂಡಲ್‌ವುಡ್ 'ಲವ್ ಬರ್ಡ್ಸ್'ಗೆ ವಕೀಲೆಯಾದ ಸಂಯುಕ್ತ ಹೊರನಾಡು
'ಲವ್ ಮಾಕ್ಟೇಲ್' ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಆ ಸಿನಿಮಾನೇ 'ಲವ್ ಬರ್ಡ್ಸ್'. ಈ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದೆ.
ವಿಶೇಷ ಅಂದರೆ, ಈ 'ಲವ್ ಬರ್ಡ್ಸ್' ಸಿನಿಮಾದಲ್ಲಿ ನಟಿ ಸಂಯುಕ್ತ ಹೊರನಾಡು ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಪಾತ್ರದ ಫಸ್ಟ್ ಲುಕ್ ಅನ್ನು ಚಿತ್ರರಂಗ ರಿಲೀಸ್ ಮಾಡಿದೆ.

'ಲವ್ ಬರ್ಡ್' ಸಿನಿಮಾದಲ್ಲಿ ಸಂಯುಕ್ತ ಹೊರನಾಡು ದಿಟ್ಟ ವಕೀಲೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಇವರದ್ದು ಒಪ್ಪಿಕೊಂಡ ಕೇಸ್‌ಗಳಲ್ಲಿ ಜಯ ಸಾಧಿಸುವ ಯಶಸ್ವಿ ಲಾಯರ್ ಪಾತ್ರ. ಅಂದ್ಹಾಗೆ ಸಂಯುಕ್ತ ಹೊರನಾಡು ಪಾತ್ರದ ಹೆಸರು ಮಾಯಾ. ಇವರು ನಾಯಕ ಡಾರ್ಲಿಂಗ್ ಕೃಷ್ಣ ಹಾಗೂ ನಾಯಕಿ ಮಿಲನಾ ನಾಗರಾಜ್ ಗೆಳತಿ ಕೂಡ ಆಗಿದ್ದಾರೆ.
ಯಂಗ್ ಲಾಯರ್ ಪಾತ್ರದಲ್ಲಿ ಸಂಯುಕ್ತ ಹೊರನಾಡು ಕಾಣಿಸಿಕೊಂಡಿರುವುದು ಇದೇ ಮೊದಲು. ಅಲ್ಲದೇ ಇದೇ ಮೊದಲ ಬಾರಿಗೆ ಸಂಯುಕ್ತ ಹೊರನಾಡು ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ನಿರ್ದೇಶಕ ಪಿ.ಸಿ.ಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.

ನಿರ್ಮಾಪಕ ಕಮ್ ನಟ ಕಡ್ಡಿಪುಡಿ ಚಂದ್ರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 'ಲವ್ ಬರ್ಡ್ಸ್' ಸಿನಿಮಾ ಮೊದಲ ಹಾಡು ಇದೇ ಜನವರಿ 22 ರಂದು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.


Click it and Unblock the Notifications











