ಮತ್ತೆ ಬಂದ ಅಧೀರ: ಕೆಜಿಎಫ್ ಚಾಪ್ಟರ್ 2 ಡಬ್ಬಿಂಗ್ ಮುಗಿಸಿ ಹೇಳಿದ್ದೇನು?

ಭಾರತದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ ಚಾಪ್ಟರ್ 2'. ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೋ..? ನಾವು ಯಾವಾಗ 'ಕೆಜಿಎಫ್ 2' ನೋಡುತ್ತೆವೋ ಅಂತ ಕಾದು ಕೂತಿದ್ದಾರೆ. ಆದರೆ ಸಿನಿಮಾ ರಿಲೀಸ್‌ಗೆ ಇನ್ನೂ ನಾಲ್ಕು ತಿಂಗಳು ಬಾಕಿ ಉಳಿದಿದೆ. ಹೀಗಾಗಿ ಯಶ್ ಅಭಿಮಾನಿಗಳು 'ಕೆಜಿಎಫ್ ಚಾಪ್ಟರ್ 2' ನೋಡಲು ಇನ್ನೂ ಸಾಕಷ್ಟು ಸಮಯ ಕಾಯಲೇ ಬೇಕು. ಅಷ್ಟರಲೇ ಚಿತ್ರತಂಡ ಸಿಹಿ ಸುದ್ದಿಯೊಂದನ್ನು ನೀಡಿದೆ.

'ಕೆಜಿಎಫ್ ಚಾಪ್ಟರ್ 2' ಸಿನಿಮಾ ಬಗ್ಗೆ ಸಖತ್ ಸುದ್ದಿಯೊಂದು ಹೊರಬಿದ್ದಿದೆ. ಸಿನಿಮಾ ಬಿಡುಗಡೆಗೆ ಇನ್ನೂ ನಾಲ್ಕು ತಿಂಗಳು ಇದೆ. ಅಷ್ಟರಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿದ್ದಾರೆ. ಅದರಲ್ಲೂ ಬಾಲಿವುಡ್ ದಿಗ್ಗಜ ಸಂಜಯ್ ದತ್‌ ಕೆಜಿಎಫ್ ಅಖಾಡಕ್ಕೆ ಮತ್ತೆ ಎಂಟ್ರಿಕೊಟ್ಟಿದ್ದಾರೆ. ಇದೇ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.

ಕೆಜಿಎಫ್ 2 ಪೋಸ್ಟ್ ಪ್ರೊಡಕ್ಷನ್ ಶುರು

ಕೆಜಿಎಫ್ 2 ಪೋಸ್ಟ್ ಪ್ರೊಡಕ್ಷನ್ ಶುರು

'ಕೆಜಿಎಫ್ 2' ಇಡೀ ವಿಶ್ವವೇ ಎದುರು ನೋಡುತ್ತಿರುವ ಸಿನಿಮಾ. ರಾಕಿಂಗ್ ಸ್ಟಾರ್ ಯಶ್ ಮತ್ತೆ ತೆರೆಮೇಲೆ ನೋಡುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾದುಕೂತಿದ್ದಾರೆ. ಆದರೆ, ಕೆಲವು ದಿನಗಳಿಂದ ಕೆಜಿಎಫ್ 2 ಸಿನಿಮಾ ಬಗ್ಗೆ ಮಾಹಿತಿ ಇರಲಿಲ್ಲ. ಆದ್ರೀಗ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ನಿರ್ದೇಶಕ ಪ್ರಶಾಂತ್ ಮತ್ತೆ 'ಕೆಜಿಎಫ್ 2' ಸಿನಿಮಾ ಕಡೆ ಮುಖ ಮಾಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಸೂಚನೆಯನ್ನು ಈಗ ಚಿತ್ರತಂಡವೇ ನೀಡಿದೆ. ಸಂಜಯ್ ದತ್ ಈಗ ಪಾತ್ರಕ್ಕೆ ಡಬ್ ಮಾಡಿದ್ದಾರೆ.

'ಅಧೀರ' ಈಸ್ ಬ್ಯಾಕ್ ಇನ್ ಆಕ್ಷನ್

'ಕೆಜಿಎಫ್ 2' ಸಿನಿಮಾದ ಅಧೀರ ಪಾತ್ರಕ್ಕೆ ಸಂಜಯ್ ದತ್ ಡಬ್ ಮಾಡಿರುವ ಫೋಟೊಗಳು ಹರಿದಾಡುತ್ತಿದೆ. ಸ್ವತಃ ಸಂಜಯ್ ದತ್ ಡಬ್ಬಿಂಗ್ ಫೋಟೊಗಳನ್ನು ಶೇರ್ ಮಾಡಿದ್ದು, " ಅಧೀರ ಬ್ಯಾಕ್ ಇನ್ ಆಕ್ಷನ್.. ಡಬ್ಬಿಂಗ್ ಕೆಲಸ ಮುಗಿದಿದೆ. ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ರಂದು 2022ಗೆ ಥಿಯೇಟರ್‌ಗೆ ಬರುತ್ತಿದೆ." ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಸಂಜಯ್ ದತ್ ಇವರಿಬ್ಬರ ಕಾದಾಟವನ್ನು ತೆರೆಮೇಲೆ ನೋಡುವುದಕ್ಕೆ ಪ್ರೇಕ್ಷಕರು ಕಾದು ಕೂತಿದ್ದಾರೆ.

ಸಂಜು ಬಾಬಾ ಜೊತೆ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ 'ಕೆಜಿಎಫ್ 2' ಗೆ ಕೊಂಚ ಮಟ್ಟಿಗೆ ಬ್ರೇಕ್ ನೀಡಿದ್ದರು. ಆದ್ರೀಗ ಸಿನಿಮಾ ಬಿಡುಗಡೆಗೆ ಕೆಲವು ಸಮಯ ಬಾಕಿ ಉಳಿದಿದೆ ಅನ್ನುವಾಗಲೇ ಪ್ರಶಾಂತ್ ನೀಲ್ ಮತ್ತೆ ಆಕ್ಟೀವ್ ಆಗಿದ್ದಾರೆ. ಡಬ್ಬಿಂಗ್ ಸ್ಟುಡಿಯೋದಲ್ಲಿ ಸಂಜಯ್ ದತ್ ಜೊತೆ ಪ್ರಶಾಂತ್ ನೀಲ್ ಕೂಡ ಕಾಣಿಸಿಕೊಂಡಿದ್ದು, ಯಶ್ ಅಭಿಮಾನಿಗಳಲ್ಲಿ ಹೊಸ ಹುರುಪು ಮೂಡಿದೆ. ಇವರು ಕೂಡ ಸಂಜಯ್ ದತ್ ಫೋಟೊಗಳನ್ನು ಶೇರ್ ಮಾಡಿದ್ದು, " ಅಧೀರ ಇಸ್ ಬ್ಯಾಕ್" ಏಪ್ರಿಲ್ 14, 2022ರಂದು ಬೆಳ್ಳೆತೆರೆಯಲ್ಲಿ ಸಿಗೋಣ." ಎಂದು ಸಂಜಯ್ ದತ್‌ಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

'ಸಲಾರ್' ಸಿನಿಮಾದಲ್ಲಿ ಪ್ರಶಾಂತ್ ಬ್ಯುಸಿ

'ಸಲಾರ್' ಸಿನಿಮಾದಲ್ಲಿ ಪ್ರಶಾಂತ್ ಬ್ಯುಸಿ

'ಕೆಜಿಎಫ್ 2' ಸಿನಿಮಾದ ಶೂಟಿಂಗ್ ಮುಗಿಸಿ, ಪ್ರಶಾಂತ್ ನೀಲ್ ಸೀದಾ ಸಲಾರ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಪ್ರಭಾಸ್ ಸಿನಿಮಾ 'ಸಲಾರ್' ಕೂಡ ಚಿತ್ರೀಕರಣ ನಡೆಯುತ್ತಿದ್ದು, ಸದ್ಯ ಸಿನಿಮಾಗೆ ಕೊಂಚ ಮಟ್ಟಿಗೆ ಬ್ರೇಕ್ ನೀಡಲಾಗಿದೆ. ಈಗ ದಿಢೀರನೇ ಕೆಜಿಎಫ್ 2 ಡಬ್ಬಿಂಗ್ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ ಮತ್ತೊಂದು ದಾಖಲೆ ಬರೆಯುವ ಟೀಸರ್ ರಿಲೀಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Sanjay Dutt finished Yash starrer KGF 2 dubbing says Adheera is back in action. Director Prashanth Neel also shares dubbing photos with him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X