ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್: ಚಿತ್ರ ವಿತರಕನ ಬಂಧನ

ವಿದೇಶಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದರ ಫೋಟೊ ಹಾಗೂ ವಿಡಿಯೋ ಇರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಲ್ಲಿ ಅಂತಾರಾಷ್ಟ್ರೀಯ ಸಿನಿಮಾ ವಿತರಕ ರೂಪೇಶ್ (39) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ರೂಪೇಶ್ ಯಶವಂತಪುರದ ಜೆ.ಪಿ. ಪಾರ್ಕ್ ನಿವಾಸಿಯಾಗಿದ್ದು, ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ. ರೂಪೇಶ್ ಆಸ್ಟ್ರೇಲಿಯಾದಲ್ಲಿ ಕನ್ನಡ ಹಾಗೂ ಇತರೆ ದಕ್ಷಿಣ ಭಾರತೀಯ ಸಿನಿಮಾಗಳನ್ನು ವಿತರಣೆ ಮಾಡುತ್ತಿದ್ದ. ಜತೆಗೆ ಕಾರ್ಯಕ್ರಮ ಸಂಘಟನಾ ವ್ಯವಸ್ಥಾಪಕನಾಗಿ ಸಹ ಕೆಲಸ ಮಾಡುತ್ತಿದ್ದ. ಆತನನ್ನು ಬೆಂಗಳೂರಿನ ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೂರು ನೀಡಿರುವ ಮಹಿಳೆ ಆಸ್ಟ್ರೇಲಿಯಾದಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ವಾಸವಿದ್ದಾರೆ. ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರ ಪರಿಚಯವಾಗಿತ್ತು. ಇಬ್ಬರೂ ಬೆಂಗಳೂರಿನವರೇ ಆಗಿದ್ದರಿಂದ ಅವರ ನಡುವೆ ಉತ್ತಮ ಗೆಳೆತನ ಬೆಳೆದಿತ್ತು.

ಮತ್ತು ಬರಿಸಿ ದೌರ್ಜನ್ಯ

ಮತ್ತು ಬರಿಸಿ ದೌರ್ಜನ್ಯ

ಕಾರ್ಯಕ್ರಮವೊಂದಲ್ಲಿ ಪಾಲ್ಗೊಳ್ಳಲು ಅದರ ಟಿಕೆಟ್ ಪಡೆಯುವ ಸಲುವಾಗಿ ದೂರುದಾರ ಮಹಿಳೆ ರೂಪೇಶ್‌ನನ್ನು ಹೋಟೆಲ್ ಒಂದರಲ್ಲಿ ಭೇಟಿಯಾಗಿದ್ದರು. ಆ ವೇಳೆ ಅವರಿಗೆ ಮತ್ತು ಬರಿಸುವ ಔಷಧ ಬೆರೆಸಿದ್ದ ಪಾನೀಯ ಕುಡಿಸಿದ್ದ ರೂಪೇಶ್, ಬಲವಂತವಾಗಿ ಹುಕ್ಕಾ ಸೇದಿಸಿದ್ದ. ನಂತರ ಅವರ ಪರಿಸ್ಥಿತಿಯ ಲಾಭ ಪಡೆದು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಫೋಟೊ ಮತ್ತು ವಿಡಿಯೋಗಳನ್ನು ತೆಗೆದಿದ್ದ.

ಆರು ಲಕ್ಷ ರೂ ಕಿತ್ತಿದ್ದ

ಆರು ಲಕ್ಷ ರೂ ಕಿತ್ತಿದ್ದ

ಮಹಿಳೆಗೆ ಫೋಟೋ ಹಾಗೂ ವಿಡಿಯೋಗಳನ್ನು ತೋರಿಸಿದ್ದ ರೂಪೇಶ್, ತನ್ನ ಜತೆಗೆ ಲೈಂಗಿಕವಾಗಿ ಸಹಕರಿಸುವಂತೆ ಮತ್ತು ಹಣ ನೀಡುವಂತೆ ಪೀಡಿಸಲಾರಂಭಿಸಿದ್ದ. ಅದಕ್ಕೆ ಒಪ್ಪದಿದ್ದರೆ ಅವುಗಳನ್ನು ಪತಿ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಲಾರಂಭಿಸಿದ್ದ. ಇದರಿಂದ ಹೆದರಿದ್ದ ಮಹಿಳೆ 6 ಲಕ್ಷ ರೂ ನೀಡಿದ್ದರು. ಆದರೂ ಅಷ್ಟಕ್ಕೆ ಸುಮ್ಮನಾಗದ ಆತ ಪುನಃ ಕಿರುಕುಳ ನೀಡುತ್ತಿದ್ದ. ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಬೆಂಗಳೂರಿಗೆ ಬಂದು ಕಿರುಕುಳ

ಬೆಂಗಳೂರಿಗೆ ಬಂದು ಕಿರುಕುಳ

ಆತನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಹಿಳೆ ಇತ್ತೀಚೆಗೆ ಬೆಂಗಳೂರಿಗೆ ಬಂದು ಮಾವನ ಮನೆಯಲ್ಲಿ ಉಳಿದುಕೊಂಡಿದ್ದರು. ಇದನ್ನು ತಿಳಿದು ಅವರ ಇರುವಿಕೆ ಪತ್ತೆ ಹಚ್ಚಿದ್ದ ಆರೋಪಿ, ತಾನೂ ಬೆಂಗಳೂರಿಗೆ ಬಂದು ಮತ್ತೆ ಕಿರುಕುಳ ನೀಡಲು ಮುಂದುವರಿಸಿದ್ದ. ಇದರಿಂದ ನೊಂದ ಅವರು ದೂರು ಸಲ್ಲಿಸಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು.

ಕನ್ನಡ ಸಿನಿಮಾಗಳ ಬಿಡುಗಡೆ

ಕನ್ನಡ ಸಿನಿಮಾಗಳ ಬಿಡುಗಡೆ

ರೂಪೇಶ್ ಆಸ್ಟ್ರೇಲಿಯಾದ ಕೆಲವು ಚಿತ್ರಮಂದಿರಗಳ ಮಾಲೀಕರ ಪರಿಚಯವಿದೆ. ವಿತರಕನ ಕೆಲಸ ಮಾಡುತ್ತಿದ್ದ ಆತ 'ಅವನೇ ಶ್ರೀಮನ್ನಾರಾಯಣ', 'ರಂಗಿತರಂಗ' ಮುಂತಾದ ಸಿನಿಮಾಗಳನ್ನು ಆಸ್ಟ್ರೇಲಿಯಾದಲ್ಲಿ ಬಿಡುಗಡೆ ಮಾಡಿಸಿದ್ದ. ಆತನ ವಿರುದ್ಧ ಲೈಂಗಿಕ ದೌರ್ಜನ್ಯ, ಅಕ್ರಮ ಬಂಧನ ಮತ್ತು ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

More from Filmibeat

English summary
Movie distributor in Australia Roopesh, was arrested in Bengaluru for allegedly sexual harassing and blackmailing a woman.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X