"ಅವನ ಹೆಸರು ಹೇಳಿ ಬಾಯಿ ಹೊಲಸು ಮಾಡಿಕೊಳ್ಳಲ್ಲ"; ಪ್ರಶಾಂತ್ ಸಂಬರ್ಗಿಗೆ ಪರೋಕ್ಷ ಎಚ್ಚರಿಕೆ ಕೊಟ್ಟ ಸಂಜನಾ?
ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ನಲ್ಲಿ ಸಂಜನಾ ಗಲ್ರಾನಿ ಹೆಸರು ಕೇಳಿ ಬಂದಿತ್ತು. ಆಗ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಸುದ್ದಿ ದೊಡ್ಡ ಮಟ್ಟಕ್ಕೆ ಸಂಚಲನವನ್ನು ಸೃಷ್ಟಿಸಿತ್ತು. ಸುಮಾರು ಮೂರು ತಿಂಗಳ ಕಾಲ ನಟಿ ಸಂಜನಾ ಗಲ್ರಾನಿ ಜೈಲು ವಾಸವನ್ನು ಅನುಭವಿಸಬೇಕಾಗಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಈಗ ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ನಿಂದ ಸಂಜನಾ ಗಲ್ರಾನಿ ಹೊರಬಂದಿದ್ದು, ಕ್ಲೀನ್ ಚಿಟ್ ಸಿಕ್ಕಿದೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಸಂಜನಾ ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಬಗ್ಗೆ ಮಾತಾಡಿರಲಿಲ್ಲ. ಆದರೆ, ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ ಬಳಿಕ ಸಂಜನಾ ಆಕ್ಟಿವ್ ಆಗಿದ್ದಾರೆ. ಸದ್ಯ ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ವಿರುದ್ಧ ಅವರ ಹೆಸರನ್ನು ತೆಗೆಯದೆ ಕಿಡಿಕಾರಿದ್ದಾರೆ.

ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ನಲ್ಲಿ ತನ್ನ ಹೆಸರು ಕೇಳಿ ಬಂದಾಗ, ಸಾಮಾಜಿಕ ಕಾರ್ಯಕರ್ತ ಅಂತ ಹೇಳಿಕೊಂಡು ನನ್ನ ಹೆಸರನ್ನು ಎತ್ತಿದ್ದರು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸಾಮಾಜಿಕ ಕಾರ್ಯಕರ್ತನಿಗೂ ಶೃತಿ ಹರಿಹರನ್, ಅನುಶ್ರೀ, ನಿವೇದಿತಾ ಗೌಡ ಹಾಗೂ ನನ್ನ ಕೇಸ್‌ಗೂ ಯಾವುದೇ ರೀತಿ ಸಂಬಂಧವಿರಲಿಲ್ಲ. ಆದರೂ ಎಗರಿ ಬಂದಿದ್ದು ಪಬ್ಲಿಸಿಟಿಗೋಸ್ಕರ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಂಜನಾ ಗಲ್ರಾನಿಯ ಈ ಹೇಳಿಕೆಯ ಒಂದು ಝಲಕ್ ಇಲ್ಲಿದೆ.
"ಡ್ರಗ್ ಕೇಸ್‌ನಲ್ಲಿ ಪ್ಲಾಂಟ್ ಮಾಡಿದ್ರು"
"ಸಾಮಾಜಿಕ ಕಾರ್ಯಕರ್ತ ಅಂತ ಓಡಾಡುತ್ತಾ ಇರುತ್ತಾರಲ್ಲ. ಅವರನ್ನು ನಾನು ಯಾವತ್ತೂ ಮುಖಾ ಮುಖಿ ನೋಡಿಲ್ಲ. ಅವರು ಸಂಜನಾ ಮನೆಯನ್ನು ನೋಡಲೇ ಬೇಕು ಅಂತ ಅವರು ಮೀಡಿಯಾದಲ್ಲಿ ಗಟ್ಟಿಯಾಗಿ ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ನಲ್ಲಿ ಪ್ಲಾಂಟ್ ಮಾಡುತ್ತಾರೆ. ಯಾರಾದರೂ ಆರ್ಟಿಸ್ಟ್‌ಗೆ ಟೈಮ್ ಬಂದರೆ, ಈ ಸಾಮಾಜಿಕ ಕಾರ್ಯಕರ್ತ ಅಂತ ಇದ್ದಾರಲ್ಲ ಅವರು ಮುಂದೆ ಬರುತ್ತಾರೆ." ಎಂದು ನಟಿ ಸಂಜನಾ ಗಲ್ರಾನಿ ಕಿಡಿಕಾರಿದ್ದಾರೆ.

"ನನ್ನ ಬಾಯಲ್ಲಿ ಅವನ ಹೆಸರು ಹೇಳಲ್ಲ"
"ಬಡವರ ಪರವಾಗಿ ಕೆಲಸ ಮಾಡುತ್ತಿದ್ದೇನೆ ಅಂತ ಆ ಸಾಮಾಜಿಕ ಕಾರ್ಯಕರ್ತ ಓಡಾಡುತ್ತಿದ್ದಾನಲ್ಲ, ಅವನ ಹೆಸರನ್ನು ನನ್ನ ಬಾಯಲ್ಲಿ ಹೇಳಿ ಹೊಲಸು ಮಾಡಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಅವರು ಯಾವ ಬಡವರ ಪರವಾಗಿ ನಿಂತಿದ್ದಾನೆ. ಯಾವ ಸೇವೆ ಕಾರ್ಯಕ್ರಮ ಮಾಡಿದ್ದಾನಾ? ಯಾವ ಸೇವೆ ಮಾಡಿದ್ದಾನೆ? ಯಾರಿಗಾದರೂ ಚಾರಿಟಿ ಕೆಲಸ ಮಾಡಿದ್ದಾನಾ? ಪ್ರವಾಹ ಬಂದಿದೆ. ಮನೆಗಳು ಒಡೆದು ಹೋಗಿವೆ. ಯಾಕೆ ಹೋಗಿ ಅಲ್ಲಿ ಸಾಮಾಜಿಕ ಕೆಲಸ ಮಾಡುತ್ತಿಲ್ಲ." ಎಂದು ಸಂಜನಾ ಕರ್ನಾಟಕ ಟಿವಿಯಲ್ಲಿ ಪ್ರಶ್ನೆ ಮಾಡಿದ್ದಾರೆ.
"ಅಣ್ಣಾ ಹಜಾರೆ ಸಾಮಾಜಿಕ ಕಾರ್ಯಕರ್ತ"
"ಸಾಮಾಜಿಕ ಕಾರ್ಯಕರ್ತ ಅಂದರೆ, ಅಣ್ಣಾ ಹಜಾರೆಯನ್ನು ಕರೆಯಿರಿ. ಹೋರಾಟ ಮಾಡಿ ಭ್ರಷ್ಟಚಾರದ ವಿರುದ್ಧ ನಿಂತಿರೋರು. ಇವರೆಲ್ಲ ಸಾಮಾಜಿಕ ಕಾರ್ಯಕರ್ತ ಅಲ್ಲ. ಸೆಲ್ಫ್, ಪಬ್ಲಿಸಿಟಿ, ಹುಚ್ಚಿರುವ ಕಾರ್ಯಕರ್ತ ಇವರು. ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ನಡುವೆ ಏನೋ ಪರ್ಸನಲ್ ವಿಷಯ ಬಂತು. ಆಗ ಇವನಿಗೆ ಏನು ಸಂಬಂಧವಿರಲಿಲ್ಲ. ಎಗರಿದರು ಪಬ್ಲಿಸಿಟಿಗೋಸ್ಕರ. ನಂದೂ ಏನೂ ಸಂಬಂಧವಿರಲಿಲ್ಲ ಎಗರಿದರು ಪಬ್ಲಿಸಿಟಿಗೋಸ್ಕರ. ಅನುಶ್ರೀದೂ ಏನೂ ಸಂಬಂಧವಿರಲಿಲ್ಲ ಎಗರಿದ್ರು ಪಬ್ಲಿಸಿಟಿಗೋಸ್ಕರ. ನಿವೇದಿತಾ ಗೌಡಗೂ ಸಂಬಂಧವಿಲ್ಲ ಎಗರಿದರು ಪಬ್ಲಿಸಿಟಿಗೋಸ್ಕರ." ಎಂದು ಸಂಜನಾ ಕಿಡಿಕಾರಿದ್ದಾರೆ.
ದರ್ಶನ್ ಬಗ್ಗೆ ಮಾತಾಡುತ್ತಿರೋದ್ಯಾಕೆ?
ಇದೇ ಸಂದರ್ಭದಲ್ಲಿ ದರ್ಶನ್ ಜೈಲಿಗೆ ಹೋಗಿದ್ದಾರೆ ಈ ವೇಳೆ ಬಂದು ಅವರ ವಿರುದ್ಧ ಮಾತಾಡಿ, ಪಬ್ಲಿಸಿಟಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಸಂಜನಾ ಗಲ್ರಾನಿ ಹೆಸರು ಹೇಳದೆ ಪ್ರಶಾಂತ್ ಸಂಬರಗಿ ವಿರುದ್ಧ ಕಿಡಿಕಾರಿದ್ದಾರೆ. ಸಾಮಾಜಿಕ ಕಾರ್ಯಕರ್ತ ಅಂದುಕೊಂಡು ಇವರೇ ಪಬ್ಲಿಸಿಟಿ ಗೋಸ್ಕರ ಹೀಗೆಲ್ಲ ಮಾಡುತ್ತಿದ್ದಾರೆಂದು ಸಂಜನಾ ಆರೋಪ ಮಾಡಿದ್ದಾರೆ.


Click it and Unblock the Notifications











