Kichcha Sudeepa: ಏಪ್ರಿಲ್ 16ಕ್ಕೆ 'ಬಿಲ್ಲ ರಂಗ ಬಾಷಾ' ಬಿಗ್ ಅನೌನ್ಸ್‌ಮೆಂಟ್; ವೇಟ್ ಮಾಡಿ ಎಂದ ಕಿಚ್ಚ
ಕಿಚ್ಚ ಸುದೀಪ್ (Kichcha Sudeepa)ನಟನೆಯ 'ಮ್ಯಾಕ್ಸ್' (Max) ಕನ್ನಡಕ್ಕೆ ಸಿಕ್ಕಿದ ಕೊನೆಯ ಬ್ಲಾಕ್ ಬಸ್ಟರ್ ಸಿನಿಮಾ. ಅದೂ ಕಳೆದ ವರ್ಷ ಕೊನೆಯಲ್ಲಿ ರಿಲೀಸ್ ಆಗಿತ್ತು. ಅಲ್ಲಿಂದ ಇಲ್ಲಿವರೆಗೂ ಸೂಪರ್ ಸ್ಟಾರ್ ಸಿನಿಮಾ ರಿಲೀಸ್ ಆಗಲಿ ಅಂತ ಕನ್ನಡಿಗರು ಎದುರು ನೋಡುತ್ತಲೇ ಇದ್ದಾರೆ. ಈ ಗ್ಯಾಪ್‌ನಲ್ಲಿ ಕಿಚ್ಚ ಸುದೀಪ್ ಹೊಸ ಸಿನಿಮಾ 'ಬಿಲ್ಲ ರಂಗ ಬಾಷಾ' (Billa Ranga Baashaa)ಅನೌನ್ಸ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಹೊಸ ಸಿನಿಮಾ 'ಬಿಲ್ಲ ರಂಗ ಬಾಷಾ' ಶೂಟಿಂಗ್ ಯಾವಾಗ ಶುರುವಾಗುತ್ತೆ ಅನ್ನೋ ಸುಳಿವು ಸಿಕ್ಕಿರಲಿಲ್ಲ. ಈಗ ಬಿಗ್ ಅಪ್‌ಡೇಟ್ ಕೊಡುತ್ತೇವೆ ವೇಟ್ ಅಂತಿದ್ದಾರೆ. ಅಂದ್ಹಾಗೇ ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಬಿಲ್ಲ ರಂಗ ಬಾಷಾ' ಇದೇ ಏಪ್ರಿಲ್ 16ರಿಂದ ಅದ್ಧೂರಿಯಾಗಿ ಚಿತ್ರೀಕರಣ ಆರಂಭ ಆಗುತ್ತಿದೆ. ಹಾಗಂತ ಇದನ್ನೇ ಬಿಗ್ ಅಪ್‌ಡೇಟ್ ಅಂದ್ಕೊಳ್ಬೇಡಿ. ಮ್ಯಾಟರ್ ಬೇರೆನೇ ಇದೆ.

'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಮತ್ತೆ ಜೊತೆಯಾಗಿದ್ದಾರೆ. 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಈಗ 'ಬಿಲ್ಲ ರಂಗ ಬಾಷಾ' ಕೂಡ ಅಷ್ಟೇ ಸದ್ದು ಮಾಡುತ್ತಾ? ಕುತೂಹಲವನ್ನು ಹುಟ್ಟಾಕಿದೆ. ಇಷ್ಟೊತ್ತಿಗಾಗಲೇ ಶೂಟಿಂಗ್ ಶುರುವಾಗಬೇಕಿತ್ತು. ಕೊಂಚ ತಡವಾಗಿ ಆರಂಭ ಆಗುತ್ತಿದ್ದರೂ, ಬಿಲ್ಲ ರಂಗ ಬಾಷಾ ಬ್ಯಾಂಗ್ ಆಗಿ ಸ್ಟಾರ್ಟ್ ಆಗುತ್ತೆ ಅನ್ನೋ ನಿರೀಕ್ಷೆಯಿದೆ.
ಏಪ್ರಿಲ್ 16ಕ್ಕೆ 'ಬಿಲ್ಲ ರಂಗ ಬಾಷಾ'
ಸ್ವತ: ಕಿಚ್ಚ ಸುದೀಪ್ 'ಬಿಲ್ಲ ರಂಗ ಬಾಷಾ' ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಕೊಡುವುದಾಗಿ ಅನೌನ್ಸ್ ಮಾಡಿದ್ದಾರೆ. ಏಪ್ರಿಲ್ 16ರಂದು ಈ ಸಿನಿಮಾ ಅದ್ಧೂರಿಯಾಗಿ ಶೂಟಿಂಗ್ ಅನ್ನು ಆರಂಭ ಮಾಡುತ್ತಿದೆ. ಹೀಗಾಗಿ ಸಂಪೂರ್ಣವಾಗಿ ಸಿದ್ಧತೆಗಳನ್ನು ಮಾಡಿಕೊಂಡು ಶೂಟಿಂಗ್‌ಗೆ ಸಜ್ಜಾಗುತ್ತಿದ್ದಾರೆ. ಹಾಗೇ ಏಪ್ರಿಲ್ 16ಕ್ಕೆ ಬಿಗ್ ಅನೌನ್ಸ್‌ಮೆಂಟ್ ಇದೆ. ಅಲ್ಲಿವರೆಗೂ ವೇಟ್ ಮಾಡಿ ಎಂದು ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಏಪ್ರಿಲ್ 16 ರಂದು ಕಿಚ್ಚ ಸುದೀಪ್ ತಮ್ಮ ಸಿನಿಮಾ 'ಬಿಲ್ಲ ರಂಗ ಬಾಷಾ'ದ ಸೆಟ್, ಸ್ಟಾರ್ ಕಾಸ್ಟ್ ಹಾಗೂ ಟೀಮ್ ಅನ್ನು ಪರಿಚಯಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಇನ್ನೊಂದು ವಾರದಲ್ಲಿ ಕಿಚ್ಚ ಹಾಗೂ ಅನೂಪ್ ಭಂಡಾರಿ ಸಿನಿಮಾದ ಅಪ್‌ಡೇಟ್ ಸಿಗುತ್ತೆ. ಈಗಾಗಲೇ ಈ ಸಿನಿಮಾ ಅನೌನ್ಸ್ ಮೆಂಟ್ ಅನ್ನು ವಿಶಿಷ್ಟವಾಗಿ ಮಾಡಿರುವ ತಂಡ ಶೂಟಿಂಗ್ ಆರಂಭ ಅನ್ನೋದನ್ನು ಅಷ್ಟೇ ಕ್ರಿಯೇಟಿವ್ ಆಗಿ ಮಾಡಿರುತ್ತೆ ಅನ್ನೋದನ್ನು ಎದುರು ನೋಡಲಾಗುತ್ತಿದೆ.
ಸೆಟ್ಟಿನಲ್ಲೇ ಕಿಚ್ಚ ಟೆಂಟ್?
ಇನ್ನು 'ಬಿಲ್ಲ ರಂಗ ಬಾಷಾ' ಶೂಟಿಂಗ್‌ಗೆ ಸಕಲ ಸಿದ್ಧತೆಗಳು ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ಬಗ್ಗೆ ಒಂದು ಸುದ್ದಿ ಓಡಾಡಿತ್ತು. ಈ ಸಿನಿಮಾಗಾಗಿ ಸುದೀಪ್ ಸೆಟ್ಟಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಅಲ್ಲಿಯೇ ಅವರಿಗಾಗಿ ಸಕಲ ಸಿದ್ಧತೆಗಳು ಇರುವ ಒಂದು ಮನೆಯನ್ನು ಕಟ್ಟಿಕೊಡಲಾಗಿದ್ದು, ಶೂಟಿಂಗ್ ಮುಗಿದ ಬಳಿಕ ಕಿಚ್ಚ ಸುದೀಪ್ ಮನೆಗೆ ಬರುವುದಿಲ್ಲ. ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ ಅಂತಾನೂ ಹೇಳಲಾಗುತ್ತಿದೆ.
ಈ ಸುದ್ದಿ ಕೇವಲ ಸಿನಿಮಾ ಮಂದಿಯಲ್ಲಿ ಬಾರಿಯಲ್ಲಿ ಹರಿದಾಡುತ್ತಿರುವ ಸಂಗತಿ ಅಷ್ಟೇ. ಆದರೆ, ಏಪ್ರಿಲ್ 16ರಂದು ಈ ಬಗ್ಗೆನೂ ರಿವೀಲ್ ಆಗುವ ಸಾಧ್ಯತೆಯಿದೆ. ಇನ್ನೊಂದು ಕಡೆ 'ವಿಕ್ರಾಂತ್ ರೋಣ'ದಂತೆ 'ಬಿಲ್ಲ ರಂಗ ಬಾಷಾ' ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಾ? ಸಿನಿಮಾ ಬಜೆಟ್ ಏನು? ಕಥೆಯೇನು? ಅನ್ನೋದು ಮುಂದಿನ ದಿನಗಳಲ್ಲಿ ಸ್ವತ: ಕಿಚ್ಚ ಸುದೀಪ್ ಇಲ್ಲವೇ ಚಿತ್ರತಂಡ ರಿವೀಲ್ ಮಾಡುವ ಸಾಧ್ಯತೆಯಿದೆ.


Click it and Unblock the Notifications











