ನಟಿ ಕಾವ್ಯಾ ಶಾ ಮದುವೆಯಲ್ಲಿ ಮಿಂಚಿದ ಮೋಹಕ ತಾರೆ: ಅಪ್ಪು ಅಭಿಮಾನಿ ಜೊತೆ ಸ್ಪೆಲ್ಫಿ!
ಒಂದು ಕಾಲದಲ್ಲಿ ಮೋಹಕತಾರೆ ರಮ್ಯಾ ಯಾರ ಕೈಗೂ ಸಿಗುತ್ತಿರಲಿಲ್ಲ. ಇನ್ನೇನು ರಮ್ಯಾ ಸ್ಯಾಂಡಲ್‌ವುಡ್‌ನಿಂದ ದೂರ ಹೋಗಿಯೇ ಬಿಟ್ಟರು ಅಂತ ನಿರಾಶೆ ಆದವರು ಅದೆಷ್ಟೋ ಮಂದಿ. ಆದ್ರೀಗ ಕಾಲ ಬದಲಾಗಿದೆ. ಕಳೆದ ಕೆಲವು ದಿನಗಳಿಂದ ರಮ್ಯಾ ಫುಲ್ ಆಕ್ಟಿವ್ ಆಗಿದ್ದಾರೆ.
ಸ್ಯಾಂಡಲ್‌ವುಡ್ ಮಂದಿಯೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಸಿನಿಮಾಗಳನ್ನು ನೋಡುತ್ತಿದ್ದಾರೆ. ಸೆಲೆಬ್ರೆಟಿಗಳ ಮದುವೆ, ಸೀಮಂತ ಕಾರ್ಯಕ್ರಮದಲ್ಲಿ ರಮ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ಇದು ರಮ್ಯಾ ಅಭಿಮಾನಿಗಳಿಗೆ ತುಂಬಾನೇ ಖುಷಿ ಕೊಟ್ಟಿದೆ.
ರಮ್ಯಾ ಇಂದು ( ಜೂನ್ 9) ಎರಡೆರಡು ವಿಷಯಗಳಿಗೆ ಸುದ್ದಿಯಲ್ಲಿದ್ದಾರೆ. ಒಂದ್ಕಡೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ ಸುದ್ದಿಯಲ್ಲಿದ್ದರು. ಇನ್ನೊಂದು ಕಡೆ ಮದುವೆ ಸಮಾರಂಭಕ್ಕೆ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಅಪ್ಪು ಅಭಿಮಾನಿಗಳ ಜೊತೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ.

ಕಾವ್ಯಾ ಶಾ ವಿವಾಹದಲ್ಲಿ ರಮ್ಯಾ
ಸ್ಯಾಂಡಲ್‌ವುಡ್ ಲಕ್ಕಿ ಗರ್ಲ್ ರಮ್ಯಾ ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಕಂಡಿದ್ದಾರೆ. ಇಂದು ( ಜೂನ್ 09) ನಟಿ ಕಾವ್ಯಾ ಶಾ ಹಾಗೂ ವರುಣ್ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಆತ್ಮೀಯರೊಂದಿಗೆ ಬೆರೆತಿದ್ದಾರೆ. ಅಭಿಮಾನಿಗಳೊಂದಿಗೆ ಸಮಯ ಕಳೆದಿದ್ದಾರೆ. ಅಭಿಮಾನಿಗಳಿ ಸೆಲ್ಫಿ ನೀಡಿ ಸಂಭ್ರಮಿಸಿದ್ದಾರೆ.

ಪುನೀತ್ ಅಭಿಮಾನಿಗಳ ಜೊತೆ ಸೆಲ್ಫಿ
ನಟಿ ಕಾವ್ಯಾ ಶಾ ಅವರೊಂದಿಗೆ ಮದುವೆ ಆಗಿರುವ ಯುವಕ ವರುಣ್. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಆತ್ಮೀಯರಾಗಿದ್ದರು. ಅಪ್ಪು ಕೂಡ ವರುಣ್ ಜೊತೆ ಆಗಾಗ ಕಾಣಿಸಿಕೊಂಡಿದ್ದಾರೆ. ವರಣ್ ನಿರ್ಮಿಸುತ್ತಿರುವ 'ಹಾಸ್ಟೆಲ್ ಹುಡುಗರು' ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದರು. ಈ ಕಾರಣಕ್ಕೆ ಅಪ್ಪು ಅಭಿಮಾನಿಗಳೊಂದಿಗೆ ವರುಣ್‌ಗೆ ಒಡನಾಟವಿದೆ. ಹೀಗಾಗಿ ಕಾವ್ಯಾ ಶಾ ಹಾಗೂ ವರುಣ್ ವಿವಾಹ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ರಮ್ಯಾ ಅಪ್ಪುಅಭಿಮಾನಿಗಳ ಜೊತೆ ನಿಂತು ಸೆಲ್ಫಿ ನೀಡಿದ್ದಾರೆ.

ಅಪ್ಪು ಜೊತೆ ನಟಿಸುವ ಆಸೆ ಇತ್ತು
ಪುನೀತ್ ರಾಜ್‌ಕುಮಾರ್ ಸಿನಿಮಾಗಳಿಂದಲೇ ಮೋಹಕ ತಾರೆ ರಮ್ಯಾ ಸಿನಿಮಾ ಜರ್ನಿ ಆರಂಭಿಸಿದ್ದರು. ಹೀಗಾಗಿ ಮೊದಲಿನಿಂದಲೂ ಅಪ್ಪು ಅಂದರೆ ರಮ್ಯಾಗೆ ಬಲು ಪ್ರೀತಿ, ಗೌರವ. ಬಹಳ ದಿನಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಡಲು ರಮ್ಯಾ ಆಲೋಚನೆ ಮಾಡುತ್ತಿದ್ದರು. ಮತ್ತೆ ಪುನೀತ್ ಜೊತೆನೇ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಬೇಕು ಅನ್ನುವ ಆಲೋಚನೆ ಕೂಡ ಇತ್ತು. ಅಷ್ಟರಲ್ಲೇ ಅಪ್ಪು ಅಗಲಿಕೆ ಆ ಎಲ್ಲಾ ಕನಸನ್ನು ನುಚ್ಚುನೂರು ಮಾಡಿತ್ತು.

ರಮ್ಯಾ ರೀ-ಎಂಟ್ರಿ ಆಗೋಗಿದೆ
ರಮ್ಯಾ ಈಗಾಗಲೇ ಸ್ಯಾಂಡಲ್‌ವುಡ್‌ಗೆ ರೀ -ಎಂಟ್ರಿ ಕೊಟ್ಟಿದ್ದಾಗಿದೆ. ಹೊಸಬರ ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಮುಗಿದಿದೆ. ಸೂಕ್ತ ಸಮಯದಲ್ಲಿ ಚಿತ್ರತಂಡ ರಮ್ಯಾ ನಟಿಸಿದ ವಿಷಯವನ್ನು ರಿವೀಲ್ ಮಾಡಲಿದೆ ಎನ್ನಲಾಗಿದೆ. ಒಟ್ಟಾರೆ, ರಮ್ಯಾ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಆಕ್ಟಿವ್ ಆಗಿದ್ದು, ಮೋಹಕತಾರೆ ಅಭಿಮಾನಿಗಳಿಗೆ ಸಖತ್ ಖುಷಿಕೊಟ್ಟಿದೆ.


Click it and Unblock the Notifications











