ಸ್ಯಾಂಡಲ್‌ವುಡ್ ಜೋಡಿ ಹರಿಪ್ರಿಯಾ, ವಸಿಷ್ಠ ಸಿಂಹ ಅದ್ಧೂರಿ ಆರತಕ್ಷತೆ
ಸ್ಯಾಂಡಲ್‌ವುಡ್‌ನ ಬ್ಯೂಟಿಫುಲ್ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿ ಆಪ್ತರು ಹಾಗೂ ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ದಂಪತಿಗಳಾಗಿದ್ದಾರೆ.
ಮೊದಲೇ ಮಾಹಿತಿ ನೀಡಿದಂತೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಸ್ಯಾಂಡಲ್‌ವುಡ್‌ನ ಸ್ನೇಹಿತರಿಗೆ ಹಾಗೂ ಗಣ್ಯರಿಗೆ ಆರತಕ್ಷತೆಯನ್ನು ನೀಡಿದ್ದಾರೆ. ಬೆಂಗಳೂರಿನ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ಆರತಕ್ಷತೆಯನ್ನು ಹಮ್ಮಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನ ಗಣ್ಯರು ಆಗಮಿಸಿ ನವ ಜೋಡಿಗೆ ಶುಭಕೋರಿದ್ದಾರೆ.
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಆರತಕ್ಷತೆಗೆ ಸ್ಯಾಂಡಲ್‌ವುಡ್‌ನ ಗಣ್ಯರು ಆಗಮಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ನಟ ಶರಣ್, ಅಭಿಷೇಕ್ ಅಂಬರೀಶ್, ನಟಿ ಶ್ರುತಿ, ನಟಿ ಮಾಳವಿಕಾ ಹಾಗೂ ಪತಿ ಅವಿನಾಶ್, ಹಿರಿಯ ನಟ ಶ್ರೀನಾಥ್ ದಂಪತಿ, ನಟಿ ಅಮೂಲ್ಯ ಹಾಗೂ ಪತಿ ಜಗದೀಶ್, ರಿಷಬ್ ಶೆಟ್ಟಿ ದಂಪತಿ, ಉಪೇಂದ್ರ ದಂಪತಿ, ಸೃಜನ್ ಲೋಕೇಶ್ ಸೇರಿದಂತೆ ಗಣ್ಯರು ಆಗಮಿಸಿ, ಶುಭ ಕೋರಿದ್ದಾರೆ.

ಶುಭ ಕೋರಿದ ಗಣೇಶ್
" ಸಿಂಹ ಪ್ರಿಯ ಅಂತ ಹೆಸರು ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಇಬ್ಬರಿಗೂ ಆಲ್ ದಿ ಬೆಸ್ಟ್. ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ಒಬ್ಬರಿಗೊಬ್ಬರು ಪರಿಚಯ. ಅವರ ಬದುಕು, ಅವರ ಸಂಸಾರ ಆನಂದವಾಗಿರಲಿ. ನನ್ನ ಕಡೆಯಿಂದ ಅಲ್ ದಿ ಬೆಸ್ಟ್." ಎಂದು ಗೋಲ್ಡನ್ ಸ್ಟಾರ್ ಗಣೇಶ್ ಶುಭ ಹಾರೈಸಿದ್ದಾರೆ.

'ಮುದ್ದಾದ ಜೋಡಿಗೆ ಒಳ್ಳೆಯದಾಗಲಿ' – ಶರಣ್
"ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರದ್ದೂ ಮುದ್ದಾದ ಜೋಡಿ. ತುಂಬಾ ದೊಡ್ಡ ಹೆಸರು ಮಾಡಿದಂತಹ ಸ್ಟಾರ್‌ಗಳು. ನಿಜ ಜೀವನದಲ್ಲಿ ಸಂಗಾತಿಗಳಾಗುತ್ತಿದ್ದಾರೆ. ಕನ್ನಡ ಚಿತ್ರರಂಗದ ಕಲಾವಿದನಾಗಿ, ಸ್ನೇಹಿತನಾಗಿ, ನನಗೆ ಖುಷಿಯಾಗುತ್ತಿದೆ. ನನ್ನ ಮನೆಯಲ್ಲಿ ನಡೆಯುತ್ತಿದೆಯೇನೋ ಅನ್ನುವಷ್ಟು ಖುಷಿ ಕೊಟ್ಟಿರುವಂತಹದ್ದು. ಇಡೀ ಇಂಡಸ್ಟ್ರೀ ಬಂದಿರೋದು ನೋಡಿದ್ರೆ, ಅವರು ಎಷ್ಟು ಜನರನ್ನು ಗೆದ್ದಿದ್ದಾರೆ ಅನ್ನೋದು ಗೊತ್ತಾಗುತ್ತೆ. ದೇವರು ಅವರಿಗೆ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ." ಎಂದು ಶರಣ್ ಹೇಳಿದ್ದಾರೆ.

ಎಲ್ಲಾ ರೀತಿಯಿಂದಲೂ ಒಳ್ಳೆಯದಾಗಲಿ– ಉಪೇಂದ್ರ
"ನಮ್ಮ ಹರಿಪ್ರಿಯ ಅವರು ವಸಿಷ್ಠ ಸಿಂಹ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದಾಗಲಿ. 100 ವರ್ಷ ಇದೇ ರೀತಿ ಸಂತೋಷವಾಗಿ ಜೀವನ ನಡೆಸಲಿ ಒಳ್ಳೆಯದಾಗಲಿ." ಎಂದು ಉಪೇಂದ್ರ ಹಾರೈಸಿದ್ದಾರೆ.

ಇಬ್ಬರಿಗೂ ದೇವರು ಒಳ್ಳೆಯದು ಮಾಡಲಿ– ರಿಷಬ್ ಶೆಟ್ಟಿ
" ಸಿಂಹಪ್ರಿಯ ಅವರಿಗೆ ಮದುವೆಯ ಹಾರ್ದಿಕ ಶುಭಾಶಯಗಳು. ಅವರಿಬ್ಬರಿಗೂ ದೇವರು ಒಳ್ಳೆಯದು ಮಾಡಲಿ ಎಂದು ವಿಶ್ ಮಾಡಿದ್ದೀವಿ. ಬಹಳ ಸಂಭ್ರಮದ ಒಂದು ಸಂದರ್ಭ. ನನ್ನ ಮೊದಲ ನಿರ್ದೇಶನದ ನಟಿ. ಮೊದಲು ನಾಯಕನಾಗಿ ನಟಿಸಿದ ಸಿನಿಮಾದ ನಟಿ ಕೂಡ ಅವರು. ನಮ್ಮ ಪ್ರೊಡಕ್ಷನ್‌ನಲ್ಲಿ ಮಾಡಿದ ಕಥಾಸಂಗಮದಲ್ಲಿ ನಟಿಸಿದ್ದರು. ತುಂಬಾ ವರ್ಷದ ಸ್ನೇಹಿತೆ. ತುಂಬಾ ವರ್ಷಗಳ ಸ್ನೇಹಿತೆ, ವಸಿಷ್ಠ ಹಲವು ವರ್ಷಗಳ ಸ್ನೇಹಿತ. ಇಬ್ಬರು ಸ್ನೇಹಿತರ ಮದುವೆ ಹಾಗಾಗಿ ಬಂದು ವಿಶ್ ಮಾಡಿದ್ದೇವೆ." ಎಂದು ರಿಷಬ್ ಶೆಟ್ಟಿ ನವದಂಪತಿಗೆ ಹೇಳಿದ್ದಾರೆ.


Click it and Unblock the Notifications











