»   » 'ಬಿಗ್ ಬಾಸ್' ಸಂಜನಾ ಮಾಡಿಕೊಳ್ಳುವ ಎಡವಟ್ಟುಗಳು ಒಂದೊಂದಲ್ಲ.!

'ಬಿಗ್ ಬಾಸ್' ಸಂಜನಾ ಮಾಡಿಕೊಳ್ಳುವ ಎಡವಟ್ಟುಗಳು ಒಂದೊಂದಲ್ಲ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಕರ್ನಾಟಕದ ಮೂಲೆಮೂಲೆಯಲ್ಲೂ ಜನಪ್ರಿಯತೆ ಗಳಿಸಿದ ಗ್ಲಾಮರ್ ಡಾಲ್ ಸಂಜನಾ ಚಿದಾನಂದ್ ಕಳೆದ ಕೆಲ ದಿನಗಳಿಂದ ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ಒಂದೊಂದಲ್ಲ.!

'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ, ಸಂಜನಾಗೆ ಸ್ಯಾಂಡಲ್ ವುಡ್ ನಲ್ಲಿ ಡಿಮ್ಯಾಂಡ್ ಹೆಚ್ಚಾಗುತ್ತೆ ಅಂತ ಅಲ್ಲಿದ್ದವರೇ ಊಹಿಸಿದ್ದರು. ಅವರ ಊಹೆಯಂತೆ ಸಂಜನಾಗೆ ಕೆಲ ಆಫರ್ ಗಳು ಬಂದಿದ್ದು ನಿಜ.

ಬಂದ ಆಫರ್ ಗಳನ್ನೆಲ್ಲ ಅಳೆದು ತೂಗಿ ಆಲೋಚಿಸದೆ ಒಪ್ಪಿಕೊಂಡ ಸಂಜನಾ, ಈಗ 'ಸಿನಿಮಾ ಮಾಡಲ್ಲ' ಅಂತ ಕೈ ಎತ್ತುತ್ತಿದ್ದಾರಂತೆ. ಸಂಜನಾ ರವರ ಈ ವರ್ತನೆ ಕೆಲವರಿಗೆ ಕಿರಿಕಿರಿ ತಂದಿರುವುದು ಸುಳ್ಳಂತೂ ಅಲ್ಲವೇ ಅಲ್ಲ.![ಬೆಳ್ಳಿ ತೆರೆಯಲ್ಲೂ ಶುರುವಾಗಲಿದೆ ಕೀರ್ತಿಯ ಕಿರಿಕ್]

'ಕಿರಿಕ್ ಕೀರ್ತಿ' ಚಿತ್ರದಿಂದ ಔಟ್

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಎರಡನೇ ರನ್ನರ್ ಅಪ್ ಆಗಿದ್ದ 'ಕಿರಿಕ್' ಕೀರ್ತಿ (ಕೀರ್ತಿ ಕುಮಾರ್/ಕೀರ್ತಿ ಶಂಕರಘಟ್ಟ) ಸ್ಯಾಂಡಲ್ ವುಡ್ ನಲ್ಲಿ 'ಹೀರೋ' ಆಗಿ ನಟಿಸುತ್ತಿರುವ 'ಕಿರಿಕ್ ಕೀರ್ತಿ' ಚಿತ್ರಕ್ಕೆ 'ಹೀರೋಯಿನ್' ಆಗಿ ಸಂಜನಾ ಚಿದಾನಂದ್ ಆಯ್ಕೆ ಆಗಿದ್ದರು. ಆದ್ರೆ, ಈ ಚಿತ್ರದಿಂದ ಸಂಜನಾ ಹೊರಬಂದಿದ್ದಾರೆ.[ಬೆಳ್ಳಿ ತೆರೆಯಲ್ಲೂ ಶುರುವಾಗಲಿದೆ ಕೀರ್ತಿಯ ಕಿರಿಕ್]

ಫೋಟೋಶೂಟ್ ಕೂಡ ಆಗಿತ್ತು

'ಕಿರಿಕ್' ಕೀರ್ತಿಗೆ ನಾಯಕಿ ಆಗಿದ್ದ ಸಂಜನಾ ಚಿದಾನಂದ್, 'ಕಿರಿಕ್ ಕೀರ್ತಿ' ಚಿತ್ರದ ಫೋಟೋಶೂಟ್ ನಲ್ಲಿ ಭಾಗವಹಿಸಿದ್ದರು. ಇಷ್ಟೆಲ್ಲಾ ಆದ್ಮೇಲೆ, 'ನಾನು ಸಿನಿಮಾ ಮಾಡಲ್ಲ' ಅಂತ ಹೇಳಿದ್ದಾರಂತೆ ಸಂಜನಾ.['ಕಿರಿಕ್ ಕೀರ್ತಿ'ಯ ಲವ್ ಸ್ಟೋರಿಗೆ ಬಬ್ಲಿ ಬೆಡಗಿ ನಾಯಕಿ]

ಕಾರಣ ಏನು.?

ಅಷ್ಟಕ್ಕೂ 'ಕಿರಿಕ್ ಕೀರ್ತಿ' ಚಿತ್ರದ ಕಥೆಯನ್ನ ಚಿತ್ರತಂಡದವರು ಸಂಜನಾಗೆ ಹೇಳಿರಲಿಲ್ಲವಂತೆ. ಎಲ್ಲರೂ ಗೊತ್ತಿರುವವರೇ ಅಂತ ಮೊದಲು ಸಂಜನಾ ಒಪ್ಪಿಕೊಂಡಿದ್ದರಂತೆ. ಆದ್ರೆ, ನಂತರ ಅವರಿಗೆ ಯಾವುದೂ ಸರಿ ಕಾಣಲಿಲ್ಲವಂತೆ. ಹೀಗಾಗಿ, 'ಕಿರಿಕ್ ಕೀರ್ತಿ' ಚಿತ್ರದಿಂದ ಹೊರಬಂದೆ ಎನ್ನುತ್ತಾರೆ ನಟಿ ಸಂಜನಾ.

ಎರಡು ಸಿನಿಮಾ ಕೈಯಲ್ಲಿದೆ

'ಕಿರಿಕ್ ಕೀರ್ತಿ' ಚಿತ್ರವನ್ನ ಬಿಟ್ಟರೆ, ಸಂಜನಾ ಕೈಯಲ್ಲಿ ಎರಡು ಚಿತ್ರಗಳಿವೆ. ಒಂದು 'ಉಡುಂಬ' ಮತ್ತೊಂದು ಹೆಸರಿಡದ ಚಿತ್ರದಲ್ಲಿ 'ಬಿಗ್ ಬಾಸ್' ಖ್ಯಾತಿಯ ನಿರಂಜನ್ ದೇಶಪಾಂಡೆ ಜೊತೆ ಸಂಜನಾ ಆಕ್ಟ್ ಮಾಡಲಿದ್ದಾರೆ.[ಅಂತೂ ಇಂತೂ ನಿರಂಜನ್ ದೇಶಪಾಂಡೆಗೆ ಖುಲಾಯಿಸಿತು ಅದೃಷ್ಟ.!]

ಎಡವಟ್ಟುಗಳು ಒಂದಾ ಎರಡಾ.?

ಸದ್ಯ 'ಕಿರಿಕ್ ಕೀರ್ತಿ' ಚಿತ್ರತಂಡದಿಂದ ಹೊರಬಂದು 'ಕಿರಿಕ್' ಮಾಡಿಕೊಂಡಿರುವ ಸಂಜನಾ, ಕೆಲ ದಿನಗಳ ಹಿಂದೆ ಫೇಸ್ ಬುಕ್ ನಲ್ಲೂ 'ಟ್ರೋಲ್ ಪೇಜ್'ಗಳ ಕೆಂಗಣ್ಣಿಗೆ ಗುರಿಯಾಗಿದ್ದರು. 'ಟ್ರೋಲ್ ಪೇಜ್'ಗಳ ವಿರುದ್ಧ ಸಿಡಿಮಿಡಿಗೊಂಡಿದ್ದ ಸಂಜನಾ ಬಗ್ಗೆ ಫೇಸ್ ಬುಕ್ ನಲ್ಲಿ 'ಟ್ರೋಲ್'ಗಳ ಮೂಲಕ ಲೇವಡಿ ಮಾಡಲಾಗಿತ್ತು.

'ತಾತನ ತಿಥಿ' ವಿವಾದ

ಇನ್ನೂ 'ತಾತನ ತಿಥಿ ಮೊಮ್ಮಗನ ಪ್ರಸ್ತ' ಎಂಬ ಚಿತ್ರದಲ್ಲಿ ತಮ್ಮ ಹೆಸರನ್ನ ಬಳಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಸಂಜನಾ ಗರಂ ಆಗಿದ್ದರು.

ಐಟಂ ಸಾಂಗ್

''ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುವುದಿಲ್ಲ. ಮುಖ್ಯ ಪಾತ್ರ ಸಿಕ್ಕರೆ ಮಾತ್ರ ನಟಿಸುತ್ತೇನೆ'' ಎಂದು 'ಬಿಗ್ ಬಾಸ್' ಮನೆಯಲ್ಲಿ ಹೇಳುತ್ತಿದ್ದ ಸಂಜನಾ, ಶೋದಿಂದ ಹೊರಗೆ ಬಂದ್ಮೇಲೆ 'ಮೊಂಬತ್ತಿ' ಚಿತ್ರದ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದರು.['ಐಟಂ ಹುಡುಗಿ'ಯಾದ 'ಬಿಗ್ ಬಾಸ್' ಸಂಜನಾ!]

ಈಗ 'ಸಂಜು ಮತ್ತು ನಾನು'

ಸದ್ಯ ಸಂಜನಾ ಕಲರ್ಸ್ ವಾಹಿನಿಗಾಗಿ 'ಸಂಜು ಮತ್ತು ನಾನು' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಕೂಡ ಇದ್ದಾರೆ. ಈ ತಂಡ ಹಾಗೂ ಬಾಕಿ ಎರಡು ಚಿತ್ರತಂಡಗಳ ಜೊತೆ ಸಂಜನಾ ಕಿರಿಕ್ ಮಾಡಿಕೊಂಡು ಎಡವಟ್ಟು ಮಾಡಿಕೊಳ್ಳದಿದ್ದರೆ ಸಾಕು.[ತೆರೆಮೇಲೆ ಬಂತು 'ಬಿಗ್ ಬಾಸ್' ಪ್ರಣಯ ಪಕ್ಷಿಗಳ 'ತ್ರಿಕೋನ' ಪ್ರೇಮಕಥೆ!]

English summary
Sanjana Chidanand of Bigg Boss Kannada 4 fame, walked out from Kannada Movie 'Kirik Keerthi' which features 'Kirik Keerthi' in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada