»   » ಬೆಳ್ಳಿ ತೆರೆಯಲ್ಲೂ ಶುರುವಾಗಲಿದೆ ಕೀರ್ತಿಯ ಕಿರಿಕ್

ಬೆಳ್ಳಿ ತೆರೆಯಲ್ಲೂ ಶುರುವಾಗಲಿದೆ ಕೀರ್ತಿಯ ಕಿರಿಕ್

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ನ ರನ್ನರ್ ಅಪ್ ಆದ ಕಿರಿಕ್ ಕೀರ್ತಿ ಈಗ ಬೆಳ್ಳಿ ತೆರೆಯಲ್ಲಿ ಮಿಂಚಲು ಬರುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ವೊಂದರ ನಾಯಕ ರಾಗಿ ಕಾಣಿಸಿಕೊಳ್ಳಲಿದ್ದಾರೆ.['ಲಾರ್ಡ್' ಪ್ರಥಮ್ ಕಂಡ್ರೆ 'ಕಿರಿಕ್' ಕೀರ್ತಿಗೆ ಏನ್ ಇಷ್ಟ.? ಏನ್ ಕಷ್ಟ.?]

ಸಾಮಾಜಿಕ ಜಾಲತಾಣ ಮತ್ತು ಬಿಗ್ ಬಾಸ್ ಮನೆಯಿಂದ ಹೆಚ್ಚು ಖ್ಯಾತಿ ಗಳಿಸಿರುವ ಕಿರಿಕ್ ಕೀರ್ತಿ ಗಾಂದೀನಗರಕ್ಕೆ ಎಂಟ್ರಿ ಕೊಡುತ್ತಿದ್ದು, ಅವರ ಹೆಸರಲ್ಲೇ ಒಂದು ಸಿನಿಮಾ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ ಓದಿ.

ಕೀರ್ತಿಯ 'ಕಿರಿಕ್ ಕೀರ್ತಿ' ಸಿನಿಮಾ

'ಬಿಗ್ ಬಾಸ್ ಕನ್ನಡ 4' ರನ್ನರ್ ಅಪ್ ಕಿರಿಕ್ ಕೀರ್ತಿ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ, ಈಗ ಕರ್ನಾಟಕದಲ್ಲಿ ಇನ್ನಷ್ಟು ಮನೆ ಮಾತಾಗಿದ್ದಾರೆ. ಈಗ ಅವರದ್ದೇ ಹೆಸರಿನಲ್ಲಿ 'ಕಿರಿಕ್ ಕೀರ್ತಿ' ಎಂಬ ಸಿನಿಮಾ ನಿರ್ಮಾಣವಾಗುತ್ತಿದೆ.[ಪ್ರಥಮ್ ಹಾಗೂ ಕೀರ್ತಿ ನಡುವೆ ಇದ್ದದ್ದು ಸ್ಪರ್ಧೆಯೋ.? ಜಿದ್ದೋ.?]

'ಕಿರಿಕ್ ಕೀರ್ತಿ' ಚಿತ್ರ ನಿರ್ದೇಶಕರು ಯಾರು?

ಅಂದಹಾಗೆ 'ಕಿರಿಕ್ ಕೀರ್ತಿ' ಸಿನಿಮಾವನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಡೈರೆಕ್ಟ್ ಮಾಡಲಿದ್ದು, ಕಿಲ್ಲಿಂಗ್ ವೀರಪ್ಪನ್ ಖ್ಯಾತಿಯ ನಿರ್ಮಾಪಕ ಸುಧೀಂದ್ರ ಅವರು ನಿರ್ಮಾಣ ಮಾಡುತ್ತಿದ್ದಾರೆ.['ಬಿಗ್ ಬಾಸ್' ರನ್ನರ್ ಕೀರ್ತಿಗೆ 10ಲಕ್ಷ ಕೊಟ್ಟ ಕಿಚ್ಚ ಸುದೀಪ್!]

'ಕಿರಿಕ್ ಕೀರ್ತಿ' ಚಿತ್ರಕಥೆ ಏನು?

ಚಿತ್ರದಲ್ಲಿ ಕೀರ್ತಿ ಒಬ್ಬ ಸಾಮಾನ್ಯ ಹುಡುಗನಾಗಿ, ಟೀ ಸ್ಟಾಲ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಯಾವುದೇ ಹಿರೋಯಿಸಂ ಇರುವುದಿಲ್ಲವಂತೆ. ಇದೊಂದು ರೊಮ್ಯಾಂಟಿಕ್ ಮರ್ಡರ್ ಮಿಸ್ಟರಿ ಸಿನಿಮಾ ಅಂತೆ.

'ಕಿರಿಕ್ ಕೀರ್ತಿ'ಗೆ ಚಂದನ್ ಶೆಟ್ಟಿ ಮ್ಯೂಸಿಕ್

ಓಂ ಪ್ರಕಾಶ್ ರಾವ್ ಬರೆದು, ಆಕ್ಷನ್ ಕಟ್ ಹೇಳಲಿರುವ 'ಕಿರಿಕ್ ಕೀರ್ತಿ' ಸಿನಿಮಾಗೆ, Rapper ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಕೀರ್ತಿ ನಿರ್ದೇಶನದ ಸಿನಿಮಾ ತೆರೆಗೆ

ಕಿರಿಕ್ ಕೀರ್ತಿ, ಅವರ ಸ್ನೇಹಿತರೊಂದಿಗೆ ಒಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಆ ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆಯಂತೆ.

English summary
'Big Boss Kannada 4' Runner up Kirik Keerthi turns to Film Hero. He will act in his own name film title 'Kirik Keethi'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada