ಜೂ.ಪವರ್‌ಸ್ಟಾರ್ 'ಯುವ' ಟೈಟಲ್ ಟೀಸರ್ ಬರೆದ ದಾಖಲೆಯೇನು? ಟ್ರೆಂಡ್ ಹೇಗಿದೆ?
ರಾಜವಂಶದ ಮತ್ತೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಆಗಿಯೇ ಎಂಟ್ರಿ ಕೊಟ್ಟಿದೆ. ಇಷ್ಟು ದಿನ ಇದೊಂದು ಘಳಿಗೆಯನ್ನು ನೋಡುವುದಕ್ಕೆ ಕಾದು ಕೂತವರಿಗೆ ಯುವ ರಾಜ್‌ಕುಮಾರ್ ಖದರ್ ಕಂಡು ಮತ್ತೆ ಉತ್ಸಾಹ ಉಕ್ಕಿ ಬಂದಿದೆ. ಮತ್ತೆ ಅಪ್ಪು ನೋಡಿದಷ್ಟೇ ಸಂತೋಷ ಪಟ್ಟಿದ್ದಾರೆ. ಹೀಗಾಗಿ ಜೂ.ಪವರ್‌ಸ್ಟಾರ್‌ಗೆ ಸ್ಯಾಂಡಲ್‌ವುಡ್‌ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
'ಯುವ' ಟೈಟಲ್ ಯೂತ್‌ಫುಲ್ ಆಗಿದೆ. ಅದರಲ್ಲೂ ಸಂತೋಷ್ ಆನಂದ್‌ರಾಮ್ ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡಿಸುತ್ತಿದ್ದಾರೆ ಅಂದ್ಮೇಲೆ ದುಪ್ಪಟ್ಟು ನಿರೀಕ್ಷೆ ಇರೋದು ಸಹಜ. ಅದಕ್ಕೆ ತಕ್ಕಂತೆ ಟೈಟಲ್ ಟೀಸರ್ ಕೂಡ ರಾಜವಂಶದ ಅಭಿಮಾನಿಗಳಿಗೆ ಅಷ್ಟೇ ಇಷ್ಟಾನೂ ಆಗಿದೆ. ಅದಕ್ಕೆ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ದಾಖಲೆ ವೀವ್ಸ್ ಗಳಿಸಿದೆ.

'ಯುವ' ಟೈಟಲ್ ಟೀಸರ್‌ಗೆ ರೆಸ್ಪಾನ್ಸ್ ಹೇಗಿದೆ?
'ಯುವ' ಟೈಟಲ್ ಅನೌನ್ಸ್ ಆಗುತ್ತಿದ್ದಂತೆ ಲೆಗೆಸಿ ಮುಂದುವರೆಯುತ್ತಿದೆ ಎಂದು ಹೇಳುತ್ತಲೇ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಯುವ ರಾಜ್‌ಕುಮಾರ್ ಖಡಕ್ ಲುಕ್, ಎಂಟ್ರಿ, ಎಲ್ಲವೂ ಅಪ್ಪು ಅಭಿಮಾನಿಗಳಿಗೆ ತುಂಬಾನೇ ಇಷ್ಟ ಆಗಿರೋದಂತೂ ನಿಜ. ಎಲ್ಲಕ್ಕಿಂತ ಹೆಚ್ಚಾಗಿ ಟೀಸರ್‌ನಲ್ಲಿರೋ ಡೈಲಾಗ್‌ಗಳನ್ನು ಕೇಳಿ ಫ್ಯಾನ್ಸ್ ಹೆಚ್ಚೆದ್ದು ಕುಣಿಯುತ್ತಿದ್ದಾರೆ.
ನಿನ್ನೆ (ಮಾರ್ಚ್ 3) ರಿಲೀಸ್ ಆಗಿರೋ 'ಯುವ' ಟೀಸರ್ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಹೊಸ ಪ್ರತಿಭೆಯ ಟೈಟಲ್ ಟೀಸರ್‌ಗೆ ಈ ಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿರೋದು ಪಾಸಿಟಿವ್ ಅಂಶವೇ. ಸಂತೋಷ್ ಆನಂದ್‌ರಾಮ್ ದೊಡ್ಮನೆಯ ಕುಡಿಗೆ ಮಾಸ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದಂತೂ ಕನ್ಫರ್ಮ್ ಆಗಿದೆ. ಅಪ್ಪುಗೆ ಸೂಪರ್‌ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಯುವಗೂ ಅಷ್ಟೇ ದೊಡ್ಡ ಹಿಟ್ ಕೊಡಿತ್ತಾರಾ? ಅನ್ನೋ ಕುತೂಹಲವಂತೂ ಇದ್ದೇ ಇದೆ.

'ಯುವ' ಟೈಟಲ್ ಟೀಸರ್‌ಗೆ ದಾಖಲೆ ವೀವ್ಸ್
ಯುವ ರಾಜ್‌ಕುಮಾರ್ ಎಂಟ್ರಿ ಏನೋ ಅದ್ಭುತವಾಗಿತ್ತು. ಟೈಟಲ್ ಟೀಸರ್ ಕೂಡ ಅಭಿಮಾನಿಗಳಿಗೆ ಇಷ್ಟ ಆಗಿದೆ. ಹಾಗೇ ಯೂಟ್ಯೂಬ್‌ನಲ್ಲೂ ಟೀಸರ್‌ಗೆ ಸಖತ್ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಟೈಟಲ್ ಟೀಸರ್ ರಿಲೀಸ್ ಆದ ಕೇವಲ 16 ಗಂಟೆಗಳಲ್ಲಿ 26 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡು ಟ್ರೆಂಡಿಂಗ್‌ನಲ್ಲಿ ನಿನ್ನೆ (ಮಾರ್ಚ್ 3) ಸಂಜೆ ರಿಲೀಸ್ ಆಗಿದ್ದ ಈ ಟೀಸರ್ 24 ಗಂಟೆಗಳಲ್ಲಿ ಎಷ್ಟು ವೀವ್ಸ್ ಮಾಡುತ್ತೆ ಅನ್ನೋದನ್ನು ಎದುರು ನೋಡುತ್ತಿದೆ.
ಇನ್ನೊಂದು ಕಡೆ ಯುವ ಟೈಟಲ್ ಟೀಸರ್ 16 ಗಂಟೆಗಳ ಬಳಿಕ ಯೂಟ್ಯೂಬ್‌ನಲ್ಲಿ 32ನೇ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅಪ್ಪು ಹುಟ್ಟುಹಬ್ಬ (ಮಾರ್ಚ್ 17)ಕ್ಕೆ ಯುವ ರಾಜ್‌ಕುಮಾರ್ ಸಿನಿಮಾ ಸೆಟ್ಟೇರುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಅಂದುಕೊಂಡಿದ್ದಕ್ಕಿಂತ ಮುನ್ನವೇ ಟೈಟಲ್ ಅನೌನ್ಸ್ ಮಾಡಿ, ಸಿನಿಮಾಗೆ ಪೂಜೆನೂ ಮಾಡಲಾಗಿದೆ. ಇನ್ನು ಶೂಟಿಂಗ್ ಸೇರಿದಂತೆ ಇನ್ನಿತರ ಕಲಾವಿದರ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.


Click it and Unblock the Notifications











