'ಯುದ್ಧಕಾಂಡ'ಕ್ಕಾಗಿ ಕಾರು ಸೇಲ್: ಅಪ್ಪ ಫೇವರಿಟ್ BMW ಮಾರಿದ್ದಕ್ಕೆ ಮಗಳ ಕಣ್ಣೀರು.. Viral Video

ಸ್ಯಾಂಡಲ್‌ವುಡ್ ಕೃಷ್ಣ ಅಜೇಯ್ ರಾವ್ ಸಿನಿಮಾ 'ಯುದ್ಧಕಾಂಡ ಚಾಪ್ಟರ್ 2' ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾ ಇದೇ ಏಪ್ರಿಲ್ 18ಕ್ಕೆ ಬಿಡುಗಡೆಯಾಗುತ್ತಿದೆ. ಕೆವಿಎನ್‌ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಈ ಸಿನಿಮಾದ ಮಾತುಕತೆ ಮುಗಿದಿದ್ದು ಪ್ರಚಾರವನ್ನು ಅಜೇಯ್ ರಾವ್ ಆರಂಭಿಸಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾವನ್ನು ಸ್ವತ: ಇವರೇ ನಿರ್ಮಾಣ ಮಾಡಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಯುದ್ಧಕಾಂಡ ಸಿನಿಮಾಗಾಗಿ ಮೈ ತುಂಬಾ ಸಾಲ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದರು. ಈ ಬೆನ್ನಲೇ ಅಜಯ್ ರಾವ್ ತಮ್ಮ ಫೇವರಿಟ್ ಬಿಎಂಡ್ಲ್ಯೂ ಕಾರನ್ನು ಮಾರಾಟ ಮಾಡಿದ್ದಾರೆ. ಅಪ್ಪನ ಕಾರು ಮಾರಾಟ ಆಗಿದ್ದಕ್ಕೆ ಅಜೇಯ್ ರಾವ್ ಪುತ್ರಿ ಚರೀಷ್ಮಾ ಕಣ್ಣೀರು ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Sandalwood actor Ajay Rao daughter Charishma breaks down after selling BMW car for Yuddha Kanda movie

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾವುಕರಾಗಿದ್ದಾರೆ. ನಟ ಅಜೇಯ್ ರಾವ್ ಹಾಗೂ ಪುತ್ರಿ ಚರಿಷ್ಮಾ ಅವರ ಬೆಂಬಲಕ್ಕೆ ಬಂದಿದ್ದಾರೆ. ಇಬ್ಬರನ್ನೂ ಸಂತೈಸುವ ಪ್ರಯತ್ನ ಮಾಡುತ್ತಿದ್ದಾರೆ. ವಿಡಿಯೋ ನೋಡಿ ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

'ಯುದ್ಧಕಾಂಡ' ಸಿನಿಮಾ ಇದೇ ಏಪ್ರಿಲ್ 18ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ. ಅಜೇಯ್ ರಾವ್ ಈಗಾಗಲೇ ಪ್ರಚಾರವನ್ನು ಆರಂಭಿಸಿದ್ದಾರೆ. ಅವರದ್ದೇ ನಿರ್ಮಾಣ ಆಗಿದ್ದರಿಂದ ಈ ಸಿನಿಮಾಗೆ ಸಿಕ್ಕಾಪಟ್ಟೆ ಹಣವನ್ನು ಸುರಿದಿದ್ದಾರೆ. ಸಿನಿಮಾ ನೋಡುವವರಿಗೆ ಯಾವುದೇ ರೀತಿ ಮೋಸ ಆಗಬಾರದು ಅಂತ ಅಜೇಯ್ ರಾವ್ ಒಳ್ಳೆಯ ರೀತಿಯಲ್ಲಿಯೇ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಕಾರಣಕ್ಕೆ ಅವರು ಅಂದುಕೊಂಡಿದ್ದಕ್ಕೆ ಹೆಚ್ಚು ಹಣ ಖರ್ಚಾಗಿತ್ತು.

ಅಜೇಯ್ ರಾವ್ ಈಗ ಕೊನೆಯ ಹಂತದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ತಮ್ಮ ನೆಚ್ಚಿನ BMW ಕಾರನ್ನು ಮಾರಾಟ ಮಾಡಿದ್ದಾರೆ. ಆದರೆ, ಸಿನಿಮಾಗಾಗಿ ಕಾರು ಮಾರಾಟ ಮಾಡಿದ್ದಕ್ಕಿಂತ ಹೆಚ್ಚಾಗಿ, ಅವರ ಮಗಳು ಚರೀಷ್ಮಾ ಕಣ್ಣೀರು ಹಾಕಿದ್ದು ನೆಟ್ಟಿಗರು ಭಾವುಕರಾಗುವಂತೆ ಮಾಡಿದೆ. ಈಗಾಗಲೇ ಸಿಕ್ಕಾಪಟ್ಟೆ ಹಣ ಸುರಿದಿದ್ದರಿಂದ ಅಜೇಯ್ ರಾವ್ ಪಾಲಿಗೆ ಈ ಸಿನಿಮಾ ಗೆಲ್ಲಲೇ ಬೇಕಾಗಿದೆ.

ಇತ್ತ ನೆಟ್ಟಿಗರು ಅಜೇಯ್ ರಾವ್‌ಗೆ ಕಮೆಂಟ್‌ಗಳ ಮೂಲಕ ಸಮಾಧಾನವನ್ನು ಹೇಳುತ್ತಿದ್ದಾರೆ. "ಮುಂದೊಂದು ದಿನ ಒಳ್ಳೆ ಸಮಯ ಬರುತ್ತೆ" ಅಂತ ನೆಟ್ಟಿಗರೊಬ್ಬರು ಸಮಾಧಾನ ಮಾಡಿದ್ದಾರೆ. "ನಿಜಕ್ಕೂ ಸಿಕ್ಕಾಪಟ್ಟೆ ಬೇಜಾರು ಅನಿಸುತ್ತಿದೆ" ಎಂದು ಇನ್ನೊಬ್ಬರು ಹೇಳಿದ್ದಾರೆ. "ಇದು ಕೇವಲ ಕಾರು ಅಲ್ಲ. ಇದೊಂದು ಭಾವನೆ" ಎಂದು ಹೇಳಿದ್ದಾರೆ. ಹಾಗೇ ಮತ್ತೊಬ್ಬರು "ಇಷ್ಟೆಲ್ಲ ಮಾಡಿ ಸಿನಿಮಾ ಮಾಡಬೇಕಾ? ಅಥವಾ ಇಂಥಾ ವಿಡಿಯೋ ವೈರಲ್ ಮಾಡಿ ಸಿಂಪತಿ ಗಿಟ್ಚಿಸ್ಕೋಬೇಕಾ?. ಇಲ್ಲಿ ಎಷ್ಟೇ ಒಳ್ಳೇ ಸಿನಿಮಾ ಮಾಡಿದ್ರೂ ಅಷ್ಟೇ. ಎರಡು ಮೂರು ದಿನದ ಆಟ ಇನ್ನೊಂದು ವಾರ ಮತ್ತೊಬ್ಬ ಕ್ಯೂನಲ್ಲಿ ಇರ್ತಾನೆ. ನಟನೆಗೆ ಇಲ್ಲಿ ಅವಕಾಶ ಇಲ್ಲ, ಏನೇನೋ, ಕಸರತ್ತು ಮಾಡ್ಬೇಕು. ನಾವೇ ಹೀರೋ ನಾವೇ ಪ್ರೊಡ್ಯೂಸರ್ ಆಮೇಲೆ ಈ ಪಾಡು" ಎಂದು ಬೇಸರವನ್ನು ಹೊರ ಹಾಕಿದ್ದಾರೆ.

ಅಜೇಯ್ ರಾವ್ ನಟಿಸಿದ ಸಿನಿಮಾಗಳು ಒಂದರ ಹಿಂದೊಂದು ಸೋತಿದ್ದವು. ಹೀಗಾಗಿ ಒಂದಷ್ಟು ದಿನ ಸಿನಿಮಾದಿಂದ ದೂರವೇ ಉಳಿದಿದ್ದರು. ಬಳಿಕ 'ಯುದ್ಧಕಾಂಡ' ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಅದೂ ಕೂಡ ಅಂದಿಕೊಂಡಿದ್ದಕ್ಕಿಂತ ಹೆಚ್ಚು ಸಮಯ ಹಿಡಿದಿತ್ತು. ಹೀಗಾಗಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಖರ್ಚು ಆಗಿದೆ. ಈ ಕಾರಣಕ್ಕೆ ಈ ಸಿನಿಮಾ ಗೆಲ್ಲಲೇ ಬೇಕಿದೆ.

More from Filmibeat

English summary
Sandalwood actor Ajay Rao daughter Charishma breaks down after selling BMW car for Yuddha Kanda movie
Read more about: ajay rao actor sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X