'ಯುವರತ್ನ' ಟ್ರೇಲರ್, ಹಾಡು ಬಿಡುಗಡೆ: ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ್ದೇನು?

ಲಾಕ್ ಡೌನ್ ಆರಂಭದ ಸಮಯದಲ್ಲಿ 'ಯುವರತ್ನ' ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಿತ್ತು. ಚಿತ್ರತಂಡದಿಂದ ಯಾವುದೇ ಅಪ್‌ಡೇಟ್ ಇಲ್ಲ ಎಂದು ಬೇಸರಗೊಂಡಿದ್ದ ಜನರಿಗೆ ಪುನೀತ್ ರಾಜ್ ಕುಮಾರ್ ಜನ್ಮದಿನದ ಉಡುಗೊರೆಯಾಗಿ ಟೀಸರ್ ಬಿಡುಗಡೆ ಮಾಡಲಾಗಿತ್ತು.

Recommended Video

Yuvaratna movie teaser creates new record in Youtube | Yuvaratna| FILMIBEAT KANNADA

ಅಭಿಮಾನಿಗಳಿಗೆ ಖುಷಿ ನೀಡುವ ಡೈಲಾಗ್, ಆಕ್ಷನ್, ರೊಮ್ಯಾನ್ಸ್ ಎಲ್ಲವೂ ಅದರಲ್ಲಿತ್ತು. 'ಯುವರತ್ನ'ದಲ್ಲಿ ಫ್ಯಾನ್ಸ್ ಬಯಸಿದ್ದೆಲ್ಲವೂ ಇದೆ ಎಂಬ ಸುಳಿವು ನೀಡಿತ್ತು. ಟೀಸರ್‌ಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಈಗ ಒಂದೂವರೆ ತಿಂಗಳು ಕಳೆದಿದೆ. ಸಿನಿಮಾ ಚಟುವಟಿಕೆಗಳು ನಡೆಯುತ್ತಿದ್ದಾಗ ಒಂದಿಲ್ಲೊಂದು ಸುದ್ದಿಗಳು ಚಿತ್ರತಂಡದಿಂದ ಅಭಿಮಾನಿಗಳಿಗೆ ಸಿಗುತ್ತಿತ್ತು. ಆದರೆ ಈಗ ಚಿತ್ರೀಕರಣವೂ ಇಲ್ಲ, ಸಿನಿಮಾ ಕುರಿತ ಅಪ್‌ಡೇಟ್‌ಗಳೂ ಇಲ್ಲ. ಇದರಿಂದ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ. ಒಂದು ಹಾಡನ್ನಾದರೂ ಬಿಡುಗಡೆ ಮಾಡಿ ಎಂದು ಕೇಳುತ್ತಿದ್ದಾರೆ. ಮುಂದೆ ಓದಿ...

ಅಪ್‌ಡೇಟ್ಸ್ ಕೊಟ್ಟ ಸಂತೋಷ್

ಅಪ್‌ಡೇಟ್ಸ್ ಕೊಟ್ಟ ಸಂತೋಷ್

ಕಾರ್ಮಿಕರ ದಿನಾಚರಣೆ ಪ್ರಯುಕ್ತ ವಿಡಿಯೋ ಸಂದೇಶದ ಮೂಲಕ ಶುಭಾಶಯ ಕೋರಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಕುತೂಹಲ ಮೂಡಿಸಿರುವ ಪವರ್ ಸ್ಟಾರ್ ಅವರ ಸಿನಿಮಾದ ಕುರಿತ ಮಾಹಿತಿಗಾಗಿ ಕಾದಿರುವವರಿಗೆ ಒಂದಷ್ಟು ಅಪ್‌ಡೇಟ್ಸ್ ನೀಡಿದ್ದಾರೆ. ಪರಿಸ್ಥಿತಿ ಎಲ್ಲವೂ ಸಹಜ ಸ್ಥಿತಿಗ ಬಂದ ಬಳಿಕವೇ ಹಾಡು ಮತ್ತು ಟ್ರೇಲರ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಹಂತ ಹಂತವಾಗಿ ಹಾಡು ರಿಲೀಸ್

ಹಂತ ಹಂತವಾಗಿ ಹಾಡು ರಿಲೀಸ್

'ಹಾಡುಗಳು ಹಾಗೂ ಟ್ರೇಲರ್ ಕುರಿತು ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆಗಳಿವೆ. ಇದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. 'ಯುವರತ್ನ'ಕ್ಕಾಗಿ ಸಂಗೀತ ನಿರ್ದೇಶಕ ಎಸ್ ತಮನ್, ತಮ್ಮ ಅತ್ಯುತ್ತಮದ್ದು ಎನ್ನುವಂತಹ ಐದು ಹಾಡುಗಳ ಸಂಯೋಜನೆಯನ್ನು ನೀಡಿದ್ದಾರೆ. ಇವೆಲ್ಲವನ್ನೂ ಹಂತಹಂತವಾಗಿ ವಿರಾಮಗಳ ನಡುವೆ ಬಿಡುಗಡೆ ಮಾಡಲಾಗುವುದು' ಎಂದು ತಿಳಿಸಿದ್ದಾರೆ.

ನಿರಂತರ ಅಪ್‌ಡೇಟ್ ಕೊಡ್ತೀವಿ

ನಿರಂತರ ಅಪ್‌ಡೇಟ್ ಕೊಡ್ತೀವಿ

'ಕೊನೆಯ ಬಾರಿ ನಾವು ಬಿಡುಗಡೆ ಮಾಡಿದ್ದು ಟೀಸರ್. ಅದರ ಬಳಿಕ ಸುದೀರ್ಘ ಅಂತರವಾಗಿದೆ. ಚಿತ್ರತಂಡವು ಇನ್ನು ಖಂಡಿತವಾಗಿಯೂ ನಿರಂತರವಾಗಿ ಅಪ್ ಡೇಟ್‌ಗಳನ್ನು ನೀಡಲಿದೆ' ಎನ್ನುವ ಮೂಲಕ ಅಭಿಮಾನಿಗಳಿಗೆ ಅವರು ಸಂತಸದ ಸುದ್ದಿ ನೀಡಿದ್ದಾರೆ.

ಕುಟುಂಬ ಸಮೇತ ಬರುತ್ತಾರೆ

ಕುಟುಂಬ ಸಮೇತ ಬರುತ್ತಾರೆ

ಸಿನಿಮಾ ಬಿಡುಗಡೆಯಾದ ಬಳಿಕ ಜನರು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರಲಿದ್ದಾರೆ ಎಂದು ಸಂತೋಷ್ ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ಈಗಿನ ಲಾಕ್ ಡೌನ್ ಅವಧಿಯಲ್ಲಿ ಎಲ್ಲರೂ ಮನೆಯಲ್ಲಿಯೇ ಸುರಕ್ಷಿತರಾಗಿರಿ ಎಂದು ಸಲಹೆ ನೀಡಿದ್ದಾರೆ.

ಹೆಚ್ಚಿನ ನಿರೀಕ್ಷೆಗಳು

ಹೆಚ್ಚಿನ ನಿರೀಕ್ಷೆಗಳು

'ರಾಜಕುಮಾರ'ದ ಭರ್ಜರಿ ಯಶಸ್ಸಿನ ಬಳಿಕ ಪುನೀತ್ ರಾಜ್ ಕುಮಾರ್- ಸಂತೋಷ್ ಆನಂದ್ ರಾಮ್ ಜೋಡಿಯ ಎರಡನೆಯ ಸಿನಿಮಾ 'ಯುವರತ್ನ' ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಚಿತ್ರದ ಮೂಲಕ ಸಯ್ಯೇಶಾ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಧನಂಜಯ್ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ದಿಗಂತ್, ಸೋನು ಗೌಡ, ಪ್ರಕಾಶ್ ರೈ, ಸಾಯಿ ಕುಮಾರ್ ಮುಂತಾದವರು ನಟಿಸಿದ್ದಾರೆ.

More from Filmibeat

English summary
Director Santhosh Ananddram said trailer and songs of Yuvarathnaa will be released after things returns to normalcy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X