ವಿನೋದ್ ಪ್ರಭಾಕರ್ ವೃತ್ತಿ ಬದುಕಿನಲ್ಲೇ ದಾಖಲೆ; 'ಬಲರಾಮನ ದಿನಗಳು' ಆಡಿಯೋ ದುಬಾರಿ ಮೊತ್ತಕ್ಕೆ ಸೇಲ್

ಟೈಗರ್ ವಿನೋದ್ ಪ್ರಭಾಕರ್ ಅದೃಷ್ಟ ನಿಧಾನವಾಗಿ ಬದಲಾಗುತ್ತಿದೆ. 'ಮಾದೇವ' ಸಿನಿಮಾ ಬಳಿಕ ವಿನೋದ್ ಸಿನಿ ಬದುಕು ಮತ್ತೊಂದು ಹಂತಕ್ಕೆ ಏರುತ್ತಿದೆ. ಕೆ.ಎಂ.ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ವಿನೋದ್‌ ಪ್ರಭಾಕರ್‌ ಕರಿಯರ್‌ನ ಬೆಸ್ಟ್ ಸಿನಿಮಾ ಆಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ಇದು ಇವರ 25ನೇ ಸಿನಿಮಾ ಅನ್ನೋದು ವಿಶೇಷ.

'ಆ ದಿನಗಳು' ಸಿನಿಮಾ ಬಳಿಕ ಕೆ.ಎಂ. ಚೈತನ್ಯ ಮತ್ತೊಂದು ಅಂಡರ್‌ವರ್ಲ್ಡ್‌ ಸಬ್ಜೆಕ್ಟ್‌ಗೆ ಕೈ ಹಾಕಿರಲಿಲ್ಲ. ಬೇರೆ ಬೇರೆ ಜಾನರ್ ಸಿನಿಮಾಗಳನ್ನೇ ನಿರ್ದೇಶಿಸುತ್ತಾ ಬಂದಿದ್ದರು. ಸಿನಿ ಪ್ರೇಮಿಗಳಿಗೆ ಮತ್ತೆ ಅಂತಹದ್ದೇ ಸಿನಿಮಾ ನೋಡಬೇಕು ಅನ್ನೋ ಆಸೆಯಿತ್ತು. ಕೊನೆಗೂ ಅವರ ಆಸೆ ಈಡೇರಿದೆ. ಅದೇ ಫ್ಲೇವರ್ ಇಟ್ಟುಕೊಂಡು 'ಬಲರಾಮನ ದಿನಗಳು' ಸಿನಿಮಾವನ್ನು ಸಿನಿಪ್ರೇಮಿಗಳ ಮುಂದೆ ಇಡುವುದಕ್ಕೆ ಸಜ್ಜಾಗಿದ್ದಾರೆ.

Santhosh Narayanan composed Vinod Prabhakar starrer Balaramana Dinagalu audio rights details

ಇತ್ತೀಚೆಗೆ 'ಬಲರಾಮ ದಿನಗಳು' ಸಿನಿಮಾದ ಪ್ರಚಾರವನ್ನು ಹಾಡಿನ ಮೂಲಕ ಆರಂಭ ಮಾಡಿದ್ದರು. ವಿನೋದ್ ಪ್ರಭಾಕರ್ 25ನೇ ಸಿನಿಮಾ ಆಗಿರುವುದರಿಂದ ಇದಕ್ಕೆ ದಿಗ್ಗಜರೇ ಕೈ ಜೋಡಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಈ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳಿನಲ್ಲಿ 'ಕಬಾಲಿ', 'ಕಾಲ', ಜಿಗರ್‌ಥಂಡ, ಇತ್ತೀಚೆಗೆ ಪ್ರಭಾಸ್ ನಟನೆಯ 'ಕಲ್ಕಿ 2898 ಎಡಿ' ಅಂತ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇವರು 'ಬಲರಾಮ ದಿನಗಳು' ಸಿನಿಮಾ ಟ್ಯೂನ್ ಹಾಕಿದ್ದಾರೆ. ಹೀಗಾಗಿ ಆಡಿಯೋ ಹಕ್ಕುಗಳಿಗೆ ಬಾರಿ ಬೇಡಿಕೆ ಬಂದಿತ್ತು.

ಚಿತ್ರತಂಡದ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಟಿ-ಸೀರಿಸ್ ದುಬಾರಿ ಮೊತ್ತಕ್ಕೆ ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿದೆ. ಇದು ವಿನೋದ್ ಪ್ರಭಾಕರ್ ವೃತ್ತಿ ಬದುಕಿನಲ್ಲಿಯೇ ಅತೀ ದೊಡ್ಡ ಮೊತ್ತಕ್ಕೆ ಆಡಿಯೋ ಹಕ್ಕುಗಳು ಸೇಲ್ ಆಗಿವೆ ಎಂದು ಹೇಳಲಾಗುತ್ತಿದೆ. ಸಂತೋಷ್ ನಾರಾಯಣನ್ ಅವರ ಟ್ಯೂನ್‌ಗಳಿಗೆ ಮನಸೋತಿರುವ ಟಿ-ಸೀರಿಸ್ ಹಿಂದೆ-ಮುಂದೆ ನೋಡದೆ ಭರ್ಜರಿ ಬೆಲೆಯನ್ನೇ ನೀಡಿದೆ ಎನ್ನಲಾಗಿದೆ.

ಒಂದು ಮೂಲದ ಪ್ರಕಾರ, ಟಿ-ಸೀರಿಸ್ ಆಡಿಯೋ ಸಂಸ್ಥೆ ಬರೋಬ್ಬರಿ ₹3.75 ಕೋಟಿ ವೆಚ್ಚದಲ್ಲಿ ಈ ಸಿನಿಮಾ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿದೆ. ಇದರಿಂದ 'ಬಲರಾಮನ ದಿನಗಳು' ಸಿನಿಮಾಗೆ ಸಿಕ್ಕಾಪಟ್ಟೆ ಬಲ ಬಂದಿದೆ ಎನ್ನಲಾಗಿದೆ. ಆಡಿಯೋ ಹಕ್ಕುಗಳು ಇತ್ತೀಚೆಗೆ ಇಷ್ಟು ದೊಡ್ಡ ಮೊತ್ತಕ್ಕೆ ಇತ್ತೀಚೆಗೆ ಮಾರಾಟ ಆಗಿರಲಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಿನಿಮಾದಿಂದ ಇನ್ನಷ್ಟು ಉತ್ತಮ ಹಾಡುಗಳನ್ನು ನಿರೀಕ್ಷೆ ಮಾಡಬಹುದು.

ನಿರ್ದೇಶಕ ಕೆ.ಎಂ.ಚೈತನ್ಯ, ವಿನೋದ್ ಪ್ರಭಾಕರ್, ಪ್ರಿಯಾ ಆನಂದ್ ಸೇರಿದಂತೆ ಇಡೀ ಚಿತ್ರತಂಡ 'ಬಲರಾಮನ ದಿನಗಳು' ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದೆ. "ಶುರು ಶುರು.." ಎನ್ನುವ ಮೊದಲ ಹಾಡು ಬಿಡುಗಡೆಯಾದ ಒಂದು ದಿನದಲ್ಲಿಯೇ 1.9 ಮಿಲಿಯನ್ ವೀವ್ಸ್ ಅನ್ನು ಪಡೆದುಕೊಂಡಿದೆ. ಸಂತೋಷ್ ನಾರಾಯಣನ್ ಟ್ಯೂನ್‌ಗೆ ಜಯಂತ್ ಕಾಯ್ಕಿಣಿ ಸಂಗೀತ ನೀಡಿದ್ದು, ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದಾರೆ.

'ಆ ದಿನಗಳು' ಸಿನಿಮಾಗೆ ಹೋಲುವ ಶೀರ್ಷಿಕೆಯಿಂದ ಇದು ಪಾರ್ಟ್ 2 ಇರಬಹುದಾ? ಎಂಬ ಗೊಂದಲಕ್ಕೆ ಬಿದ್ದಿದ್ದರು. ಆದರೆ, ನಿರ್ದೇಶಕ ಕೆ.ಎಂ ಚೈತನ್ಯ 'ಆ ದಿನಗಳು' ಸಿನಿಮಾಗೂ 'ಬಲರಾಮನ ದಿನಗಳಿಗೂ' ಸಂಬಂಧವಿಲ್ಲ. ಇದೊಂದು ಕಾಲ್ಪನಿಕ ಕಥೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, 'ಆ ದಿನಗಳು' ಸಿನಿಮಾದಲ್ಲಿ ಇದ್ದ ಬಹುತೇಕ ಪಾತ್ರಗಳನ್ನು ಇಲ್ಲಿಯೂ ನೋಡಬಹುದು. ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ ಜೊತೆಗೆ ಅವಿನಾಶ್, ವಿನಯ್ ಗೌಡ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ. ಇನ್ನೂ ಸಿನಿಮಾ ರಿಲೀಸ್ ಡೇಟ್ ಅನ್ನು ಇನ್ನೂ ಚಿತ್ರತಂಡ ರಿಲೀಸ್ ಮಾಡಬೇಕಿದೆ.

More from Filmibeat

English summary
Santhosh Narayanan composed Vinod Prabhakar starrer Balaramana Dinagalu audio rights details.
Read more about: vinod prabhakar audio
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X