For Quick Alerts
  ALLOW NOTIFICATIONS  
  For Daily Alerts

  'ಚೌಕ' ಜನವರಿ 19 ಕ್ಕೆ ಬಿಡುಗಡೆ: ಸಿನಿಮಾದ ವಿಶೇಷತೆಗಳಿವು..!

  By Suneel
  |

  ಸದ್ಯದಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಸೈಲೆಂಟ್‌ ಆಗಿ ಸದ್ದು ಮಾಡಲಿರೋ ಸಿನಿಮಾ ಎಂಬ ನಿರೀಕ್ಷೆ ಹುಟ್ಟಿಸುತ್ತಿರುವುದು 'ಚೌಕ'. ಈ ಸಿನಿಮಾ ಕುಳ್ಳ ದ್ವಾರಕೀಶ್ ನಿರ್ಮಾಣದ 50 ನೇ ಸಿನಿಮಾ ಎಂಬುದನ್ನು ಮರೆಯೋಹಾಗಿಲ್ಲ.

  ಭಾರತೀಯ ಚಿತ್ರರಂಗದಲ್ಲೇ ಹಲವು ವಿಶೇಷತೆಗಳಿರುವ ಮೊದಲ ಸಿನಿಮಾ 'ಚೌಕ' ಎಂದು ಹೇಳಬಹುದಾದಷ್ಟು ವಿಶೇಷತೆಗಳನ್ನು ಸಿನಿಮಾ ಹೊಂದಿದೆ . 'ಅಂದಹಾಗೆ ಚೌಕ' ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆಗಿದ್ದು, 2017 ಜನವರಿ 19 ರಂದು ತೆರೆ ಕಾಣಲಿದೆ. ನಾಲ್ಕು ನಟರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಚೌಕ' ಚಿತ್ರಕ್ಕೆ ತರುಣ್‌ ಸುಧೀರ್ ಆಕ್ಷನ್‌ ಕಟ್ ಹೇಳಿದ್ದಾರೆ.

  ನಾವು ಮೊದಲೇ ಹೇಳಿದಂತೆ ಭಾರತೀಯ ಚಿತ್ರರಂಗದಲ್ಲೇ ಮೊಟ್ಟ ಮೊದಲು ಹಲವು ವಿಶೇಷತೆಗಳನ್ನು ಹೊಂದಿರುವ ಚಿತ್ರ 'ಚೌಕ' ಎಂದು ಹೇಳಿದ್ದು ಏಕೆ? ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೇ ನೋಡಿ.[ದ್ವಾರಕೀಶ್ 'ಚೌಕ'ದ ಪ್ರತಿಭೆಗಳತ್ತ ಒಂದು ಇಣುಕು ನೋಟ]

  ಚೌಕ ಸಿನಿಮಾದಲ್ಲಿ 4 ಜನ ನಟರು

  ಚೌಕ ಸಿನಿಮಾದಲ್ಲಿ 4 ಜನ ನಟರು

  ತರುಣ್ ಕಿಶೋರ್ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ 'ಔಕ' ಚಿತ್ರದಲ್ಲಿ ಸ್ಯಾಂಡರ್‌ವುಡ್‌ನ 4 ಸ್ಟಾರ್ ನಟರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

  'ಚೌಕ' ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ವಿಶೇಷ ಅಂದ್ರೆ ಚಿತ್ರದಲ್ಲಿ ಗೆಸ್ಟ್‌ ರೋಲ್‌ನಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. (ಬಾಹುಬಲಿ 'ಕಾಲಕೇಯ'ನ ಜೊತೆ ದರ್ಶನ್ ಕಾಳಗ)

  ಚೌಕ ಸಿನಿಮಾದಲ್ಲಿ 4 ಜನ ನಟಿಯರು

  ಚೌಕ ಸಿನಿಮಾದಲ್ಲಿ 4 ಜನ ನಟಿಯರು

  ಚೌಕ ಸಿನಿಮಾದಲ್ಲಿ ಪಂಚ ಭಾಷಾ ನಟಿ ಪ್ರಿಯಾಮಣಿ, ದೀಪಾ ಸನ್ನಿಧಿ, ಭಾವನಾ ಮೆನನ್, ಐಂದ್ರಿತಾ ರೇ ಅಭಿನಯಿಸಿದ್ದಾರೆ.['ಚೌಕ'ದ ಮೊಹಮ್ಮದ್ ಅನ್ವರ್ ಗೆ 'ಬೇಗಂ' ಆಗ್ತಾರಾ ದೀಪಾ ಸನ್ನಿಧಿ?]

  5 ಜನ ಸಂಗೀತ ನಿರ್ದೇಶಕರು

  5 ಜನ ಸಂಗೀತ ನಿರ್ದೇಶಕರು

  ಚೌಕ ಸಿನಿಮಾಗೆ ಗುರುಕಿರಣ್, ಅರ್ಜುನ್ ಜನ್ಯಾ, ವಿ.ಹರಿಕೃಷ್ಣ, ಅನೂಪ್ ಸೀಳೀನ್, ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಮಾಡಿದ್ದಾರೆ.

  ಚೌಕ ಸಿನಿಮಾಗೆ 5 ಛಾಯಾಗ್ರಾಹಕರು

  ಚೌಕ ಸಿನಿಮಾಗೆ 5 ಛಾಯಾಗ್ರಾಹಕರು

  ಸತ್ಯಾ ಹೆಗ್ಡೆ, ಎಸ್.ಕೃಷ್ಣ, ಸಂತೋಷ್ ರೈ ಪಥತೆ, ಶೇಖರ್, ಚಂದ್ರು, ಸುಧಾಕರ್ ರಾಜ್‌ ಎಂಬ 5 ಛಾಯಾಗ್ರಾಹಕರು ಸಿನಿಮಾ ಶೂಟ್ ಮಾಡಿದ್ದಾರೆ.

  5 ಜನ ಡೈಲಾಗ್ ಬರಹಗಾರರು

  5 ಜನ ಡೈಲಾಗ್ ಬರಹಗಾರರು

  ಸಿನಿಮಾದ ಎಲ್ಲಾ ವಿಶೇಷತೆಗಳ ಜೊತೆಗೆ, ಇನ್ನೊಂದು ವಿಶೇಷತೆ ಎಂದರೆ ಚಿತ್ರಕ್ಕೆ 5 ಜನರು ಡೈಲಾಗ್ ಬರೆದಿರುವುದು. ಎ.ಪಿ. ಅರ್ಜುನ್, ಸಿಂಪಲ್ ಸುನಿ, ಎ.ವಿ.ಚಿಂತನ್, ಯೋಗಾನಂದ್ ಮುದ್ದನ್, ಅನಿಲ್‌ ಕುಮಾರ್ ಚೌಕ ಚಿತ್ರಕ್ಕೆ ಡೈಲಾಗ್ ಬರೆದಿದ್ದಾರೆ.

  ಒಬ್ಬೊಬ್ಬರ ಕಥೆ ಒಂದೊಂದು ಕಾಲಗಟ್ಟದಲ್ಲಿ

  ಒಬ್ಬೊಬ್ಬರ ಕಥೆ ಒಂದೊಂದು ಕಾಲಗಟ್ಟದಲ್ಲಿ

  ಬಹು ನಟರ 'ಚೌಕ' ಸಿನಿಮಾದಲ್ಲಿ ಪ್ರತಿಯೊಬ್ಬ ನಟನ ಕಥೆಯು ಒಂದೊಂದು ಕಾಲಘಟ್ಟದಲ್ಲಿ ಜರುಗಲಿದೆ. ನೆನಪಿರಲಿ ಪ್ರೇಮ್, ಚಿತ್ರದಲ್ಲಿ ಹಕ್ಕಿ ಗೋಪಾಲ ಪಾತ್ರದಲ್ಲಿ 1986 ಕಾಲಘಟ್ಟದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಕಥೆ ಬೆಂಗಳೂರಿನಲ್ಲಿ ನಡೆಯುತ್ತದೆ.

  ದಿಗಂತ್, ಕೃಷ್ಣ ರಾವ್ ಪಾತ್ರದಲ್ಲಿ 1995 ಕಾಲಘಟ್ಟದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ಕಥೆ ಮೈಸೂರಿನಲ್ಲಿ ಜರುಗಿದೆ.

  2000 ಕಾಲಘಟ್ಟದಲ್ಲಿ 'ವಿಜಯ್‌ ರಾಘವೇಂದ್ರ' ಸೂರ್ಯ ಶೆಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ಕಥೆ ಮಂಗಳೂರಿನಲ್ಲಿ ನಡೆದಿದೆ.

  ಇನ್ನುಳಿದಂತೆ ಪ್ರಜ್ವಲ್‌ ದೇವರಾಜ್‌ ಮೊಹಮದ್ ಅನ್ವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಕಥೆ ಬಿಜಾಪುರದಲ್ಲಿ ನಡೆದಿದೆ.

  English summary
  Dwarkish 50th production Chawka has confirmed the releasing date for January 19th. 'Chauka' is a multi starrer film with Prem, Prajwal, Diganth and Vijay Raghavendra are the prominent roles in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X