ಪ್ರೇಮಿಗಳ ದಿನದಂದು ಪೋಸ್ಟರ್, ಹಾಡುಗಳದ್ದೇ ಸಂಭ್ರಮ: ವ್ಯಾಲೆಂಟೈನ್ಸ್ ಡೇ ಆಚರಿಸಿದ ಸಿನಿಮಾಗಳ್ಯಾವುವು?
ಪ್ರೇಮಿಗಳ ದಿನ ಕೇವಲ ಲವರ್‌ಗಳಿಗಷ್ಟೇ ಸಂಭ್ರಮ ಅಲ್ಲ. ಕನ್ನಡ ಚಿತ್ರರಂಗ ಕೂಡ ಈ ದಿನಕ್ಕಾಗಿ ಕಾಯುತ್ತಿರುತ್ತೆ. ಯಾಕಂದರೆ, ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಣ ಆಗುವ ಶೇ 90 ರಷ್ಟು ಸಿನಿಮಾಗಳಲ್ಲಿ ಲವ್ ಸ್ಟೋರಿಗಳೇ ಇರುತ್ತೆ. ಹೀಗಾಗಿ ಇದೊಂದು ದಿನಕ್ಕಾಗಿ ಪ್ರೇಮಿಗಳು ಕಾದು ಕೂರುವಂತೆ ಸ್ಯಾಂಡಲ್‌ವುಡ್‌ನ ಸಿನಿಮಾ ಮಂದಿ ಕೂಡ ಕಾಯುತ್ತಾರೆ. ಇದೇ ದಿನ ತಮ್ಮ ಸಿನಿಮಾ ಹೊಚ್ಚ ಹೊಸ ಪೋಸ್ಟರ್, ಟ್ರೈಲರ್, ಇಲ್ಲವೇ ಸಾಂಗ್‌ಗಳನ್ನು ಬಿಡುಗಡೆ ಮಾಡುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷ ಕೂಡ ಪ್ರೇಮಿಗಳ ದಿನದಂದು ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿವೆ. ಹಾಡುಗಳು ರಿಲೀಸ್ ಆಗಿವೆ. ಸಿನಿಪ್ರೇಮಿಗಳಿಗಾಗಿಯೇ ಹೊಚ್ಚ ಹೊಸ ಪೋಸ್ಟರ್ ಹಾಗೂ ಲವ್ ಸಾಂಗ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸುತ್ತಿವೆ. ಹಾಗಿದ್ದರೂ, ವ್ಯಾಲೆಂಟೈನ್ಸ್ ಡೇ ದಿನ ಬಿಡುಗಡೆಯಾದ ಲವ್ ಸ್ಟೋರಿ ಸಿನಿಮಾಗಳ ಪೋಸ್ಟರ್ ಹಾಗೂ ಸಾಂಗ್ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.
'ಏಕ್ ಲವ್ ಯಾ' ಎದೆ ಬಡಿತ ಹೆಚ್ಚಾಗಿದೆ
ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷೆಯ ಸಿನಿಮಾ 'ಏಕ್ ಲವ್ ಯಾ' ಬಿಡುಗಡೆಗೆ ಸಜ್ಜಾಗಿದೆ. ಕೆಲವೇ ದಿನಗಳಲ್ಲಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ರಚಿತಾ ರಾಮ್, ರಾಣಾ ಹಾಗೂ ರೀಷ್ಮಾ ನಾಣಯ್ಯ ಅಭಿನಯದ ಸಿನಿಮಾ ಬಗ್ಗೆ ನೋಡಲು ಪ್ರೇಮಿಗಳೂ ಕಾದು ಕೂತಿದ್ದಾರೆ. ಆದರೆ, ಪ್ರೇಮಿಗಳ ದಿನದಂದು ಪ್ರೇಮಿಗಳಿಗಾಗಿ ಎದೆ ಬಡಿತ ಹೆಚ್ಚಾಗಿದೆ ಎನ್ನುವ ವಿಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಲಾಗಿದೆ. ರಾಣಾ ಹಾಗೂ ರೀಷ್ಮಾ ನಾಣಯ್ಯ ಕಾಂಬಿನೇಷನ್ ಸಾಂಗ್ ಪ್ರೇಮಿಗಳಿಗೆ ಸೂಟ್ ಆಗುವ ಸಾಂಗ್. ಈ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಾನ್ವಿತಾ-ಧೀರೇನ್ 'ಶಿವ 143' ಸಾಂಗ್
ರಾಮ್ ಕುಮಾರ್ ಪುತ್ರ ಧೀರೇನ್ ರಾಜ್‌ಕುಮಾರ್ ಅಭಿನಯದ ಮೊದಲ ಸಿನಿಮಾ 'ಶಿವ 143' ರಿಲೀಸ್‌ಗೆ ರೆಡಿಯಾಗಿದೆ. ಸದ್ಯ ಪ್ರೇಮಿಗಳ ದಿನಕ್ಕೆಂದು 'ಮಳೆ ಹನಿಯೇ' ಎನ್ನುವ ಹಾಡನ್ನು ಬಿಡುಗಡೆ ಮಾಡಲಾಗಿದೆ. ಧೀರೇನ್ ಹಾಗೂ ಮಾನ್ವಿತಾ ಇಬ್ಬರ ಕೆಮಿಸ್ಟ್ರಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಮಳೆ ಹನಿಯೇ ಹಾಡಿನಲ್ಲಿ ಧೀರೇನ್ ಹಾಗೂ ಮಾನ್ವಿತಾ ಪ್ರೀತಿ ಮಾಡುವ ಸನ್ನಿವೇಶಗಳೇ ಹೆಚ್ಚಿವೆ. ಮೊದಲ ಸಿನಿಮಾದಲ್ಲಿಯೇ ಧೀರೇನ್ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಈ ಹಾಡನಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ.

ಅದ್ದೂರಿ ಲವರ್ ಪೋಸ್ಟರ್
ಎ ಪಿ ಅರ್ಜುನ್ ಬ್ಯಾನರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾ 'ಅದ್ಧೂರಿ ಲವರ್'. ವಿರಾಟ್ ಹಾಗೂ ಪ್ರಿಯಾಂಕಾ ಕುಮಾರ್ ನಟಿಸುತ್ತಿರುವ ಸಿನಿಮಾವಿದು. ಈಗಾಗಲೇ ಸಿನಿಮಾ ಸೆಟ್ಟೇರಿದ್ದು, ಚಿತ್ರೀಕರಣ ಆರಂಭ ಆಗಿದೆ. ಪ್ರೇಮಿಗಳ ದಿನದಂದು ಈ ಸಿನಿಮಾದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಪೋಸ್ಟರ್ ನೋಡಿದರೇ ಇದೊಂದು ಪಕ್ಕಾ ಲವ್ ಸ್ಟೋರಿ ಎಂದು ಊಹೆ ಮಾಡಬಹುದು.

'ಅಬ ಜಬ ದಬ' ಪೋಸ್ಟರ್ ರಿಲೀಸ್
'ದಿಯಾ' ಸಿನಿಮಾದ ನಾಯಕ ಪೃಥ್ವಿ ಅಂಬರ್ ಅಭಿನಯದ ಸಿನಿಮಾ 'ಅಬ ಜಬ ದಬ'. 'ಕನ್ನಡ್ ಗೊತ್ತಿಲ್ಲ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಮಯೂರ ರಾಘವೇಂದ್ರ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪೃಥ್ವಿ ಹಾಗೂ ಅಂಕಿತಾ ಅಮರ್ ಅಭಿನಯಿಸುತ್ತಿರುವ ಈ ಸಿನಿಮಾ ಫ್ಯಾಂಟಸಿ ಸ್ಟೋರಿ ಇದ್ದರೂ, ಇಲ್ಲೊಂದು ಲವ್ ಸ್ಟೋರಿ ಇದೆಯಂದು ಈ ಪೋಸ್ಟರ್ ಸಾರಿ ಹೇಳುತ್ತಿದೆ. ಪ್ರೇಮಿಗಳ ದಿನದಂದು ಪ್ರೇಮಿಗಳನ್ನು ಸೆಳೆಯಲು ಕನ್ನಡದ ಕೆಲವು ಚಿತ್ರ ಪೋಸ್ಟರ್, ಸಾಂಗ್ ರಿಲೀಸ್ ಮಾಡಿವೆ. ಈ ಸಿನಿಮಾಗಳಲ್ಲಿ ಪ್ರೇಮಿಗಳಿಗೆ ಯಾವ ಸಿನಿಮಾ ಇಷ್ಟ ಆಗುತ್ತೆ ಅನ್ನುವುದು ಕುತೂಹಲ.


Click it and Unblock the Notifications











