For Quick Alerts
  ALLOW NOTIFICATIONS  
  For Daily Alerts

  ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್‌ನಲ್ಲಿ ಕನ್ನಡತಿ ಇತಿ ಆಚಾರ್ಯ!

  |

  ಸ್ಯಾಂಡಲ್‌ವುಡ್ ನಟಿ ಇತಿ ಆಚಾರ್ಯ ಕನ್ನಡಿಗರು ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಇತಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್‌ ಅಭಿನಯದ 'ಕವಚ' ಸಿನಿಮಾದಲ್ಲಿ ನಟಿಸಿದ್ದರು. ಇಲ್ಲಿವರೆಗೂ ಕನ್ನಡ ನಟಿಯರು ಯಾರೂ ಮಾಡಿರದ ಸಾಧನೆಯೊಂದನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

  ಕನ್ನಡ ಸಿನಿಮಾಗಳಲ್ಲಿ ನಟಿಸಿರೋ ಇತಿ ಆಚಾರ್ಯ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್‌ನಲ್ಲಿ ಕಾಣಿಸಿಕೊಂಡ ಮೊದಲ ಸ್ಯಾಂಡಲ್‌ವುಡ್ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

  ಕನ್ನಡಕ್ಕಿಂತ ತಮಿಳಿನಲ್ಲಿಯೇ ರಾಗಿಣಿ ಬ್ಯುಸಿ: ಸ್ಯಾಂಡಲ್‌ವುಡ್ ಬಗ್ಗೆ ಏನಂತಾರೆ ತುಪ್ಪದ ಬೆಡಗಿ? ಕನ್ನಡಕ್ಕಿಂತ ತಮಿಳಿನಲ್ಲಿಯೇ ರಾಗಿಣಿ ಬ್ಯುಸಿ: ಸ್ಯಾಂಡಲ್‌ವುಡ್ ಬಗ್ಗೆ ಏನಂತಾರೆ ತುಪ್ಪದ ಬೆಡಗಿ?

  ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ನ್ಯೂಯಾರ್ಕ್ ಫ್ಯಾಶನ್ ವೀಕ್ ನಡೆದಿತ್ತು. ಈ ಫ್ಯಾಷನ್ ವೀಕ್‌ನಲ್ಲಿ ಭಾರತ ಮೂಲದ ಫ್ಯಾಶನ್ ಡಿಸೈನರ್ ಡಿಸೈನ್ ಮಾಡಿದ ಡ್ರೆಸ್ ಅನ್ನು ಇತಿ ಶೋ ಕೇಸ್ ಮಾಡಿದ್ದರು. ಆ ಘಳಿಗೆಯನ್ನು ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ತನ್ನ ಹೋಲ್ಡಿಂಗ್ಸ್‌ನಲ್ಲಿ ಹಾಕಿದೆ. ಈ ಮೂಲಕ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ನಟಿಯನ್ನು ಬಿಂಬಿಸಿದೆ.

  ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಅಂತರಾಷ್ಟ್ರೀಯ ವೇದಿಕೆಯಾಗಿದೆ. ಈ ವೇದಿಕೆಯಲ್ಲಿ ಸಾಮಾನ್ಯವಾಗಿ ಬಾಲಿವುಡ್ ತಾರೆಯರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಈ ಹೋಲ್ಡಿಂಗ್ಸ್‌ನಲ್ಲೀಗ ಕನ್ನಡದ ನಟಿಯೊಬ್ಬರು ಮಿಂಚಿದ್ದು ಇದೇ ಮೊದಲು. "ಅಂತರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಕನ್ನಡ ಚಿತ್ರರಂಗ ಹಾಗೂ ದೇಶವನ್ನು ಪ್ರತಿನಿಧಿಸಿದ್ದು ಹರುಷ ತಂದಿದೆ" ಎಂದು ಇತಿ ಆಚಾರ್ಯ ಹೇಳಿಕೆ ನೀಡಿದ್ದಾರೆ.

  ಇತಿ ಆಚಾರ್ಯ ಕ್ಯಾನಿಸ್ ಫಿಲ್ಮಂ ಫೆಸ್ಟ್ ರೆಡ್ ಕಾರ್ಪೆಟ್‌ನಲ್ಲೂ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದರು. ಇದೀಗ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್‌ನಲ್ಲಿ ಕಾಣಿಸಿಕೊಂಡು ಕನ್ನಡಿಗರ ಗಮನ ಸೆಳೆದಿದ್ದಾರೆ. ಇತಿ ಆಚಾರ್ಯ ಒಂದೇ ವರ್ಷದಲ್ಲಿ ಎರಡೆರಡು ಅಂತರಾಷ್ಟ್ರೀಯ ವೇದಿಕೆ ಸಾಧನೆ ಮಾಡಿದಂತಾಗಿದೆ.

  Sandalwood Actress Iti Acharya Showcase in New York Times Square Bill Board

  ಇತಿ ಆಚಾರ್ಯ ನಟಿ ಹಾಗೂ ಮಾಡೆಲ್ ಕೂಡ ಹೌದು. 2016ರಲ್ಲಿ ಮಿಸ್ ಸೌತ್ ಇಂಡಿಯಾ ವಿನ್ನರ್ ಕೂಡ ಆಗಿದ್ದರು. ಹಾಗಂತ ಕೇವಲ ನಟಿ, ಮಾಡಲ್ ಅಷ್ಟೇ ಅಲ್ಲ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಇತಿ ಆಚಾರ್ಯ ಹೀರೊಯಿನ್ ಆಗಿ ನಟಿಸಿರುವ ಕನ್ನಡ ಸಿನಿಮಾ 'ಲಕ್ಷ್ಮೀಪುತ್ರ' ಬಿಡುಗಡೆಯಾಗಬೇಕಿದೆ. ಕೇವಲ ಕನ್ನಡ ಅಷ್ಟೇ ಅಲ್ಲದೆ. ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ. ಈಗ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್‌ನಲ್ಲಿ ಕಾಣಿಸಿಕೊಂಡು ಸಾಧನೆ ಮಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

  English summary
  Sandalwood Actress Iti Acharya Showcase in New York Times Square Bill Board, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X