"ಯುವ ರಾಜ್‌ಕುಮಾರ್ ಜೊತೆ ಸಿನಿಮಾ"; ಏನಂದ್ರು 'ಅಶೋಕ' ಬೆಡಗಿ ಸಪ್ತಮಿ ಗೌಡ?

'ಪಾಪ್ ಮಂಕಿ ಟೈಗರ್' ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಮಿಗಳ ಮನ ಗೆದ್ದ ನಟಿ ಸಪ್ತಮಿ ಗೌಡ. ರಿಷಬ್ ಶೆಟ್ಟಿ ಜೊತೆ 'ಕಾಂತಾರ'ದಲ್ಲಿ ನಟಿಸುತ್ತಿದ್ದಂತೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದರು. ಇಲ್ಲಿಂದ ಸಪ್ತಮಿ ಗೌಡಗೆ ಕನ್ನಡದಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಅದರಲ್ಲೊಂದು ನೀನಾಸಂ ಸತೀಶ್ ಜೊತೆ ನಟಿಸುತ್ತಿರುವ 'ದಿ ರೈಸ್ ಆಫ್ ಅಶೋಕ'.

'ದಿ ರೈಸ್ ಆಫ್ ಅಶೋಕ' ಸಿನಿಮಾದಲ್ಲಿ ಸಪ್ತಮಿ ಗೌಡ ಮತ್ತೆ ಡಿ ಗ್ಲಾಮರ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಹಳ್ಳಿ ಹುಡುಗಿ ಪಾತ್ರದಲ್ಲಿ ಲಂಗ ಧಾವಣಿ ಧರಿಸಿ, ಹೂವು ಮಾರುವ ಹುಡುಗಿಯಾಗಿ, ಅಶೋಕನ ಪ್ರೇಯಸಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ಇಷ್ಟ ಆದ್ಮೇಲೆ ನಟಿಸುವುದಕ್ಕೆ ಗ್ರೀನ್ ಸಿಗ್ಮಲ್ ಕೊಟ್ಟಿದ್ದಾರೆ. ಇದೇ ವೇಳೆ ಯುವ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡುವ ಬಗ್ಗೆನೂ ಮಾತಾಡಿದ್ದಾರೆ.

Sapthami Gowda says she will act with Yuva Rajkumar if she gets a good story and role

'ಯುವ' ರಿಲೀಸ್ ಬಳಿಕ ಯುವ ರಾಜ್‌ಕುಮಾರ್ ವಿಚ್ಛೇದನದ ವಿಷಯದಲ್ಲಿ ಸಪ್ತಮಿ ಗೌಡ ಕೂಡ ವಿವಾದದಲ್ಲಿ ಸಿಲುಕಿದ್ದರು. ಈ ಬೆಳವಣಿಗೆಯಿಂದ ಮತ್ತೆ ಯುವ ಹಾಗೂ ಸಪ್ತಮಿಗೌಡ ಒಟ್ಟಿಗೆ ನಟಿಸುತ್ತಾರಾ? ಇಲ್ವಾ? ಅನ್ನೋ ಗೊಂದಲ ಇಬ್ಬರ ಅಭಿಮಾನಿಗಳಲ್ಲಿ ಇತ್ತು. ಇದಕ್ಕೆ ಸ್ವತ: ಸಪ್ತಮಿಗೌಡ 'ಅಶೋಕ' ಸೆಟ್ಟಿನಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. ಅಷ್ಟಕ್ಕೂ ಯುವ ಜೊತೆ ಸಪ್ತಮಿ ಸಿನಿಮಾ ಮಾಡುತ್ತಾರಾ? ಇಲ್ವಾ?

ಈ ವರ್ಷ ಸಿಕ್ಕಾಪಟ್ಟೆ ಬ್ಯುಸಿ

ವರ್ಷಕ್ಕೆ ಎರಡೇ ಸಿನಿಮಾ ಅಂದುಕೊಂಡಿದ್ದ ಸಪ್ತಮಿ ಗೌಡ ಈ ಬಾರಿ ಮೂರು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕಾದೂ ಕಾದು ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸಪ್ತಮಿ ಈ ವರ್ಷ ಬ್ಯುಸಿ ಅಂತಾರೆ. "ಪಾಪ್‌ಕಾರ್ನ್ ಆದ್ಮೇಲೆ ಕಾದೆವು. ಕಾಂತಾರ ಆದ್ಮೇಲೆ ಹಾಗೆ ಮತ್ತೆ ಕಾದೆವು. ಈ ವರ್ಷನೇ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದು. ಇಲ್ಲಾ ಅಂದರೆ ವರ್ಷಕ್ಕೆ ಎರಡು ಸಿನಿಮಾ ಅಷ್ಟೇ ಒಪ್ಪಿಕೊಳ್ಳುತ್ತಿದ್ದಿದ್ದು. ಈ ವರ್ಷವೇ ಮೂರು ಸಿನಿಮಾ ಹಾಗೂ ಒಂದು ರಿಲೀಸ್ ಇದೆ. ನಿರಂತರವಾಗಿ ಶೂಟಿಂಗ್ ನಡೆಯುತ್ತಿದೆ. ಈ ವರ್ಷ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ವರ್ಷ ನನ್ನದು. ಎಲ್ಲ ಪಾತ್ರನೂ ವಿಭಿನ್ನವಾಗಿತ್ತು." ಎಂದು ಗ್ಯಾರೆಂಟಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Sapthami Gowda says she will act with Yuva Rajkumar if she gets a good story and role

ಮದುವೆ ಯಾವಾಗ?

'ದಿ ರೈಸ್ ಆಫ್ ಅಶೋಕ' ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟಿಗೆ ಮದುವೆ ಬಗ್ಗೆನೂ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಸಪ್ತಮಿ ಗೌಡ ಹೇಳಿದ್ದಿಷ್ಟು. "ಎಲ್ಲರೂ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ಈಗ ನಾನು ಬ್ಯುಸಿ ಇದ್ದೀನಿ. ರಿಲೀಸ್‌ಗೆ ಒಂದಿಷ್ಟು ಸಿನಿಮಾವಿದೆ. ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಮದುವೆ ಆಲೋಚನೆ ಇತ್ತು. ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದೀನಿ. ನಾನು ಹುಡುಗ ಸಿಕ್ಕಿದಾಗ, ಅವರಿಗೂ ನಾನು ಇಷ್ಟ ಆದಾಗ ಆಗೋಣ. ಯಾವಾಗ ನಡೆಯಬೇಕೋ ಅದು ನಡೆಯುತ್ತೆ. ನಾನಾಗೇ ಫೋರ್ಸ್ ಮಾಡಿಕೊಂಡು ಮದುವೆ ಅಂತ ಹೋಗಲ್ಲ" ಎಂದಿದ್ದಾರೆ.

Take a Poll

ನಿತಿನ್ ಸಿನಿಮಾ ನಿಂತಿಲ್ಲ

ಯುವ ರಾಜ್‌ಕುಮಾರ್ ಜೊತೆ ವಿವಾದದ ವೇಳೆ ಸಪ್ತಮಿ ಗೌಡ ತೆಲುಗು ನಟ ನಿತಿನ್ ಜೊತೆ ನಟಿಸುತ್ತಿದ್ದರು. ವಿವಾದದ ಬಳಿಕ ಆ ಸಿನಿಮಾ ನಿಂತಿದೆ ಎನ್ನಲಾಗಿತ್ತು. ಆದರೆ, ಸಿನಿಮಾ ಶೂಟಿಂಗ್ ಮುಗಿಸಿ, ರಿಲೀಸ್‌ಗೂ ರೆಡಿಯಾಗಿದೆ. "ನಿತಿನ್ ಅವರೊಂದಿಗೆ ತಮ್ಮುಡು ಅನ್ನೋ ತೆಲುಗು ಸಿನಿಮಾ ಮಾಡುತ್ತಿದ್ದೇನೆ. ಅದು ರಿಲೀಸ್ ಆಗಬೇಕಿದೆ. ಆ ಸಿನಿಮಾ ಇನ್ನೇನು ರಿಲೀಸ್ ಆಗಬೇಕಿತ್ತು. ಅಷ್ಟರಲ್ಲೇ ಮುಂದಕ್ಕೆ ಹೋಗಿದೆ." ಎನ್ನುತ್ತಾರೆ.

ಯುವ ಜೊತೆ ಸಿನಿಮಾ ಮಾಡ್ತಾರಾ?

"ನೋಡಬೇಕು, ಸ್ಕ್ಟ್ರೀಪ್ ಹೇಗೆ ಬರುತ್ತೆ ಅಂತ. ಮುಂಚೆ ಹೇಳಿದ ಹಾಗೆ ಯುವ ಸಿನಿಮಾ ಮಾಡಿದಾಗಲೂ ನನಗೆ ಪಾತ್ರ ಇಷ್ಟ ಆಗಿತ್ತು. ನಾನು ಕಮರ್ಷಿಯಲ್ ಸಾಂಗ್ ಮಾಡಿರಲಿಲ್ಲ. ಅದನ್ನು ಮಾಡಬೇಕು ಅಂತ ಆಸೆಯಿತ್ತು. ಆ ಹಾಡನ್ನು ಲಡಾಕ್‌ನಲ್ಲಿ ಶೂಟ್ ಮಾಡಿದ್ವಿ. ಅಂತಹದ್ದೇನಾದರೂ ಎಕ್ಸ್‌ಪ್ಲೋರ್ ಮಾಡುವಂತಹ ಪಾತ್ರ ಸಿಗಬೇಕು. ಆಗ ನೋಡೋಣ." ಎಂದು ಯುವ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡುವ ವಿಷಯವನ್ನು ತಳ್ಳಿ ಹಾಕಿಲ್ಲ.

More from Filmibeat

English summary
Sapthami Gowda says she will act with Yuva Rajkumar if she gets a good story and role;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X