For Quick Alerts
  ALLOW NOTIFICATIONS  
  For Daily Alerts

  ಸಂಚಾರಿ ವಿಜಯ್ ಆರೋಗ್ಯ: ಕೈ ಚೆಲ್ಲಿದ ವೈದ್ಯರು

  |

  ನಟ ಸಂಚಾರಿ ವಿಜಯ್ ಆರೋಗ್ಯ ಪರಿಸ್ಥಿತಿ ಸುಧಾರಿಸಲಾಗದ ಹಂತ ತಲುಪಿದೆ. ಭೌತಿಕವಾಗಿ ಇನ್ನೂ ಇದ್ದಾರಾದರೂ ಚೇತರಿಕೆ ಅಸಾಧ್ಯ ಎಂದು ವೈದ್ಯರು ಹೇಳಿದ್ದಾರೆ.

  Sanchari Vijay ಬ್ರೈನ್ ಫೆಲ್ಯೂರ್ ಆಗಿದೆ ಡೆಡ್ ಆಗಿಲ್ಲ ಎಂದು ಡಾಕ್ಟರ್ ಸ್ಪಷ್ಟನೆ | Filmibeat Kannada

  ಮಾಧ್ಯಮದೊಂದಿಗೆ ಮಾತನಾಡಿರುವ ನ್ಯೂರೋ ಸರ್ಜನ್ ಅರುಣ್ ನಾಯಕ್, 'ಸಂಚಾರಿ ವಿಜಯ್ ಅವರು ಕೋಮಾ ಸ್ಥಿತಿಗೆ ಬಹಳ ಹತ್ತಿರವಾಗಿದ್ದಾರೆ. ಮೆದುಳಿಗೆ ದೊಡ್ಡ ಪೆಟ್ಟು ಬಿದ್ದಿರುವ ಕಾರಣ ಅವರ ಚೇತರಿಕೆ ಸಾಧ್ಯವಾಗುತ್ತಿಲ್ಲ. ಜೀವರಕ್ಷಕ ಸಾಧನಗಳಿಂದ ವಿಜಯ್ ಉಸಿರಾಡುತ್ತಿದ್ದಾರೆ' ಎಂದಿದ್ದಾರೆ.

  ವಿಜಯ್ ಆಸ್ಪತ್ರೆಗೆ ದಾಖಲಾಗಿ 36 ಗಂಟೆಗಳಾಗಿವೆ. ಆದರೆ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದಿರುವ ಅರುಣ್ ನಾಯಕ್, ವಿಜಯ್ ಚೇತರಿಕೆ ಅಸಾಧ್ಯವೆಂದೇ ಹೇಳಿದ್ದಾರೆ.

  ವಿಜಯ್ ಕುಟುಂಬಸ್ಥರು ಸಹ 'ಸಂಚಾರಿ ವಿಜಯ್ ಅಂಗಾಂಗಗಳನ್ನು ದಾನ ಮಾಡಲಾಗುವುದು. ಇದರಿಂದ ಅವರಿಗೆ ಶಾಂತಿ ಸಿಗಲಿದೆ' ಎಂದು ಹೇಳಿಕೆ ನೀಡಿ, ವಿಜಯ್ ಬದುಕವಹುದೇನೋ ಎಂಬ ನಿರೀಕ್ಷೆಯನ್ನು ಪೂರ್ಣವಾಗಿ ಇಲ್ಲವಾಗಿಸಿದ್ದಾರೆ.

  English summary
  Actor Sanchari Vijay is in Critical condition says Apollo Hospital Doctor in press meet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X