ಸಂಗೊಳ್ಳಿ ರಾಯಣ್ಣ ಬಿಡುಗಡೆ ಮುಂದೂಡಿದ್ದು ಏಕೆ?

Sangolli Rayanna release date postponed to October 26
ಬಹುಕೋಟಿ ವೆಚ್ಚದ ಕನ್ನಡದ ಬಹುನಿರೀಕ್ಷಿತ ಸಂಗೊಳ್ಳಿ ರಾಯಣ್ಣ ಚಿತ್ರ ಈ ವಾರ ಕೂಡಾ ಬಿಡುಗಡೆಯಾಗುತ್ತಿಲ್ಲ. ಅಂದುಕೊಂಡಂತೆ ಎಲ್ಲಾ ನಡೆದಿದ್ದರೆ ರಾಯಣ್ಣ ಇದೇ ಶುಕ್ರವಾರ ಅಕ್ಟೋಬರ್ 19ರಂದು ತೆರೆಗೆ ಅಬ್ಬರಿಸಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಬಿಡುಗಡೆ ದಿನಾಂಕವನ್ನು ಮುಂದೂಡಲೇ ಬೇಕಾದ ಅನಿವಾರ್ಯತೆ ಚಿತ್ರತಂಡದ್ದು.

ಮಂಗಳವಾರ (ಅ 16) ಸೆನ್ಸಾರ್ ಬೋರ್ಡ್ ಸಂಗೊಳ್ಳಿ ರಾಯಣ್ಣ ಚಿತ್ರ ವೀಕ್ಷಿಸಿ U/A ಸರ್ಟಿಫಿಕೇಟ್ ನೀಡಿತ್ತು. ಆದರೆ ಚಿತ್ರದಲ್ಲಿ ಯಥೇಚ್ಚವಾಗಿ ಕುದುರೆಗಳನ್ನು ಬಳಸಿಕೊಂಡಿರುವುದರಿಂದ ಚಿತ್ರ ಬಿಡುಗಡೆಗೆ ಪ್ರಾಣಿದಯಾ ಸಂಘದ NOC ( No objection certificate) ಪಡೆಯಬೇಕೆಂದು ಸೂಚಿಸಿತು.

ಹೀಗಾಗಿ ಇದೇ ವಾರ ಚಿತ್ರ ಬಿಡುಗಡೆ ಮಾಡಬೇಕೆನ್ನುವ ಚಿತ್ರತಂಡದ ಆಸೆಗೆ ಹಿನ್ನಡೆಯಾಗಿದೆ. ದಸರಾ ರಜೆ ಆರಂಭವಾಗಿರುವ ಹಿನ್ನಲೆಯಲ್ಲಿ ಚಿತ್ರ ರಿಲೀಸ್ ಆಗಿದ್ದರೆ ಕಲೆಕ್ಷನ್ ಜೋರಿರಬಹುದೆಂದು ಚಿತ್ರತಂಡದ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದೆ.

ಆದರೆ ಮುಂದಿನ ವಾರ ಅಂದರೆ ವಿಜಯದಶಮಿಯ ಎರಡು ದಿನದ ನಂತರ ಚಿತ್ರ ಬಿಡುಗಡೆಯಾಗುವುದು ಖಾತ್ರಿ. ಅಷ್ಟರೊಳಗೆ ಏನೇನು ಪ್ರಮಾಣಪತ್ರಗಳನ್ನು ತೆಗೆದುಕೊಳ್ಳಬೇಕೋ ಅದನೆಲ್ಲಾ ತೆಗೆದುಕೊಂಡು ಚಿತ್ರ ಬಿಡುಗಡೆಗೆ ಎಲ್ಲಾ ಸಿದ್ದತೆ ಚಿತ್ರತಂಡ ನಡೆಸುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿ ಜೀವನದ ಮಹತ್ವಾಕಾಂಕ್ಷಿ ಬಿಗ್ ಬಜೆಟ್ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ರಾಯಣ್ಣನ ಸಾಹಸ, ಶೌರ್ಯ, ತ್ಯಾಗ ಮತ್ತು ಹುತಾತ್ಮತೆಯನ್ನು ಸುದೀಪ್ ತಮ್ಮ ಕಂಚಿನ ಕಂಠದಲ್ಲಿ ವರ್ಣಿಸಿರುವುದು ವಿಶೇಷ.

ಆನಂದ ಅಪ್ಪುಗೋಳ್ ಅವರು ಈ ಚಿತ್ರದನ್ನು ಸುಮಾರು ರು.32 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಜಯಪ್ರದಾ ಅವರು ಕಿತ್ತೂರು ರಾಣಿ ಚೆನ್ನಮ್ಮನಾಗಿ ಕಾಣಿಸಿದ್ದಾರೆ.ಮಲ್ಲಮ್ಮನಾಗಿ ತಾರೆ ನಿಖಿತಾ ತುಕ್ರಲ್ ಅಭಿನಯಿಸಿದ್ದಾರೆ.

ಪಾತ್ರವರ್ಗದಲ್ಲಿ ಶ್ರೀನಿವಾಸ ಮೂರ್ತಿ, ಉಮಾಶ್ರೀ, ಶಶಿಕುಮಾರ್, ಕರಿಬಸವಯ್ಯ ಹಾಗೂ ದಿವ್ಯಾ ಪರಮೇಶ್ವರನ್ ಅಭಿನಯಿಸಿದ್ದಾರೆ. ನಾಗಣ್ಣ ನಿರ್ದೇಶನದ ಚಿತ್ರಕ್ಕೆ ಯಶೋವರ್ಧನ್ ಅವರ ಸಂಗೀತ ಹಾಗೂ ಕೇಶವಾದಿತ್ಯ ಅವರ ಸಾಹಿತ್ಯ ಚಿತ್ರಕ್ಕಿದೆ.

ಚಿತ್ರದ ಲೇಟೆಸ್ಟ್ ಟ್ರೈಲರ್ ಗೆ ಇಲ್ಲಿ ಕ್ಲಿಕ್ಕಿಸಿ

More from Filmibeat

English summary
Kranthiveera Sangolli Rayanna release date postponed to October 26.Censor board has give U/A certificate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X