ಬಲರಾಮನ ಅಡ್ಡದಲ್ಲಿ ಸಂಕ್ರಾಂತಿ ಸಂಭ್ರಮ; ಆ ದಿನಗಳನ್ನು ನೆನಪಿಸಿದ ವಿನೋದ್, ಪ್ರಿಯಾ

'ಆ ದಿನಗಳು' ಭೂಗತ ಜಗತ್ತಿನ ಕಥೆಯನ್ನು, ಅದಕ್ಕೆ ಹೊಂದಿಕೊಂಡ ಲವ್ ಸ್ಟೋರಿಯೊಂದನ್ನು ನಾಜೂಕಾಗಿ ತೋರಿಸಲಾಗಿತ್ತು. ಈ ಸಿನಿಮಾ ಇಂದಿಗೂ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಇಂದಿಗೂ ಅದೆಷ್ಟೋ ಸಿನಿ ಪ್ರಿಯರ ಪಾಲಿನ ಬೆಸ್ಟ್ ಸಿನಿಮಾ ಆಗಿದೆ. ಆ ದಿನಗಳು ಬಾಕ್ಸಾಫೀಸ್‌ನಲ್ಲಿಯೂ ಒಳ್ಳೆಯ ಗಳಿಕೆ ಮಾಡಿತ್ತು. ಆದರೆ, ಕೆ.ಎಂ ಚೈತನ್ಯ ಇದೇ ಗುಂಗಿನಲ್ಲಿ ಇರಲಿಲ್ಲ. ಬೇರೆ ಬೇರೆ ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದರು.

'ಆ ದಿನಗಳು' ಸಿನಿಮಾ ತೆರೆಕಂಡು ಭರ್ಜರಿ ಯಶಸ್ಸು ಕಂಡ ಸುಮಾರು 18 ವರ್ಷಗಳ ಬಳಿಕ ಅದೇ ಶೈಲಿಯಲ್ಲಿ 'ಬಲರಾಮನ ದಿನಗಳು' ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ಹಾಡು ಹಾಗೂ ತುಣುಕುಗಳು "ಶುರು ಶುರು.." ಸಿನಿ ಪ್ರಿಯರ ಗಮನ ಸೆಳೆದಿದೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ನಿರ್ಮಿಸಿರುವ ಈ ಸಿನಿಮಾದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿದ್ದರೆ, ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ವಿನೋದ್ ಅವರ 25 ನೇ ಚಿತ್ರ ಅನ್ನೋದು ವಿಶೇಷ.

Sankranti celebration in Vinod Prabhakar Priya Anand starrer Balaramana Dingalu event

ಕನ್ನಡ ಚಿತ್ರರಂಗದ ಹಿರಿಯ ನಟರಾದ ಅವಿನಾಶ್, ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ, ವಿನಯ್ ಗೌಡ ಸೇರಿದಂತೆ ಹಿರಿಯ ಹಾಗೂ ಕಿರಿಯ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಇನ್ನು ಈ ಚಿತ್ರತಂಡ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದೆ. ಇದೇ ಸಿನಿಮಾ ಕಲಾವಿದರು ತಮ್ಮ ಸಿನಿಮಾದ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ.

'ಬಲರಾಮನ ದಿನಗಳು' ತಂಡ ಮಂಡ್ಯದ ಅರ್ಜಿ ರೆಸಾರ್ಟ್ ನಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದೆ. RG ರೆಸಾರ್ಟ್ ನಲ್ಲಿ ಈ ತಂಡ ಹಬ್ಬದ ವಾತಾವರಣವನ್ನೇ ನಿರ್ಮಿಸಿತ್ತು. ಸಂಕ್ರಾಂತಿ ಹಬ್ಬದ ಈ ವಿಶೇಷ ಕಾರ್ಯಕ್ರಮದಲ್ಲಿ ನಾಯಕಿ ಪ್ರಿಯಾ ಆನಂದ್, ನಾಯಕ ವಿನೋದ್ ಪ್ರಭಾಕರ್, ನಿರ್ದೇಶಕ ಚೈತನ್ಯ ಹಾಗೂ ನಿರ್ಮಾಪಕರಾದ ಪದ್ಮಾವತಿ ಮತ್ತು ಶ್ರೇಯಸ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

"ಬಲರಾಮ ನನ್ನ ವೃತ್ತಿ ಬದುಕಿಗೆ ತಿರುವು ಕೊಡೋ ಸಿನಿಮಾ ಮಾದೇವ ಬಳಿಕ ನನ್ನ ಜೀವನವೇ ಬದಲಾಗಿದ್,ದು ಬಲರಾಮನಿಂದ ನಾನು ಬಲರಾಮನಾಗಿ ಪ್ರತಿಕ್ಷಣ ಜೀವಿಸಿದ್ದೀನಿ. ಬಹಳ ಡೆಡಿಕೇಶನ್ ಕೊಟ್ಟು ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದೆ. ನಮ್ಮ ತಂದೆಯಿಂದಲೇ ಎಲ್ಲಾ ಸಿಕ್ಕಿದ್ದು " ಎಂದು ತಂದೆ ನೆನೆದು ವಿನೋದ್ ಭಾವುಕರಾದರು. ಇನ್ನು ಸಿನಿಮಾದ ನಟಿ ಪ್ರಿಯಾ ಮಾತಾಡಿ "ನಾನು ಮತ್ತೆ ಕನ್ನಡ ಸಿನಿಮಾಕ್ಕೆ ಬಂದಿದೀನಿ. ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು. ಡೈಲಾಗ್ ಸೀನ್ ಎಲ್ಲವೂ ತುಂಬ ಚೆನ್ನಾಗಿ ಬಂದಿದೆ. ವಿನೋದ್ ಜೊತೆಗೆ ನಟಿಸಿ ಖುಷಿ ಆಗಿದೆ. ಮುಂದೆ ಇನ್ನೂ ಹೆಚ್ಚು ಕನ್ನಡ ಸಿನಿಮಾ ಮಾಡ್ತೀನಿ" ಎಂದು ಪ್ರಿಯಾ ಆನಂದ್ ಸಂತಸ ವ್ಯಕ್ತಪಡಿಸಿದರು.

Sankranti celebration in Vinod Prabhakar Priya Anand starrer Balaramana Dingalu event

ಹಾಗೇ ಸಿನಿಮಾದಲ್ಲಿ ಮೇಜರ್ ಕ್ಯಾರೆಕ್ಟರ್ ಮಾಡಿರುವಂತಹ ವಿನಯ್ ಗೌಡ ಅಲಿಯಾಸ್ ಕತ್ತಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಇದೊಂತರ ನಮಗೆ ಸಂಕ್ರಾಂತಿ ಗಿಫ್ಟ್ ಇದ್ದಂಗೆ. ನನ್ನ ವೃತ್ತಿ ಬದುಕಿಗೆ ತಿರುಗು ಕೊಟ್ಟ ಸಿನಿಮಾ ಅಂದ್ರೆ ಅದು ಬಲರಾಮ. ನೀವು ಊಹಿಸಲಾಗದಂತ ಪಾತ್ರವನ್ನು ನಾನು ಮಾಡಿದ್ದೇನೆ. ಕತ್ತಿ ಹೇಗಿರುತ್ತಾನೆ? ಕತ್ತಿ ಏನ್ ಮಾಡ್ತಾನೆ? ಎಲ್ಲದನ್ನು ನೀವು ಸಿನಿಮಾದಲ್ಲೇ ನೋಡ್ತೀರ. ಆ ಕುತೂಹಲನ ನಾನು ಬಿಟ್ಟು ಕೊಡುವುದಿಲ್ಲ" ಎಂದು ತನ್ನ ಪಾತ್ರದ ಬಗ್ಗೆ ವಿನಯ್ ಸಂತಸ ವ್ಯಕ್ತಪಡಿಸಿದ್ರು. ಸಿನಿಮಾದ ಪ್ರೊಡ್ಯೂಸರ್ ಶ್ರೇಯಸ್ ಮಾತನಾಡಿ "ನಮ್ಮ ಸಿನಿಮಾ ಸಿಂಪಲ್ ಆಗಿ ಪ್ರಾರಂಭವಾಗಿ ಸೂಪರ್ ಆಗಿ ಮುಗ್ಧಿದೆ. ನಮಗೆ ನಿಮ್ಮ ಆಶೀರ್ವಾದ ಬೇಕು ಎಲ್ಲರೂ ನಮಗೆ ಶುಭ ಹಾರೈಸಿ" ಎಂದು ಮನವಿ ಮಾಡಿಕೊಂಡಿದ್ದಾರೆ.

ಸಿನಿಮಾದಲ್ಲಿ ಪುಟ್ಟ ಕ್ಯಾರೆಕ್ಟರ್‌ವೊಂದರಲ್ಲಿ ಬಿಗ್ ಬಾಸ್ ರಜತ್ ಕಾಣಿಸಿಕೊಂಡಿದದ್ದಾರೆ. "ನಾನು ಬಿಗ್ ಬಾಸ್ ನಲ್ಲಿ ಇದ್ದಾಗ ಈ ಸಿನಿಮಾದ ಶೂಟಿಂಗ್ ಆಗಿತ್ತು. ಸ್ಟಾರ್ ಕಾಸ್ಟ್ ಕೂಡ ಕರೆದಿದ್ದರು. ನನಗೆ ಏನು ಮಾಡಬೇಕು ಗೊತ್ತಾಗಿಲ್ಲ ಬಿಗ್ ಬಾಸ್ ಇಂದ ಆಚೆ ಬಂದ ನಂತರ ಚೈತನ್ಯ ಸರ್ ಹೀಗೆ ಅಂತ ನನಗೆ ಕಾಲ್ ಮಾಡಿ ಹೇಳಿದಾಗ ಬಹಳ ಖುಷಿ ಆಯ್ತು. ಇಲ್ಲಿಂದ ನನ್ನ ವೃತ್ತಿ ಜೀವನಕ್ಕೂ ಒಂದು ತಿರುವು ಕೊಟ್ಟಂತಹ ಸಿನಿಮಾವಿದು. ಬಲರಾಮನ ದಿನ ಸಿನಿಮಾವನ್ನು ಯಾವಾಗಲೂ ನಾನು ನೆನಪಿನಲ್ಲಿ ಇಟ್ಟುಕೊಂಡಿರುತ್ತೇನೆ" ತಮಾಷೆ ಮಾಡುತ್ತ ತನ್ನ ಪಾತ್ರದ ಬಗ್ಗೆ ರಜತ್ ವಿವರಿಸಿದ್ದಾರೆ. ಬಲರಾಮನ ದಿನಗಳು 2026ರ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಆಗಿರೋದ್ರಿಂದ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟಾಗಿದೆ.

More from Filmibeat

English summary
Sankranti celebration in Vinod Prabhakar, Priya Anand starrer Balaramana Dingalu event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X