'ಪಡ್ಡೆ ಹುಲಿ' ಕೈಗೆ ಸಿಕ್ಕೇಬಿಟ್ಟಳು 'ಅದ್ಧೂರಿ ಲವರ್': ಸ್ಯಾಂಡಲ್‌ವುಡ್‌ನಲ್ಲಿ ಮಾಡರ್ನ್ ಪ್ರಿಯಾಂಕಾ!

ಸ್ಯಾಂಡಲ್‌ವುಡ್‌ಗೆ ಅದೆಷ್ಟೋ ನಟಿಯರು ಬರುತ್ತಲೇ ಇರುತ್ತಾರೆ. ಕೆಲವರಿಗೆ ಆರಂಭದಲ್ಲಿಯೇ ಅದೃಷ್ಟದ ಬಾಗಿಲು ತೆರೆದಿರುತ್ತೆ. ಮತ್ತೆ ಕೆಲವರಿಗೆ ಒಂದೇ ಸಿನಿಮಾಗೆ ಚಿತ್ರರಂಗದ ಬಾಗಿಲು ಮುಚ್ಚಿಬಿಡುತ್ತೆ. ಇಲ್ಲೊಬ್ಬ ನಟಿ ಆರಂಭದಲ್ಲೇ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

ಅಂದ್ಹಾಗೆ, ಈ ನಟಿಯ ಹೆಸರು ಪ್ರಿಯಾಂಕಾ ಕುಮಾರ್. ಈಗಾಗಲ್ಲೇ ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಂತ ಹಂತವಾಗಿ ಒಂದೊಂದೇ ಮೆಟ್ಟಿಲು ಏರುತ್ತಿರುವ ಈ ನಟಿಗೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

Sandalwood Most Promising Actress Priyanka Kumar 3rd Movie With Shreyas Manju

ಪ್ರಿಯಾಂಕಾ ಕುಮಾರ್ ಯಾವ ಬಾಲಿವುಡ್ ಹೀರೊಯಿನ್‌ಗೂ ಕಮ್ಮಿಯಿಲ್ಲ. ಮಾಡರ್ನ್ ಲುಕ್‌ನಲ್ಲಿ ಸಿನಿಪ್ರಿಯರನ್ನು ಸೆಳೆಯೋದು ಗ್ಯಾರಂಟಿ. ಈಗಾಗಲೇ ಹರಿದಾಡುತ್ತಿರುವ ಫೋಟೊಗಳು ನೋಡಿದ್ಮೇಲೆ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಸೂಚನೆ ನೀಡಿದ್ದಾರೆ.

ಕನ್ನಡ ಚಿತ್ರರಂಗದ ಈ ಉದಯೋನ್ಮುಖ ನಟಿ ಪ್ರಿಯಾಂಕಾ ಕುಮಾರ್ ತನ್ನ ಮೂರನೇ ಸಿನಿಮಾದಲ್ಲಿ ಶ್ರೇಯಸ್ ಮಂಜು ಜೊತೆ ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಗಂಡುಗಲಿ ಕೆ ಮಂಜು ಪುತ್ರ ಶ್ರೇಯಸ್ ಅವರ ಹೊಸ ಸಿನಿಮಾವಿದು. ಈ ಸಿನಿಮಾವನ್ನು ಮಧು ಗೌಡ ಗಂಗೂರು ನಿರ್ದೇಶನ ಮಾಡುತ್ತಿದ್ದಾರೆ.

ಅಂದ್ಹಾಗೆ ಪ್ರಿಯಾಂಕಾ ಕುಮಾರ್ ಮೊದಲ ಸಿನಿಮಾ 'ಅದ್ಧೂರಿ ಲವರ್'. ವಿರಾಟ್ ನಟಿಸಿ, ಎ ಪಿ ಅರ್ಜುನ್ ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್'. ಇದು ಅಭಿಷೇಕ್ ಅಂಬರೀಶ್ ಅಭಿನಯದ ಎರಡನೇ ಸಿನಿಮಾ ಕೂಡ ಹೌದು. ಈ ಸಿನಿಮಾ ಇನ್ನೂ ರಿಲೀಸ್ ಆಗಬೇಕಿದೆ. ಅಷ್ಟರಲ್ಲೇ ಮೂರನೇ ಸಿನಿಮಾ ಅನೌನ್ಸ್ ಆಗಿದೆ.

Sandalwood Most Promising Actress Priyanka Kumar 3rd Movie With Shreyas Manju

ಪಕ್ಕಾ ಮಾಡರ್ನ್ ಲುಕ್‌ನಲ್ಲಿ ಫೀಚರ್ ಇರೋ ನಟಿ ಮುಂದಿನ ದಿನಗಳಲ್ಲಿ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆಗಳಿವೆ. ಇನ್ನು ಮೂರನೇ ಸಿನಿಮಾದಲ್ಲಿ ಕಾಲೇಜು ಹುಡುಗಿಯಾಗಿ ನಟಿಸುತ್ತಿದ್ದಾರೆ. ಲುಕ್‌ಗೆ ತಕ್ಕಂತೆ ಬಬ್ಲಿ ಪಾತ್ರ ಇವದ್ದು.

ಇತ್ತ ಶ್ರೇಯಸ್ ಮಂಜು ಕೂಡ ದೊಡ್ಡ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. 'ಪಡ್ಡೆ ಹುಲಿ' ಹಾಗೂ 'ರಾಣ' ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದಿದ್ದರು. ದೊಡ್ಡ ಬ್ರೇಕ್ ಸಿಕ್ಕಿಲ್ಲ. ಮೂರನೇ ಸಿನಿಮಾ 'ವಿಷ್ಣುಪ್ರಿಯಾ' ರಿಲೀಸ್‌ಗೆ ರೆಡಿಯಾಗಿದ್ದು, ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಅಷ್ಟರೊಳಗೆ ನಾಲ್ಕನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

'ದುರ್ಗ', 'ನೀಲಿ' ಧಾರಾವಾಹಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರೋ ಮಧು ಗೌಡ ಗಂಗೂರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ ಕೂಡ ಹೌದು. ಮಾಸ್ ಎಂಟರ್‌ಟೈನರ್ ಹಾಗೂ ಕಾಲೇಜ್ ಲವ್ ಸ್ಟೋರಿಯನ್ನು ಪ್ರೇಕ್ಷಕರು ನೋಡದೆ ಹಲವು ದಿನಗಳಾಗಿವೆ. ಹೀಗಾಗಿ ಈ ಸಿನಿಮಾಗಾಗಿ ಪ್ರೇಕ್ಷಕರು ಎದುರು ನೋಡಬಹುದು.

ಇನ್ನೂ ಹೆಸರಿದ ಈ ಸಿನಿಮಾವನ್ನು ಆರ್ ಸಂತೋಷ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಟ್ಯೂನ್ ಹಾಕುತ್ತಿದ್ದಾರೆ. ಗಗನ್ ಗೌಡ ಕ್ಯಾಮರಾ, ರವಿವರ್ಮಾ ಆಕ್ಷನ್, ರಾಜೇಶ್ ಸಾಲುಂಡಿ ಸಂಭಾಷಣೆ ಬರೆಯುತ್ತಿದ್ದಾರೆ. ಇದೇ ಮಾರ್ಚ್ 31ಕ್ಕೆ ಸಿನಿಮಾ ಸೆಟ್ಟೇರುತ್ತಿದೆ. ಏಪ್ರಿಲ್ ತಿಂಗಳಿಂದ ಬೆಂಗಳೂರು, ಕೊಡಗು, ಚಿಕ್ಕಮಗಳೂರು ಹಾಗೂ ಕೇರಳದಲ್ಲಿ ಶೂಟಿಂಗ್ ನಡೆಯಲಿದೆ.

More from Filmibeat

English summary
Sandalwood Most Promising Actress Priyanka Kumar 3rd Movie With Shreyas Manju, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X