"ನೀಲಿ ಬಣ್ಣದಿಂದ ಕೆಂಪು ಬಣ್ಣಕ್ಕೆ ಬದಲಾದ ಸಪ್ತ ಸಾಗರ":"ಆ ಕನ್ಸಿಗೆ ಮತ್ತೆ ಹೋಗಕ್ಕೆ ಆಗಲ್ಲ" ಟ್ರೈಲರ್ ನೋಡಿ ನೆಟ್ಟಿಗರು ಕಮೆಂಟ್

ಈ ವರ್ಷ ಸ್ಯಾಂಡಲ್‌ವುಡ್‌ಗೆ ಮೈಲ್ಡ್ ಹಿಟ್ ಕೊಟ್ಟ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ'. ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜೋಡಿ ಕಂಡು ಒಂದು ವರ್ಗ ಫಿದಾ ಆಗಿತ್ತು. ಹೇಮಂತ್ ಎಂ ರಾವ್ ಹೆಣೆದ ಎಮೋಷನಲ್ ಸ್ಟೋರಿಗೆ ಕಣ್ಣೀರು ಹಾಕಿದ್ದರು. ಚರಣ್ ರಾಜ್ ಮ್ಯೂಸಿಕ್‌ ನೋವಲ್ಲೂ ಕಿಕ್ ಕೊಟ್ಟಿತ್ತು. ಸಿನಿಮ್ಯಾಟೋಗ್ರಫಿ ಕಣ್ಣಿಗೆ ತಂಪೆರೆದಿತ್ತು.

'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ಬಾಕ್ಸಾಫೀಸ್‌ನಲ್ಲಿ ಅದ್ಭುತ ಅನ್ನುವಷ್ಟು ಕಲೆಕ್ಷನ್ ಮಾಡದೇ ಹೋದರೂ, ಜನರಿಗೆ ತೀರಾ ಹತ್ತಿರವಾಗಿತ್ತು. ಭಾವನಾತ್ಮಕ ಸಿನಿಮಾ ಬಯಸುವವರಿಗೆ ಈ ಸಿನಿಮಾ ಇಷ್ಟ ಆಗಿತ್ತು. ಅದರಲ್ಲೂ ಸಿನಿಮಾ ಓಟಿಟಿಗೆ ಬಂದ ಮೇಲಂತೂ ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಇದೇ ಮೂಡ್‌ನಲ್ಲಿಯೇ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

Sapta Sagaradaache Ello Side B Trailer Audience Applauds Rakshit,Hemanth Rukmini Vasanth

ಇದೇ ತಿಂಗಳು (ನವೆಂಬರ್) 17ಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ. 3 ನಿಮಿಷ 6 ಸೆಕೆಂಡುಗಳ ಈ ಟ್ರೈಲರ್ ನೋಡಿದ ಬಳಿಕ ಸಿನಿಪ್ರಿಯರು ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡಿದ್ದಾರೆ. ಕೆಲವು ಕಮೆಂಟ್‌ಗಳು ಸಖತ್ ಇಂಟ್ರೆಸ್ಟಿಂಗ್ ಆಗಿವೆ. ಅಂತಹ ಆ ಕಮೆಂಟ್‌ಗಳು ಏನು ಅನ್ನೋದನ್ನು ತಿಳಿಯಲು ಮುಂದೆ ಓದಿ..

"3 ನಿಮಿಷ ಟ್ರೈಲರ್ ನೋಡಿ ವಿಚಲಿತನಾಗಿಲ್ಲ"

"ಡ್ಯಾಮ್.. ರಕ್ಷಿತ್ ಶೆಟ್ಟಿಯಿಂದ ಮತ್ತೊಂದು ಅದ್ಭುತ ಸಿನಿಮಾ? ಅವರ ತಮ್ಮ ಪ್ರತಿಯೊಂದು ಸಿನಿಮಾ ಮೂಲಕ ನಿರಂತರವಾಗಿ ಪ್ರೇಕ್ಷಕರಿಗೆ ಅಚ್ಚರಿಗೊಳಿಸುತ್ತಲೇ ಇದ್ದಾರೆ. ಇದೂ ಕೂಡ ಹಾಗೇ ಇರುತ್ತೆ ಎಂದು ಭಾವಿಸಿದ್ದೇನೆ. ಬಹಳ ದಿನಗಳ ಬಳಿಕ ನನಗೆ ನಿರಾಸೆ ಆಗಿಲ್ಲ. ಮೂರು ನಿಮಿಷದಷ್ಟು ಉದ್ದದ ಟ್ರೈಲರ್ ನೋಡುವಾಗ ವಿಚಲಿತನಾಗಲಿಲ್ಲ." ಎಂದು ನೆಟ್ಟಿಗರೊಬ್ಬರು 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಟ್ರೈಲರ್ ನೋಡಿ ಕಮೆಂಟ್ ಮಾಡಿದ್ದಾರೆ.

ಸೈಡ್ ಎ ಪದ್ಯ.. ಸೈಡ್ ಬಿ ಸೇಡು

'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಟ್ರೈಲರ್ ಇಷ್ಟ ಆಗುವುದಕ್ಕೆ ಶುರುವಾಗಿದೆ. ಸೈಡ್ ಎ ನೋಡಿ ಸಿನಿಪ್ರಿಯರು ಸುಂದರವಾದ ಪದ್ಯ ಎಂದಿದ್ದರು. ಈಗ ಸೈಡ್ ಬಿ ನೋಡಿ ಸಖತ್ ಆಗಿಯೇ ರಿಯಾಕ್ಷನ್ ಕೊಟ್ಟಿದ್ದಾರೆ. "ಸೈಡ್ ಎ ಸುಂದರವಾದ ಪದ್ಯ.. ಸೈಡ್ ಬಿ ಬಹುಶ: ಭಯಾನಕ ಸೇಡಿನ ಕಥೆ. ಅವನ ಕಣ್ಣು ಸಂಪೂರ್ಣ ನೀಲಿ (ಪ್ರೀತಿ) ಹಾಗೂ ಕೆಂಪು (ಸೇಡು) ಪ್ರೀತಿಯ ಮೂಲ ವಿಷಯವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Sapta Sagaradaache Ello Side B Trailer Audience Applauds Rakshit,Hemanth Rukmini Vasanth

ಹೇಮಂತ್ ಮಾಸ್ಟರ್ ಕ್ಲಾಸ್ ಸಿನಿಮಾ

ಹೇಮಂತ್ ಮಾಸ್ಟರ್ ಕ್ಲಾಸ್ ಕ್ರೈಂ ಶೈಲಿಯ ಕಥೆ, ಅದ್ಭುತ ಕ್ಯಾಮರಾ ವರ್ಕ್, ಎಲ್ಲಕ್ಕಿಂತ ಹೆಚ್ಚಾಗಿ ಕಲರ್ ಟೋನ್‌ಗಳು, ರಕ್ಷಿತ್ ಶೆಟ್ಟಿಯ ಕಣ್ಣುಗಳಲ್ಲಿರುವ ತೀವ್ರತೆ, ಮನು ಪಾತ್ರವನ್ನು ವಿವರವಾಗಿ ಹೇಳುವ ರೀತಿ, ಮೈ ಜುಂ ಎನಿಸುವ ಚರಣ್ ರಾಜ್ ಮ್ಯೂಸಿಕ್, ಸೈಡ್ ಎ ಡೈಲಾಗ್‌ಗಳನ್ನು ಸಿಂಕ್ ಮಾಡಿರುವ ರೀತಿ, ಬಣ್ಣ, ವೇಗ ಇವೆಲ್ಲವನ್ನೂ ನೋಡಿದರೆ ಇದ್ದೊಂದು ಮಾಸ್ಟರ್ ಪೀಸ್ ಅಂತ ಅನಿಸದೇ ಇರೋದಿಲ್ಲ. ನನಗೆ ಈ ಸಿನಿಮಾ ಕೂಡ ಒಂದು ಮಾಸ್ಟರ್ ಪೀಸ್ ಆಗುತ್ತೆ ಅನ್ನೋದರಲ್ಲಿ ಅನುಮಾನವಿಲ್ಲ. ಆ ಕನ್ಸಿಗೆ (Side A) ಮತ್ತೆ ಹೋಗಕ್ಕಾಗೋದಿಲ್ಲ - ಸೈಡ್ ಎ ಒಂದು ಕನಸು.. ಪದ್ಯ" ಎಂದು ಕಮೆಂಟ್ ಮಾಡಿದ್ದಾರೆ.

"ಮತ್ತೊಂದು ಹೆಮ್ಮೆಯ ಹೆಜ್ಜೆ"

ಇಷ್ಟೇ ಅಲ್ಲ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಟ್ರೈಲರ್ ನೋಡಿ ಬಹಳಷ್ಟು ಮಂದಿ ಥ್ರಿಲ್ ಆಗಿದ್ದಾರೆ. "ಕರ್ನಾಟಕ ಹೆಮ್ಮೆಯ ಮತ್ತೊಂದು ಹೆಜ್ಜೆ ಸಪ್ತ ಸಾಗರದಾಚೆ ಎಲ್ಲೋ ಒಳ್ಳೆದಾಗಲಿ", "ನಿಜ ಪ್ರೀತಿಗೆ ಮತ್ತೊಂದು ದೊಡ್ಡ ಹೆಜ್ಜೆಯಲ್ಲಿ ಸಪ್ತಾ ಸಾಗರದಾಚೆ ಎಲ್ಲೋ(B)", "ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಪೂನಾದಲ್ಲೂ ಹಾಕಿ. ಇಲ್ಲಾ ಅಂದರೆ ನನ್ನ ಅಚ್ಚು ಮೆಚ್ಚಿನ ನಗರ ಬೆಂಗಳೂರಿಗೆ ಬರಬೇಕಾಗುತ್ತೆ" ಎಂದು ಪರಭಾಷೆಯ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

More from Filmibeat

English summary
Rakshit Shetty's Sapta Sagaradaache Ello Side B Official Trailer Audience Reaction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X