ಎಸ್ಎಸ್ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಚಿರು ಸರ್ಜಾ ಕಳುಹಿಸಿದ್ದ ಸಂದೇಶ
ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸ್ಯಾಂಡಲ್ ವುಡ್ ಸ್ಟಾರ್ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಸೋಮವಾರ (ಜೂ 8) ಮಧುಗಿರಿ ಸಮೀಪ ನಡೆಯಲಿದೆ.
Recommended Video
ಭಾನುವಾರ ಮದ್ಯಾಹ್ನ ಚಿರಂಜೀವಿಗೆ ಹೃದಯಾಘಾತವಾಗಿ, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಚಿರು ಸರ್ಜಾ ಕೊನೆಯುಸಿರುಳೆದಿದ್ದಾರೆ.
ಲಾಕ್ ಡೌನ್ ನಿಂದಾಗಿ, ಎಸ್ಎಸ್ಎಲ್ ಸಿ ಪರೀಕ್ಷೆ ಮುಂದಕ್ಕೆ ಹೋಗಿತ್ತು ಮತ್ತು ಪಿಯುಸಿಯ ಒಂದು ಪರೀಕ್ಷೆ ಬಾಕಿ ಉಳಿದಿತ್ತು. ಲಾಕ್ ಡೌನ್ ಸಡಿಲಗೊಂಡ ನಂತರ, ಪರೀಕ್ಷಾ ದಿನಾಂಕ ಘೋಷಣೆಯಾಗಿತ್ತು.
ಪರೀಕ್ಷಾ ದಿನಾಂಕ ಘೋಷಣೆಯಾದ ನಂತರ, ವಿದ್ಯಾರ್ಥಿಗಳಿಗೆ ಮನಸ್ಥೈರ್ಯ ತುಂಬುವ ಪೋಸ್ಟ್ ಅನ್ನು ಚಿರಂಜೀವಿ ಸರ್ಜಾ, ಸಾಮಾಜಿಕ ತಾಣದಲ್ಲಿ ಹಾಕಿದ್ದರು. ಅದು ಹೀಗಿದೆ:

ಚಿರಂಜೀವಿ ಸರ್ಜಾ ಅವರ ಮೃತದೇಹ
ಸದ್ಯ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಅವರ ಮೃತದೇಹವಿದೆ. ಕೊರೊನಾ ಪರೀಕ್ಷೆಯ ನಂತರ ಕುಟುಂಬಕ್ಕೆ ಅವರ ಪಾರ್ಥಿವ ಶರೀರ ಹಸ್ತಾಂತರವಾಗಲಿದೆ. ಚಿರು ಅವರ ಮಾವ ಅರ್ಜುನ್ ಸರ್ಜಾ, ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದಾರೆ.

ಕೊರೊನಾದಿಂದ ಇಡೀ ಪ್ರಪಂಚವೇ ನಲುಗಿ ಹೋಗುತ್ತಿದೆ
ಚಿರು ವಿದ್ಯಾರ್ಥಿಗಳಿಗೆ ಕಳುಹಿಸಿದ್ದ ಸಂದೇಶ ಹೀಗಿತ್ತು,"ಕೊರೊನಾದಿಂದ ಇಡೀ ಪ್ರಪಂಚವೇ ನಲುಗಿ ಹೋಗುತ್ತಿದೆ ವಿದ್ಯಾರ್ಥಿಗಳೇ, ಆದರೆ ಯಾವುದೇ ಭಯ, ಆತಂಕ ಬೇಡ. ವಿದ್ಯಾರ್ಥಿಗಳೇ ದೇಶದ ಆಧಾರ ಸ್ಥಂಭಗಳು".

ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಈಗ ಸತ್ಯವಾಗಿದೆ
"ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಈಗ ಸತ್ಯವಾಗಿದೆ. ಮನೆಯಲ್ಲಿ ಇದ್ದುಕೊಂಡು, ಚೆನ್ನಾಗಿ ಓದಿ, ಪರೀಕ್ಷೆಗೆ ಸಿದ್ದರಾಗಿ, ನಿಮ್ಮೊಂದಿಗೆ ಇಡೀ ದೇಶವೇ ಕೈಜೋಡಿಸುತ್ತದೆ. ಜೈ ಆಂಜನೇಯ"ಇದು ಚಿರಂಜೀವಿ ಸರ್ಜಾ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಾಕಿದ್ದ ಪೋಸ್ಟ್.

ಚಿರಂಜೀವಿ ಅವರ ಇಡೀ ಕುಟುಂಬವಿದೆ
ಸದ್ಯ ಅಪೋಲೊ ಆಸ್ಪತ್ರೆಯಲ್ಲಿ ಚಿರಂಜೀವಿ ಅವರ ಇಡೀ ಕುಟುಂಬವಿದೆ. ಜೊತೆಗೆ ಸ್ಯಾಂಡಲ್ ವುಡ್ ಕಲಾವಿದರಾದ, ತಾರಾ, ನಿರ್ಮಾಪಕ ಕೆ ಮಂಜು, ಕಿಚ್ಚ ಸುದೀಪ್, ದರ್ಶನ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಸೇರಿದಂತೆ ಅನೇಕರು ಆಸ್ಪತ್ರೆಯಲ್ಲಿ ಬೀಡುಬಿಟ್ಟಿದ್ದಾರೆ.


Click it and Unblock the Notifications











