»   »  ಈ ಹಾಡನ್ನು ಕೇಳಿ ಸ್ಯಾಂಡಲ್‌ ವುಡ್ ನಟಿಯರು ಕಣ್ಣೀರಿಟ್ಟಿದ್ದು ಏಕೆ?

ಈ ಹಾಡನ್ನು ಕೇಳಿ ಸ್ಯಾಂಡಲ್‌ ವುಡ್ ನಟಿಯರು ಕಣ್ಣೀರಿಟ್ಟಿದ್ದು ಏಕೆ?

Posted By:
Subscribe to Filmibeat Kannada

ತುಂಬಾ ಅಪರೂಪ ವಾಗಿದೆ, ಇದು ನನ್ಗೆ ತುಂಬಾ ಇಷ್ಟವಾಯಿತು, ವೆರಿ ವೆರಿ ಹಾರ್ಟ್‌ ಟಚಿಂಗ್, ಯಾರು ಇಷ್ಟೊಂದು ಸುಂದರವಾಗಿ ಬರೆದಿರಲಿಲ್ಲ ಅನಿಸುತ್ತೆ..? ಇಟ್ ಈಸ್ ಬ್ಯೂಟಿಪುಲ್‌ ಅಂತ ಸ್ಯಾಂಡಲ್‌ ವುಡ್ ತಾರೆಯುರು ಹೇಳಿಕೊಂಡು ತುಂಬಾ ಕಣ್ಣೀರು ಸುರಿಸಿದರು..! ಅವರು ಕಣ್ಣೀರಿಟ್ಟಿದ್ದು ಏಕೆ?. ಮುಂದೆ ಓದಿ..['ಚೌಕ' ಜನವರಿ 19 ಕ್ಕೆ ಬಿಡುಗಡೆ: ಸಿನಿಮಾದ ವಿಶೇಷತೆಗಳಿವು..!]

ತಂದೆ ಮಗಳ ಹಾಡುಗಳು ಏನಿವೇ ಅವುಗಳು ಹೆಣ್ಣು ಮಕ್ಕಳಿಗೆ ಯಾವಾಗಲು ಸ್ಪೆಷಲ್, ತಂದೆ ಪ್ರೀತಿಯ ಬಗ್ಗೆ ಏನೇನು ಹೇಳೋಕೆ ಆಗೋದಿಲ್ವೋ ಅದನ್ನ ಈ ಸಾಂಗ್‌ ನಲ್ಲಿ ಕೇಳಬಹುದು.. ಹೀಗೆ ಹಲವು ರೀತಿಯ ಭಾವನಾತ್ಮಕ ಸಂಬಂಧಗಳನ್ನು ಹೇಳಿಕೊಂಡು ಸ್ಯಾಂಡಲ್‌ ವುಡ್‌ ನ ಹಲವು ನಟಿಯರು ಅಳುವಂತೆ ಮಾಡಿದ ಸಾಂಗ್ ಒಂದು ವಿಶೇಷವಾಗಿ ಹೆಣ್ಣು ಮಕ್ಕಳ ಮೊಬೈಲ್‌, ಲ್ಯಾಪ್‌ಟಾಪ್‌ ಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದಹಾಗೆ ಆ ಸಾಂಗ್ ಇದೇ ಜನವರಿ 19 ಕ್ಕೆ ಬಿಡುಗಡೆ ಆಗುತ್ತಿರುವ ಕುಳ್ಳ ದ್ವಾರಕೀಶ್‌ ನಿರ್ಮಾಣದ 'ಚೌಕ' ಸಿನಿಮಾದ ಹಾಡು.


Sandalwood Heroine's are wept after heard 'Appa.. I love you pa..'track

"ನಾನು ನೋಡಿದ ಮೊದಲ ವೀರ.. ಬಾಳು ಕಲಿಸಿದ ಸಲಹೆಗಾರ.. ಬೆರಗು ಮೂಡಿಸೋ ಜಾದುಗಾರ ಅಪ್ಪಾ..


ಹಗಲು ಬೆವರಿನ ಕೂಲಿಕಾರ ರಾತ್ರಿ ಮನೆಯಲಿ ಚೌಕಿದಾರ.. ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ..


ಗದರೋ ಮೀಸೆ ಕಾರ ಮನಸೇ ಕೋಮಲ ನಿನ್ನ ಹೋಲೋ ಕರ್ಣ ಯಾರಿಲ್ಲಾ.. ಅಪ್ಪಾ.... ಐ ಲವ್‌ ಯೂ ಪಾ.. ಅಪ್ಪಾ... ಐ ಲವ್‌ ಯೂ ಪಾ.. ಅಪ್ಪಾ... ಐ ಲವ್‌ ಯೂ ಪಾ.." ಎಂಬ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಅರ್ಜುನ್‌ ಜನ್ಯಾ ಸಂಗೀತ ನಿರ್ದೇಶನ ಮಾಡಿರುವ ಈ ಹಾಡನ್ನು ಕೇಳಿಯೇ ಸ್ಯಾಂಡಲ್‌ ವುಡ್ ನಟಿಯರೆಲ್ಲಾ ಕಣ್ಣೀರು ಹಾಕುತ್ತಾ ತಮ್ಮ ಅಪ್ಪನನ್ನು ಎಲ್ಲರೂ ನೆನಸಿಕೊಳ್ಳುತ್ತಿದ್ದಾರೆ.[ದ್ವಾರಕೀಶ್ 'ಚೌಕ'ದ ಪ್ರತಿಭೆಗಳತ್ತ ಒಂದು ಇಣುಕು ನೋಟ]


ಸಾಮಾನ್ಯವಾಗಿ ಅಮ್ಮನ ಬಗ್ಗೆ ಹೆಚ್ಚಿನ ಹಾಡುಗಳು ಯಾವಾಗಲು ಕೇಳಿಬರುತ್ತಿರುತ್ತವೆ. ಆದ್ರೆ ಅಪ್ಪನ ಬಗೆಗಿನ ಹಾಡುಗಳು ಕನ್ನಡ ಚಿತ್ರಗಳಲ್ಲಿ ನಟಿ ಶೃತಿ ಹೇಳಿರುವಂತೆ ಅಪರೂಪವಾಗಿವೆ. 'ಚೌಕ' ಸಿನಿಮಾದಲ್ಲಿ ತಂದೆ-ಮಗಳ ಸಂಬಂಧವನ್ನು ಭಾವಾನಾತ್ಮಕವಾಗಿ ಗಟ್ಟಿಯಾಗಿ ಕಟ್ಟಿಕೊಟ್ಟಿರುವ 'ಅಪ್ಪಾ.... ಐ ಲವ್‌ ಯೂ ಪಾ..' ಹಾಡನ್ನು' ಅನುರಾಧ ಭಟ್ ಜೀವತುಂಬಿ ಎಲ್ಲರ ಮನಸ್ಸಿಗೂ ನಾಟುವಂತೆ ಹಾಡಿದ್ದಾರೆ.


Sandalwood Heroine's are wept after heard 'Appa.. I love you pa..'track

ನಮ್ಮ ತಂದೆ ನಮಗೆ ಹೀರೊ ಎಂಬುದನ್ನು ಹಲವು ಹೆಣ್ಣು ಮಕ್ಕಳು ಮರೆತಿರುತ್ತಾರೆ. ಆದ್ರೆ ಆ ರೀತಿ ಯಾರಾದ್ರು ಮರೆತಿದ್ದಲ್ಲಿ 'ಚೌಕ' ಸಿನಿಮಾದ ಅಪ್ಪಾ.... ಐ ಲವ್‌ ಯೂ ಪಾ.. ಹಾಡು ಎಂದಿಗೂ ಮರೆಯದಂತೆ ನೆನಪಿಸಿಕೊಡುವಲ್ಲಿ ಸಂಶಯವಿಲ್ಲ. ಪ್ರತಿಯೊಬ್ಬರ ತಂದೆ ಅವರ ಮಕ್ಕಳಿಗೆ ಹೀರೋ ಹೇಗೆ ಎಂಬುದನ್ನು ಈ ಹಾಡು ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತದೆ.


ಈ ಹಿಂದೆ ಕನ್ನಡ ಚಿತ್ರದಲ್ಲಿ ಅಪ್ಪ-ಮಗಳ ಪ್ರೀತಿಯನ್ನು ಭಾವನಾತ್ಮಕವಾಗಿ ಹಾಡಿನಲ್ಲಿ ಕಟ್ಟಿ ಕೊಟ್ಟಿದ್ದ ಹಾಡು ಡಾ.ಶಿವರಾಜ್ ಕುಮಾರ್ ಅಭಿನಯದ ಅಂಡಮಾನ್ ಸಿನಿಮಾದಲ್ಲಿದೆ. ಅಂಡಮಾನ್ ಸಿನಿಮಾದಲ್ಲಿನ 'ಡ್ಯಾಡಿ ಮೈ ಲವ್ಲಿ ಡ್ಯಾಡಿ' ಹಾಡಿನಲ್ಲಿ ತಂದೆ-ಮಗಳ ಪ್ರೀತಿಯ ಸಂಭಾಷಣೆಗಳು ಸಹ ಭಾವನಾತ್ಮಕವಾಗಿ ಮನಸ್ಸನ್ನು ಮುಗ್ಧವಾಗಿಸುತ್ತವೆ.


English summary
Sandalwood Heroine's are wept after heard 'Appa.. I love you pa..'track. This song is sing by Anuradha Bhat, lyric's by V.Nagendra Prasad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada