"ಬ್ಯಾನ್ ಮಾಡಿ ಅಂದರೆ, ಡಿಪೆಂಡ್ ಆಗಿರೋ ನಿರ್ಮಾಪಕರು ಏನ್ಮಾಡ್ಬೇಕು"; ದರ್ಶನ್ ಬಂಧನಕ್ಕೆ ಸ್ಯಾಂಡಲ್‌ವುಡ್ ಪ್ರತಿಕ್ರಿಯೆ ಏನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರೋ ದರ್ಶನ್ ಬಗ್ಗೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಅಭಿಪ್ರಾಯವೇನು? ದರ್ಶನ್ ಬಂಧನವಾಗಿ ಇಂದಿಗೆ ಎರಡು ದಿನ. ಈಗೀಗ ದರ್ಶನ್ ಬಂಧನದ ಬಗ್ಗೆ ಒಬ್ಬೊಬ್ಬರೇ ಪ್ರತಿಕ್ರಿಯೆ ನೀಡುವುದಕ್ಕೆ ಮುಂದೆ ಬಂದಿದ್ದಾರೆ. ದರ್ಶನ್ ಬಂಧನದ ಬಳಿಕ ಪ್ರತಿಕ್ರಿಯೆ ನೀಡಲು ಕೆಲವು ಸ್ಯಾಂಡಲ್‌ವುಡ್ ತಾರೆಯರು ಹಿಂದೇಟು ಹಾಕಿದ್ದಾರೆ.
ಸದ್ಯಕ್ಕೀಗ ಕನ್ನಡ ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಹಾಗೂ ನಟಿಯರು ಪ್ರತಿಕ್ರಿಯೆ ನೀಡಿದ್ದಾರೆ. ಹಿರಿಯ ನಟಿ ಉಮಾಶ್ರೀ, ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟಿ ಸಂಜನಾ ಗಲ್ರಾನಿ ಹಾಗೂ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್ ಎಂ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಬಂಧನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ದರ್ಶನ್ ಅವರನ್ನು ಸಿನಿಮಾದಿಂದ ಬ್ಯಾನ್ ಮಾಡಬೇಕು ಅನ್ನೋ ಕೂಗು ಕೂಡ ಕೇಳಿ ಬಂದಿತ್ತು. ಈ ಪ್ರಶ್ನೆ ಎನ್ ಎಂ ಸುರೇಶ್ ಹಾರಿಕೆಯ ಉತ್ತರ ಉತ್ತರ ಕೊಟ್ಟಿದ್ದಾರೆ. ಕಲಾವಿದರ ಸಂಘ ಅನ್ನೋದು ಇದೆ. ಅದು ತೆಗೆದುಕೊಳ್ಳುವ ನಿರ್ಧಾರದ ಮೇಲೆ ವಾಣಿಜ್ಯ ಮಂಡಳಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ, ಇವರೆಲ್ಲ ಏನೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..
ಎನ್‌ಎಂ ಸುರೇಶ್- ವಾಣಿಜ್ಯ ಮಂಡಳಿ ಅಧ್ಯಕ್ಷ
"ನಮ್ಮ ವಾಣಿಜ್ಯ ಮಂಡಳಿ ತೆಗೆದುಕೊಳ್ಳುವ ನಿರ್ಧಾರ ಕಲಾವಿದರ ಸಂಘ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ. ಇದಿನ್ನೂ ಪ್ರಾಥಮಿಕ ಹಂತದಲ್ಲಿದೆ. ಈಗೇನು 13 ಜನ ಅರೆಸ್ಟ್ ಆಗಿದ್ದಾ ಅವರನ್ನು ತನಿಖೆ ಮಾಡಿ, ಚಾರ್ಜ್‌ಶೀಟ್ ಮಾಡಿ, ಯಾರು ಅಪರಾಧಿ ಅನ್ನೋದು ಡಿಸೈಡ್ ಆಗುತ್ತೆ. ಇದು ನಾಲ್ಕೈದು ತಿಂಗಳು ತೆಗೆದುಕೊಳ್ಳುತ್ತೆ. ನನ್ನ ಅನಿಸಿಕೆ ಪ್ರಕಾರ, ಮೂರು ನಾಲ್ಕು ತಿಂಗಳು ಕಾನೂನಿ ಪ್ರಕ್ರಿಯೆಯಲ್ಲಿ ಇರಲೇಬೇಕಾಗುತ್ತೆ. ಅಲ್ಲಿವರೆಗೂ ಇರುವುದು ಹೇಗೆ. ಯಾವ್ಯಾವ ನಿರ್ಮಾಪಕನಿಗೆ ಏನೇನು ಕಮಿಟ್ ಆಗಿದ್ದಾರೋ, ಯಾರಿಗೆ ಪೇಮೆಂಟ್ ಕೊಡುವುದು ಇದೆಯೋ ಇನ್ನು ಎರಡು ಮೂರು ದಿನಗಳಲ್ಲಿ ಆ ಎಲ್ಲಾ ಮಾಹಿತಿಯನ್ನು ತೆಗೆದುಕೊಳ್ಳುತ್ತೇವೆ. ನಾಳೆ ಬ್ಯಾನ್ ಮಾಡಿ ಅಂದರೆ, ಡಿಪೆಂಡ್ ಆಗಿರುವ ನಿರ್ಮಾಪಕರು ಏನು ಮಾಡೋದು? ಎಲ್ಲರಿಗೂ ಉತ್ತರ ಕೊಡುವುದಕ್ಕೆ ಆಗುವುದಿಲ್ಲ." ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ, ಎನ್ ಎಂ ಸುರೇಶ್ ಹೇಳಿದ್ದಾರೆ.

ಹಿರಿಯ ನಟ ಉಮಾಶ್ರೀ
"ಈ ವಿಷಯವನ್ನು ಕೇಳಿದಾಗ ನನಗೆ ಗಾಬರಿ, ಗೊಂದಲ ಎರಡೂ ಆಯ್ತು. ಶಿಸ್ತುನ್ನು ರೂಢಿಸಿಕೊಳ್ಳಬೇಕಾಗುತ್ತೆ. ವೃತ್ತಿ ಬದುಕಿಗೆ ಹಾಕಿಕೊಳ್ಳಬೇಕಾದ ಶಿಸ್ತೇ ಬೇರೆ, ವೈಯಕ್ತಿಕ ಬದುಕಿಗೆ ಹಾಕಿಕೊಳ್ಳಬೇಕಾದ ಶಿಸ್ತೇ ಬೇರೆ. ನಮ್ಮ ಇತಿ ಮಿತಿಯಲ್ಲಿ ಶಿಸ್ತುಗಳನ್ನು ನಿರ್ವಹಿಸಬೇಕಾಗುತ್ತೆ. ನಾವು ತಪ್ಪು ಮಾಡಬೇಕಿಲ್ಲ. ಆರೋಪ ಬಾರದೆ ಇರುವ ಹಾಗೆಯೂ ನೋಡಿ ಕೊಳ್ಳಬೇಕಾಗುತ್ತೆ. ಇದು ಹಣ ಹಾಕಿರುವ ನಿರ್ಮಾಪಕರಿಗೆ ತೊಂದರೆ ಆಗುತ್ತೆ. ಇದು ಬ್ಯುಸಿನೆಸ್ ಮೇಲೂ ಪರಿಣಾಮ ಬೀರುತ್ತೆ." ಎಂದು ಹಿರಿಯ ನಟಿ ಉಮಾಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.
ನಿರ್ದೇಶಕ ಇಂದ್ರಜಿತ್ ಲಂಕೇಶ್
"ಮಾಧ್ಯಮಗಳು ಕ್ಷಣ ಕ್ಷಣಕ್ಕೂ ಮಾಹಿತಿಯನ್ನು ನೀಡುತ್ತಿವೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ಕಾಮೆಂಟ್‌ಗಳನ್ನು ಮಾಡಿದರೆ ಸರಿ ಇರುವುದಿಲ್ಲ." ಎಂದು ಇಂದ್ರಜಿತ್ ಲಂಕೇಶ್.
ನಟಿ ಸಂಜನಾ ಗಲ್ರಾನಿ
"ನ್ಯೂಸ್‌ನಲ್ಲಿ ಸುದ್ದಿಯನ್ನು ನೋಡಿ ನನಗೆ ಶಾಕ್ ಆಗಿದೆ. ಚಿಂತೆ ಕಾಡುತ್ತಿದೆ. ನಾನೀಗ ದೇವರ ಮುಂದೆ ಕೂತು ಪ್ರಾರ್ಥನೆ ಮಾಡುತ್ತೇನೆ. ದರ್ಶನ್ ಸರ್ ಅವರನ್ನು ಬರೀ ವಿಚಾರಣೆಗೆ ಕರೆದುಕೊಂಡು ಹೋಗಬೇಕು ಅಂತ. ಅವರು ಅರೆಸ್ಟ್ ಆಗಬಾರದು ಅಂತ ದೇವರಲ್ಲಿ ಕೂತು ಕೇಳಿಕೊಳ್ಳುತ್ತೇನೆ. ಇದು ನಿಜಕ್ಕೂ ಶಾಕಿಂಗ್ ನ್ಯೂಸ್ ಆಗಿದೆ." ಎಂದು ನಟಿ ಸಂಜನಾ ಗಲ್ರಾನಿ ವಿಡಿಯೋದಲ್ಲಿ ಹೇಳಿದ್ದಾರೆ.


Click it and Unblock the Notifications











