ಕೊನೆಗೂ ಸ್ಥಳೀಯ ಪ್ರತಿಭೆಗಳಿಗೆ ಮಣೆ ಹಾಕಿದ RCB;ಬೆಂಗಳೂರಿನ ಸಂಗೀತ ಸಂಜೆಯಲ್ಲಿ ಸಂಜಿತ್ ಹೆಗ್ಡೆ, ಐಶ್ವರ್ಯಾ!
ಐಪಿಎಲ್ (IPL) ಪಂದ್ಯಗಳು ಆರಂಭ ಆಗುವುದಕ್ಕೆ ಇನ್ನೇನು ಕೆಲವೇ ದಿನಗಳ ಉಳಿದಿವೆ. ಅದಕ್ಕೂ ಮುನ್ನ ಆರ್‌ಸಿಬಿ ಪ್ರತಿ ವರ್ಷದಂತೆ ಅನ್‌ಬಾಕ್ಸ್ ಇವೆಂಟ್ ಅನ್ನು ಹಮ್ಮಿಕೊಂಡಿದೆ. ಇದರಲ್ಲಿ ಆರ್‌ಸಿಬಿ ತಂಡದ ಆಟಗಾರು ಭಾಗವಹಿಸುತ್ತಾರೆ. ಸಂಜೆ ವೇಳೆ ಸಂಗೀತ ಸಂಜೆ ಕೂಡ ಇರುತ್ತೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳಿಗೆ ಪಂದ್ಯ ಆರಂಭಕ್ಕೂ ಮುನ್ನ ಭರ್ಜರಿ ಮನರಂಜನೆ ಸಿಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತವರು ಅಂದರೆ, ಬೆಂಗಳೂರಿನಲ್ಲಿ ಪ್ರತಿ ವರ್ಷ ಅನ್‌ಬಾಕ್ಸ್ ಇವೆಂಟ್ ನಡೆಯುತ್ತೆ. ಹಾಗೇ ಈ ಬಾರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 17ರಂದು ಅಪ್ಪು ಹುಟ್ಟಿದ ದಿನವೇ ಈ ವಿಶೇಷ ಇವೆಂಟ್ ಹಮ್ಮಿಕೊಂಡಿದೆ. ಈ ಬಾರಿ ಕನ್ನಡದ ಗಾಯಕರಾದ ಸಂಜಿತ್ ಹೆಗ್ಡೆ ಹಾಗೂ ಐಶ್ವರ್ಯಾ ರಂಗರಾಜನ್ ಇಬ್ಬರೂ ಕನ್ನಡಿಗರು ಹಾಗೂ ಆರ್‌ಸಿಬಿ ಅಭಿಮಾನಿಗಳ ಸಮ್ಮುಖದಲ್ಲಿ ಪರ್ಫಾರ್ಮ್ ಮಾಡಲಿದ್ದಾರೆ.

ಈಗಾಗಲೇ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ಗೆ ಚಿನ್ನಸ್ವಾಮಿ ಸ್ಟೆಡಿಯಂನ ಎಲ್ಲಾ ಟಿಕೆಟ್‌ಗಳು ಸೇಲ್ ಆಗಿವೆ. ಫುಲ್ ಕ್ರೌಡ್‌ನಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್ ನಡೆಯಲಿದೆ. ಇದೇ ವೇಳೆ ಸ್ಥಳೀಯ ಪ್ರತಿಭೆಗಳಿಗೆ ಆರ್‌ಸಿಬಿ ಈ ಬಾರಿ ಅವಕಾಶ ನೀಡದಕ್ಕೆ ಮೆಚ್ಚುಗೆನೂ ವ್ಯಕ್ತವಾಗುತ್ತಿದೆ. ಆರ್‌ಸಿಬಿಯ ಈ ನಡೆಗೆ ಕನ್ನಡಿಗರು ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ, ಸಂಜಿತ್ ಹೆಗ್ಡೆ, ಐಶ್ವರ್ಯಾ ರಂಗರಾಜನ್ ಆಯ್ಕೆ ಮಾಡಿದ್ದಕ್ಕೆ ಫ್ಯಾನ್ಸ್ ಕಾಮೆಂಟ್ ಏನು? ಈ ಇವೆಂಟ್‌ನಲ್ಲಿ ಏನು ಇರುತ್ತೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮಾರ್ಚ್ 17ರಂದು ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್ ಅಂತ ಅನೌನ್ಸ್ ಮಾಡುತ್ತಿದ್ದಂತೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಟಿಕೆಟ್ ಬುಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಆಗಿವೆ. ಒಂದು ವರದಿಯ ಪ್ರಕಾರ, ಟಿಕೆಟ್ ಬುಕಿಂಗ್ ಆದ ಕೇವಲ 60 ನಿಮಿಷಗಳಲ್ಲಿ ಆನ್‌ಬಾಕ್ಸ್ ಇವೆಂಟ್‌ನ ಎಲ್ಲಾ ಟಿಕೆಟ್‌ಗಳು ಕೂಡ ಸೋಲ್ಡ್ ಔಟ್ ಆಗಿವೆ. ಕಳೆದ ವರ್ಷ ಕೂಡ ಚಿನ್ನಾಸ್ವಾಮಿ ಸ್ಟೇಡಿಯಂ ಹೌಸ್‌ಫುಲ್ ಆಗಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕನ್ನಡದ ಗಾಯಕರಾದ ಸಂಜಿತ್ ಹೆಗ್ಡೆ ಹಾಗೂ ಐಶ್ವರ್ಯಾ ರಂಗರಾಜನ್ ಇಬ್ಬರೂ ಪರ್ಫಾಮೆನ್ಸ್ ಕೊಡುತ್ತಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ನಮ್ಮ ಕರುನಾಡ ತಾರೆಗಳು, ಸಂಜಿತ್ ಹೆಗ್ಡೆ ಹಾಗೂ ಐಶ್ವರ್ಯ ರಂಗರಾಜನ್. ಬೆಂಗಳೂರು, ಒಂದು ರೋಮಾಂಚಕ ಸಂಗೀತ ಸಂಜೆಗೆ ಸಿದ್ಧರಾಗಿ." ಎಂದು ಆರ್‌ಸಿಬಿ ಪೋಸ್ಟ್ ಮಾಡಿದೆ. ಈ ಪೋಸ್ಟ್‌ಗೆ ಕನ್ನಡಿಗರು ಕಾಮೆಂಟ್‌ಗಳು ಕೂಡ ಅಷ್ಟೇ ಮಜವಾಗಿದೆ.
ನೆಟ್ಟಿಗರೊಬ್ಬರು "ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡ ಹಾಡು" ಎಂದು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಮೆಚ್ಚಿದೆ ಕಣಯ್ಯಾ, ನೀನು ಸ್ಥಳೀಯರಿಗೆ ಅವಕಾಶ ಕೊಟ್ಟಿದ್ದಕ್ಕೆ" ಎಂದು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಅನ್ನು ಹಾಡಿ ಹೊಗಳಿದ್ದಾರೆ. ಹಾಗೇ ಮತ್ತೊಬ್ಬರು "ಆಟದಲ್ಲಿ ಕೂಡ ಕರ್ನಾಟಕದ ಆಟಗಾರರಿಗೆ ಅವಕಾಶ ನೀಡಿ" ಎಂದು ಸಲಹೆ ನೀಡಿದ್ದರೆ. ಇನ್ನೊಬ್ಬರು "ನಮ್ಮ ಬೆಂಗಳೂರು ನಮ್ಮ ಸಂಚಿತ್" ಎಂದು ಹೇಳಿಕೊಂಡಿದ್ದಾರೆ.
ಇನ್ನು ಈ ಬಾರಿ ಆರ್‌ಸಿಬಿ ತಂಡದಲ್ಲಿ ಹೊಸ ಆಟಗಾರರ ಸೇರ್ಪಡೆಯಾಗಿದೆ. ತಂಡಕ್ಕೆ ಹೊಸ ನಾಯಕನ ಆಯ್ಕೆಯಾಗಿದೆ. ರಜತ್ ಪಾಟಿದರ್ ಈ ಬಾರಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಈ ಬಾರಿ ಅನ್‌ಬಾಕ್ಸ್ ಮತ್ತಷ್ಟು ಕುತೂಹಲ ಕೆರಳಿಸಿದೆ. ಈ ಇವೆಂಟ್‌ನಲ್ಲಿ ತಂಡದ ನಾಯಕ ರಜತ್ ಪಾಟಿದರ್ ಸೇರಿದಂತೆ ವಿರಾಟ್ ಕೊಹ್ಲಿ ಹಾಗೂ ಪ್ರಮುಖ ಆಟಗಾರರು ಚಿನ್ನಾಸ್ವಾಮಿ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಂದ್ಹಾಗೆ ಆರ್‌ಸಿಬಿ ತಂಡ ಮೊದಲ ಪಂದ್ಯವನ್ನು ಮಾರ್ಚ್ 22ರಂದು ಕೆಕೆಆರ್ ತಂಡದೊಂದಿಗೆ ಆಡುತ್ತಿದೆ.


Click it and Unblock the Notifications











