'ಯುವ'ನನ್ನು ಮೊದಲ ಶಾಟ್‌ನಲ್ಲೇ ಓಡಿಸಿದ್ದೇಕೆ? ಇದರ ಹಿಂದೆ ಸಂತೋಷ್ ಆನಂದ್‌ರಾಮ್ ಉದ್ದೇಶವೇನಿತ್ತು?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತೆಯೇ ಯುವ ರಾಜ್‌ಕುಮಾರ್ ಕೂಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚೆಗೆ 'ಯುವ' ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಿದೆ. ಹಾಡುಗಳು ರಿಲೀಸ್ ಆದಾಗ ಯುವ ರಾಜ್‌ಕುಮಾರ್ ಕ್ಲಾಸ್ ಎಂಟ್ರಿ ಅಂದ್ಕೊಂಡಿದ್ದವರು ಟ್ರೈಲರ್ ಬಳಿಕ ಮಾಸ್ ಎಂಟ್ರಿ ಅನ್ನೋದು ಕನ್ಫರ್ಮ್ ಮಾಡಿಕೊಂಡಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮಿಸ್ ಮಾಡಿಕೊಳ್ಳುತ್ತಿದ್ದವರಿಗೆ ಯುವ ಹೊಸ ಭರವಸೆ ಮೂಡಿಸಿದ್ದಾರೆ. ಯುವ ಆಕ್ಷನ್‌ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಮೊದಲ ಸಿನಿಮಾದ ತುಣುಕುಗಳನ್ನು ನೋಡಿದ ಬಳಿಕ ಡ್ಯಾನ್ಸ್, ಡೈಲಾಗ್ ಡಿಲೇವರಿ ಇಷ್ಟ ಆಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಕೂಡ ಥಿಯೇಟರ್‌ಗೆ ಲಗ್ಗೆ ಇಡಲಿದೆ.

ನಿನ್ನೆ (ಮಾರ್ಚ್23) ನಡೆದ 'ಯುವ' ಪ್ರಿ ರಿಲೀಸ್ ಇವೆಂಟ್‌ನಲ್ಲಿ ಸಂತೋಷ್ ಆನಂದ್ ರಾಮ್ ಒಂದು ಇಂಟ್ರೆಸ್ಟಿಂಗ್ ವಿಷಯವನ್ನು ಬಿಚ್ಚಿದ್ದಾರೆ. 'ಯುವ' ಸಿನಿಮಾಗೆ ತೆಗೆದ ಮೊದಲ ಶಾಟ್ ಏನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅದೇ ಸೀನ್ ಅನ್ನು ತೆಗೆದಿದ್ದು ಯಾಕೆ? ಇದರ ಮಧ್ಯೆ ರಜನಿಕಾಂತ್ ಮೊದಲ ಸಿನಿಮಾದ ಮೊದಲದ ಬಗ್ಗೆ ಮಾತಾಡಿದ್ದೆಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಯುವ ಸಿನಿಮಾ ಮೊದಲ ಸೀನ್ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಮುನ್ನ ಈ ಸಿನಿಮಾ ಶುರುವಾಗಿದ್ದು ಹೇಗೆ? ಅನ್ನೋದನ್ನು ಸಂತೋಷ್ ಆನಂದ್ ರಾಮ್ ರಿವೀಲ್ ಮಾಡಿದ್ರು. "ಈ ಸಿನಿಮಾ ಆಗುವುದಕ್ಕೆ ಕಾರಣ ಅಶ್ವಿನಿ ಮೇಡಂ. ಅವರು ವಿಜಯ್ ಸರ್‌ಗೆ ಫೋನ್ ಮಾಡಿ ಗುರುಗೆ ಒಂದು ಸಿನಿಮಾ ಮಾಡಬೇಕು ಅಂತ ಹೇಳುತ್ತಾರೆ. ಅಲ್ಲಿಂದ ವಿಜಯ್ ನನಗೆ ಹೇಳಿದ್ರು. ನೀನು ವಿಜಯ್‌ನ ಲಾಂಚ್ ಮಾಡಬೇಕು ಅಂತ. ಒಂದು ಫೋನ್ ಕರೆ ಇವತ್ತು ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ವಿಜಯ್ ಕಿರಗಂದೂರು ಸರ್ ಕೂಡ ಒಂದೇ ಮಾತು ಹೇಳಿದ್ದು, ಗುರು ಲಾಂಚ್ ಮಾಡುವುದು ಒಂದು ಜವಾಬ್ದಾರಿಯಾಗಿ ತೆಗೆದುಕೊಳ್ಳಬೇಕು. ನಾವು ಸಿನಿಮಾವನ್ನು ನಿಲ್ಲಿಸಬೇಕು." ಅಂತ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.
'ಯುವ' ಸಿನಿಮಾ ಯುವರಾಜ್‌ಕುಮಾರ್ ಅಭಿನಯದ ಮೊದಲ ಸಿನಿಮಾ. ಹೀಗಾಗಿ ಚಿಕ್ಕ ಪುಟ್ಟ ತಪ್ಪುಗಳಾಗಿದ್ದರೆ ಮನ್ನಿಸಿ ಅಂತ ಸಂತೋಷ್ ಆನಂದ್‌ರಾಮ್ ಇದೇ ವೇಳೆ ಹೇಳಿಕೊಂಡಿದ್ದಾರೆ. " ಮಗು ಮೊದಲನೇ ಹೆಜ್ಜೆ ಇಟ್ಟಾಗ ಎಡುವುತ್ತೆ. ಮಾತಾಡುವಾಗ ತೊದಲುತ್ತೆ. ಏನಾದರೂ ಸಣ್ಣ ಪುಟ್ಟ ತಪ್ಪುಗಳಿದ್ದರೆ ಕ್ಷಮಿಸಿ. ಮುಂದಿನ ಸಿನಿಮಾಗಳಲ್ಲಿ ನಾವು ಸರಿ ಮಾಡಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಪೂರ್ತಿ ಬೆಂಬಲ ಇರಬೇಕು." ಎಂದು ಯುವ ಗೆಲ್ಲಿಸಲು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಯುವ ಸಿನಿಮಾಗೆ ತೆಗೆದ ಮೊದಲ ಶಾಟ್ ಬಗ್ಗೆ ರಿವೀಲ್ ಮಾಡಿದ್ದಾರೆ. ಅದನ್ನು ರಜನಿಕಾಂತ್ ಮೊದಲ ಸಿನಿಮಾದ ಮೊದಲ ಶಾಟ್‌ಗೆ ಉದಾಹರಣೆ ಕೊಟ್ಟು ಉದ್ದೇಶವೇನಿತ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ. "ನಾವು ಮೊದಲು ಫೈಟ್‌ನಿಂದ ಶೂಟಿಂಗ್ ಶುರು ಮಾಡಿದ್ವಿ. ಅದು ಓಡುವ ಶಾಟ್. ನನಗೆ ಯಾವುದೋ ಸಂದರ್ಶನದಲ್ಲಿ ಓದಿದ ನೆನಪು. ರಜನಿಕಾಂತ್ ಮೊದಲನೇ ಸಿನಿಮಾ ಅಪೂರ್ವ ರಾಗಂಗಳ್‌ನಲ್ಲಿ ಮೊದಲ ಗೇಟ್ ತೆಗೆಯುವ ಶಾಟ್ ಇಟ್ರಂತೆ. ಯಾಕಂದ್ರೆ ಅಲ್ಲಿಂದ ಜೀವನ ಶುರುವಾಗಲಿ, ಹೊಸ ಜರ್ನಿ ಶುರುವಾಗಲಿ ಅಂತ. ನಾವಿಲ್ಲಿ ಗುರುವಿನದ್ದು ಓಡುವ ಶಾಟ್ ಇಟ್ವಿ. ಯಾಕಂದ್ರೆ, ಈ ಕುದುರೆ ಓಡುತ್ತಲೇ ಇರಬೇಕು ಅಂತ." ಎಂದು ಹೇಳಿಕೊಂಡಿದ್ದಾರೆ.
ಈ ವೇಳೆ ಸಂತೋಷ್ ಆನಂದ್‌ರಾಮ್ ಅಪ್ಪು ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. "ಯುವರತ್ನದಿಂದ ಯುವ ವರೆಗೂ ನಂದೊಂದು ಚಾಲೆಂಜಿಂಗ್ ಜರ್ನಿ. ನಾನು ಕಳೆದುಕೊಂಡಿದ್ದು ನನ್ನ ಅಣ್ಣ, ನನ್ನ ರತ್ನ, ಕರ್ನಾಟಕದ ರಾಜರತ್ನ ಅಪ್ಪು ಅಣ್ಣನನ್ನ. ಅಲ್ಲಿಂದ ಪ್ರತಿಕ್ಷಣ ನನ್ನನ್ನು ಒಬ್ಬಂಟಿಯಾಗಿ ಬಿಡದೇ ಇದ್ದಿದ್ದು ನೀವುಗಳು. ಎಲ್ಲಾ ಅವರ ಅಭಿಮಾನಿಗಳು ತುಂಬಾ ದೊಡ್ಡ ಶಕ್ತಿಯಾಗಿ ನಿಂತುಕೊಂಡ್ರಿ. ಆಶೀರ್ವಾದ ಮಾಡಿದ್ರಿ. ಅಲ್ಲಿಂದ ಯುವವರೆಗೂ ಬಂದಿದ್ದೀನಿ ಅಂದರೆ, ನಿಮ್ಮೆಲ್ಲರ ಹಾರೈಕೆ ಆಶೀರ್ವಾದ." ಎಂದಿದ್ದಾರೆ.


Click it and Unblock the Notifications











