ಗರ್ಭಿಣಿ ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಸಂಜನಾ ಗ್ರಲಾನಿ ತುಂಬಿ ಗರ್ಭಿಣಿ. ಹೀಗಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ತಮ್ಮ ಖುಷಿಯ ಕ್ಷಣಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ತಮ್ಮ ಬೇಬಿ ಬಂಪ್ ಫೋಟೊಶೂಟ್ ಅನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ.

ಸಂಜನಾ ಗಲ್ರಾನಿ ತೆಲುಗು ಹಾಗೂ ತಮಿಳಿನಿಂದ ಕರಿಯರ್ ಆರಂಭ ಮಾಡಿದ್ರೂ, ಕನ್ನಡ ಸಿನಿಮಾ 'ಗಂಡ ಹೆಂಡತಿ' ಚಿತ್ರದಲ್ಲಿ ಮೊದಲ ಲೀಡ್ ರೋಲ್‌ ಸಿಕ್ಕಿತ್ತು. ಇಲ್ಲಿಂದ ಸಂಜನಾ ಗಲ್ರಾನಿ ಸಿನಿಮಾಗಳ ದಾರಿ ಬದಲಾಯಿತು. ಅತೀ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸಂಜನಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಂಜನಾ ಗಲ್ರಾನಿ ಈಗ 8 ರಿಂದ 9 ತಿಂಗಳೊಳಗಿನ ತುಂಬು ಗರ್ಭಿಣಿ. ಮೊದಲ ಮಗುನಿನ ನಿರೀಕ್ಷೆಯಲ್ಲಿರುವ ಸಂಜನಾ, ಈ ಮಧುರ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಸಿದ್ದಾರೆ. ಈ ಫೋಟೊಶೂಟ್‌ಗಾಗಿ ಸಂಜನಾ ನೀಡಿರುವ ಫೋಸ್‌ಗಳು ಹಾಗೂ ಕಾಸ್ಟ್ಯೂಮ್‌ಗಳು ಅಭಿಮಾನಿಗಳಿಗೆ ಇಷ್ಟ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸಂಜನಾ ಪ್ರೆಗ್ನೆನ್ಸಿ ಫೋಟೊ ವೈರಲ್

ಸಂಜನಾ ಪ್ರೆಗ್ನೆನ್ಸಿ ಫೋಟೊ ವೈರಲ್

ಬಹುಭಾಷಾ ನಟಿ ಸಂಜನಾ ಗಲ್ರಾನಿ, ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದರು. ಈ ಹಿಂದೆ ಕೂಡ ಸಂಜನಾ ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ರೆಗ್ನೆನ್ಸಿಯ ಬಳಿಕ ಸೋಶಿಯಲ್ ಮೀಡಿಯಾದ ತಾಯ್ತನದ ಕ್ಷಣಗಳನ್ನು, ಕಷ್ಟ-ಸುಖಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈಗ ಸಂಜನಾ ಗಲ್ರಾನಿ ಪ್ರೆಗ್ನೆನ್ಸಿ ಫೋಟೊಶೂಟ್‌ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಅವರ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನೇರಳೆ ಬಣ್ಣದ ಡಿಸೈನರ್ ಡ್ರೇಸ್‌ ತೊಟ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ತಲೆಗೆ ಹ್ಯಾಟ್ ತೊಟ್ಟು ಖುಷಿ ಖುಷಿಯಲ್ಲಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಸ್ಟೈಲಿಶ್ ಫೋಟೊಶೂಟ್ ಮಹಿಳೆಯರ ಗಮನ ಸೆಳೆಯುತ್ತಿದೆ.

ಬದುಕು ಕಷ್ಟಕರ ಎಂದ ಸಂಜನಾ

ಬದುಕು ಕಷ್ಟಕರ ಎಂದ ಸಂಜನಾ

ಸಂಜನಾ ಗಲ್ರಾನಿ ಪ್ರೆಗ್ನೆನ್ಸಿಯ ಈ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಖುಷಿಯ ಪ್ರತಿಯೊಂದು ಕ್ಷಣವನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪತಿ ಹಾಗೂ ಕುಟುಂಬದೊಂದಿಗಿನ ಸೀಮಂತದ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಈಗ ಪ್ರೆಗ್ನೆನ್ಸಿ ಫೋಟೊಶೂಟ್‌ಗಳನ್ನು ಶೇರ್ ಮಾಡಿಕೊಂಡಿದ್ದು, "ಜೀವನ ಎಷ್ಟು ವಿಭಿನ್ನ ಮತ್ತು ಕಷ್ಟಕರ"ವೆಂದು ನಟಿ ಸಂಜನಾ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

18ನೇ ವಯಸ್ಸಿನಲ್ಲೇ ವಿಮಾನದಲ್ಲಿ ಹಾರಾಟ

18ನೇ ವಯಸ್ಸಿನಲ್ಲೇ ವಿಮಾನದಲ್ಲಿ ಹಾರಾಟ

ಇದೂವರೆಗೂ 50 ಸಿನಿಮಾಗಳಲ್ಲಿ ನಟಿಸಿದ್ದೇನೆ. ಹಲವು ಟಿವಿ ಶೋಗಳು, ಇವೆಂಟ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ದಕ್ಷಿಣದ ನಾಲ್ಕೂ ಭಾಷೆಯ ಕಾರ್ಯಕ್ರಮಗಳಿಗಾಗಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಟ್ರಾವೆಲ್ ಮಾಡಿದ್ದೇನೆ. ಈ ವೇಳೆ ನನ್ನ ಒಂದು ಕಾಲು ಭೂಮಿ ಮೇಲೆ ಇನ್ನೊಂದು ಕಾಲು ವಿಮಾನದಲ್ಲಿ ಇರುತ್ತಿತ್ತು. ಒಂದು ತಿಂಗಳಿಗೆ 10-15 ವಿಮಾನಗಳು ಹಾಗೂ 3-4 ವಿವಿಧ ನಗರಗಳಿಗೆ ವರ್ಷಪೂರ್ತಿ ಟ್ರಾವೆಲ್ ಮಾಡುತ್ತಿದ್ದೆ." ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

35ನೇ ವಯಸ್ಸಿನಲ್ಲಿ ಕುಟುಂಬ

ಕಳೆದ ಎರಡು ವರ್ಷಗಳಿಂದ ನಾನು ವಿಭಿನ್ನವಾದ ಕಷ್ಟಗಳನ್ನು ಎದುರಿಸಿದ್ದೇನೆ. ಸಿನಿಮಾದ ಬಗ್ಗೆ ನಾನು ಬೆಳೆಸಿಕೊಂಡಿದ್ದ ಆಸಕ್ತಿಯಿಂದ ನಾನು ಹೊರಬರಲು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಇದೇ ವೇಳೆ ನಾನು ಬ್ಯಾಕ್ ಪೈನ್‌ನಿಂದ ಬಳಲುತ್ತಿದ್ದು, 18 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದೇನೆ. ಹೀಗಿದ್ದರೂ ನನ್ನ ಮನಸ್ಸು ಬೇರೆಡೆ ಡೈವರ್ಟ್ ಮಾಡಿಕೊಂಡಿದ್ದು, ನನ್ನನ್ನು ನಾನು ಬ್ಯುಸಿಯಾಗಿ ಇಟ್ಟುಕೊಂಡಿದ್ದೇನೆ. ಕಳೆದ ಬಾರಿ ಬೇಬಿ ಶವರ್‌ನಲ್ಲಿ ನಾನು ಸೌತ್ ಇಂಡಿಯನ್ ಶೈಲಿಯ ತಿನಿಸುಗಳನ್ನು ಸವಿದಿದ್ದೇನೆ. ನನ್ನ ಪತಿಯ ಕಡೆಯಿಂದ ಪಕ್ಕಾ ಮುಸ್ಲಿಂ ಶೈಲಿಯಲ್ಲಿ ಮಟನ್ ಬಿರಿಯಾನಿ ಪಾರ್ಟಿ ಆಯೋಜಿಸಲಾಗಿದೆ. " ಎಂದು ಸಂಜನಾ ಹೇಳಿಕೊಂಡಿದ್ದಾರೆ.

More from Filmibeat

English summary
Kannada Actress Sanjjanaa Galrani Baby Bump Photoshoot. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X