ರಾಧಿಕಾ ಪಂಡಿತ್ ಹುಟ್ಟುಹಬ್ಬವನ್ನ ರಾಕಿಂಗ್ ಸ್ಟಾರ್ ಆಚರಿಸಿದ್ದು ಹೀಗೆ..!

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್. ಪ್ರೀತಿಯ ಬಲೆಯಲ್ಲಿ ಬಿದ್ದು ವರ್ಷ ಅಲ್ಲ, ಹೆಚ್ಚು ಕಡಿಮೆ ಒಂದೂವರೆ ದಶಕವಾದರೂ ಇಬ್ಬರಲ್ಲಿಯೂ ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಒಬ್ಬರಿಗೊಬ್ಬರು ನೆರಳಾಗಿ- ಹೆಗಲಾಗಿ.. ಗಂಡ-ಹೆಂಡತಿ ಅಂದರೆ ಹೀಗಿರಬೇಕು ಎಂಬಂತೆ ಬದುಕುತ್ತಿರುವ ಈ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಇತ್ತೀಚೆಗೆ ಸಂಭ್ರಮದ ಅಲೆಯಲ್ಲಿ ತೇಲಿದ್ದಾರೆ.

ಹೌದು, ನಿಮಗೆ ನೆನಪಿದ್ದರೆ, ಮಾರ್ಚ್ 07 ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ. ರಾಧಿಕಾ ಚಂದನವನದ ಸಿಂಡ್ರೇಲಾ. ತನ್ನದೇ ಆದ ಅಭಿಮಾನಿ ಬಳಗವನ್ನ ಹೊಂದಿರುವ ನಟಿ. ಸಹಜವಾಗಿ ಅವತ್ತು ಕೂಡ ಅಂದರೆ ಮೊನ್ನೆಯ ಬರ್ತ್ ಡೇಯಂದು ಅಭಿಮಾನದ ಭೇಟಿ ನಡೆದಿತ್ತು. ಆದರೆ ಇದೇ ಸಮಯದಲ್ಲಿ ಇನ್ನೊಂದು ಬದಿಯಲ್ಲಿ ಪ್ರೀತಿಯ ಸರ್ ಪ್ರೈಸ್ ಕಾಯುತ್ತಿತ್ತು. ಆ ಸುಂದರ ಕ್ಷಣಗಳನ್ನ ರಾಧಿಕಾ ಪಂಡಿತ್ ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

Sandalwood Actress Radhika Pandit Shares Birthday Video

ಕಡಲ ತೀರದಲ್ಲಿ ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬವನ್ನ ರಾಕಿಂಗ್ ಸ್ಟಾರ್ ಯಶ್ ಆಚರಿಸಿದ್ದಾರೆ. ಕುಟುಂಬ ವರ್ಗ ಹಾಗೂ ಸ್ನೇಹಿತರ ಜೊತೆ ಒಂದು ಸುತ್ತು ಕೇಕ್ ಕಟ್ ಮಾಡಿ ಸಂಭ್ರಮಿಸಿರುವ ಇಬ್ಬರು ಆ ನಂತರ ಲೈಟ್ ಬಣ್ಣದ ಡ್ರೆಸ್‌ನಲ್ಲಿ ಮತ್ತೊಂದು ಸುತ್ತು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

ಇನ್ನೂ ವಿಡಿಯೋದಲ್ಲಿ ಯಶ್‌ ಅವರನ್ನ ಅಪ್ಪಿಕೊಂಡು ರಾಧಿಕಾ ನಗುತ್ತಿರುವ ಪೋಸ್ ಅಭಿಮಾನಿಗಳ ಗಮನ ಸೆಳೆದಿದೆ. ಇನ್ನೂ ಈ ಸುಂದರ ಚಿತ್ರಣದ ಜೊತೆ ನನ್ನ ಜೀವನದಲ್ಲಿ ಇಂತಹ ವ್ಯಕ್ತಿಗಳನ್ನು ಪಡೆದಿರೋದು ನನಗೆ ಸಿಕ್ಕ ಆಶೀರ್ವಾದ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

ಅಂದ್ಹಾಗೇ ಯಶ್ ಸದ್ಯಕ್ಕೆ ಟಾಕ್ಸಿಕ್ ಚಿತ್ರದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ. ಅದಕ್ಕಾಗಿಯೇ ಗೋವಾದಲ್ಲಿ ಬಿಡಾರ ಹೂಡಿದ್ದಾರೆ. ಇನ್ನೂ ಗೋವಾ ರಾಧಿಕಾ ಪಂಡಿತ್ ತಾಯಿಯ ಊರು. ಇನ್ನೂ ಇಬ್ಬರು ನಿಶ್ಚಿತಾರ್ಥ ಸಮಾರಂಭಕ್ಕೆ ಸಾಕ್ಷಿಯಾಗಿದ್ದು ಕೂಡ ಇದೇ ಗೋವಾ. ಹೀಗಾಗಿ ರಾಧಿಕಾ ಪಂಡಿತ್ ಅವರ ಈ ಜನ್ಮದಿನದ ಸಂಭ್ರಮ ಕಳೆಗಟ್ಟಿದ್ದು ಗೋವಾದಲ್ಲಿಯೇ ಅನ್ನುವುದು ವಿಡಿಯೋ ನೋಡಿದರೆ ನಿಮಗೆ ಈಗಾಗಲೇ ಗೊತ್ತಾಗಿರಬೇಕು.

ಮಿಕ್ಕಂತೆ ರಾಧಿಕಾ ಪಂಡಿತ್ ಮತ್ತೆ ಮರಳಿ ಚಿತ್ರರಂಗಕ್ಕೆ ಬರಬೇಕು ಎಂಬ ಆಶಯ ಅವರ ಅಭಿಮಾನಿಗಳಲ್ಲಿದೆ. ರಾಧಿಕಾ ಪಂಡಿತ್ ಅವರಲ್ಲಿಯೂ ಕೂಡ ಈ ಆಸೆ ಇದ್ದೇ ಇರುತ್ತೆ. ಆದರೆ ಇಷ್ಟು ದಿನ ರಾಧಿಕಾ ಮನೆ..ಮಕ್ಕಳು..ಗಂಡ..ಸಂಸಾರವೆಂದು ಬ್ಯುಸಿಯಾಗಿದ್ದರು. ಹೀಗಾಗಿ ಕಾಲ ಕೂಡಿ ಬರಲಿಲ್ಲ. ಆ ಕಾಲ ಯಾವತ್ತು ಕೂಡಿ ಬರುತ್ತೆ ಅನ್ನುವ ಪ್ರಶ್ನೆ ಸದ್ಯಕ್ಕೆ ಇವರ ಅಸಂಖ್ಯಾತ ಅಭಿಮಾನಿಗಳನ್ನ ಕಾಡುತ್ತಿದೆ.

ಏನೇ ಇರಲಿ ತಮ್ಮ ಅಭಿನಯದಿಂದ ಅಭಿಮಾನಿ ಬಳಗವನ್ನ ಸಂಪಾದಿಸಿದ ರಾಧಿಕಾ ಪಂಡಿತ್, ಆದಷ್ಟು ಬೇಗ ಕನ್ನಡ ಚಿತ್ರರಂಗಕ್ಕೆ ಮರಳಲಿ, ಇನ್ನೂ ಹತ್ತು ಹಲವು ಪಾತ್ರಗಳನ್ನ ಮಾಡುವ ಮೂಲಕ ಅಭಿಮಾನಿಗಳ ಹೃದಯವನ್ನ ಗೆಲ್ಲಲಿ ಅನ್ನುವುದೇ ಅನೇಕರ ಆಶಯ.

More from Filmibeat

English summary
Radhika Pandit, Who Celebrated Her Birthday On March 7 Shares a Glimpse Of Her Birthday Celebrations
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X