ಯುವ ರಾಜ್‌ಕುಮಾರ್ ವಿಚ್ಛೇದನ ಪ್ರಕರಣ: ಶ್ರೀದೇವಿ ಬೈರಪ್ಪ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಪ್ತಮಿ ಗೌಡ
ಸ್ಯಾಂಡಲ್‌ವುಡ್ ಮಂದಿ ಥಿಯೇಟರ್‌ಗೆ ಜನರು ಬರುತ್ತಿಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕೂತುಕೊಂಡಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾಗಳು ನಿಲ್ಲುತ್ತಿಲ್ಲ ಅಂತ ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ, ನಟ-ನಟಿಯರು ಮಾತ್ರ ಒಂದೊಂದೇ ವಿವಾದಗಳಲ್ಲಿ ಸಿಕ್ಕಿಕೊಂಡು ಸುದ್ದಿಯಾಗುತ್ತಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದಿಂದ ಶುರುವಾಗಿ ದರ್ಶನ್ ಕೊಲೆ ಪ್ರಕರಣದವರೆಗೂ ಬಂದು ನಿಂತಿದೆ.
ಯುವ ರಾಜ್‌ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ದೊಡ್ಡ ಅಭಿಮಾನಿಗಳಲ್ಲಿ ಬೇಸರ ತರಿಸಿತ್ತು. ಇಡೀ ಕನ್ನಡ ಚಿತ್ರರಂಗಕ್ಕೆ ಮಾದರಿಯಾಗಿದ್ದ ಕುಟುಂಬದಲ್ಲಿ ಇದು ಮೊದಲ ವಿಚ್ಛೇದನದ ಪ್ರಕರಣ. ಇನ್ನು ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಕೂಡ ಯುವ ವಿಚ್ಛೇದನದ ನೋಟೀಸ್‌ಗೆ ಪ್ರತ್ಯುತ್ತರ ನೀಡಿದ್ದಾರೆ. ಈ ವೇಳೆ 'ಕಾಂತಾರ' ನಟಿ ಸಪ್ತಮಿ ಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಬೈರಪ್ಪ ವಿಚ್ಛೇದನಕ್ಕೆ ಸಪ್ತಮಿ ಗೌಡ ಕಾರಣ ಅಂತ ನೋಟೀಸ್‌ನಲ್ಲಿ ತಿಳಿದ್ದರು. ಈ ವಿಷಯ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ದೊಡ್ಮನೆಯ ಕುಡಿ ಯುವರಾಜ್ ಕುಮಾರ್ ತಮಗೆ ಪತ್ನಿ ಶ್ರೀದೇವಿಯಿದ ಅಗೌರವ, ಮಾನಸಿಕ ಕ್ರೌರ್ಯದ ಆರೋಪ ಹೊರಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಯುವ ರಾಜ್‌ಕುಮಾರ್ ಹಾಗೂ ಸಪ್ತಮಿಗೌಡ ಇಬ್ಬರೂ ಸಂಬಂಧ ಹೊಂದಿದ್ದಾರೆಂದು ಹೇಳಿದ್ದರು.
ಯುವ ಪರ ವಕೀಲರಿಗೆ ಶ್ರೀದೇವಿ ಬೈರಪ್ಪ ಉತ್ತರ ನೀಡುವ ನೋಟೀಸ್‌ನಲ್ಲಿ ಯುವ ರಾಜ್‌ಕುಮಾರ್ ನಟಿ ಸಪ್ತಮಿ ಗೌಡ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪ ಮಾಡಿದ್ದರು. ಹೀಗಾಗಿ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಬೈರಪ್ಪ ವಿಚ್ಚೇದನ ಪ್ರಕರಣದಲ್ಲಿ ಸಪ್ತಮಿ ಗೌಡ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಸದ್ಯ ಯುವ ಪತ್ನಿ ಶ್ರೀದೇವಿ ಬೈರಪ್ಪ ಅಮೆರಿಕದ ಹಾವರ್ಡ್ ಯುನಿವರ್ಸಿಟಿಯಲ್ಲಿ ಉನ್ನಯ ವ್ಯಾಸಾಂಗ ಮಾಡುತ್ತಿದ್ದಾರೆ.

ಶ್ರೀದೇವಿ ಬೈರಪ್ಪ ಆರೋಪ ಮಾಡುತ್ತಿದ್ದಂತೆ ಸಪ್ತಮಿ ಗೌಡ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಯುವ ಪತ್ನಿ ಶ್ರೀದೇವಿ ತಮ್ಮ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ವಿರುದ್ಧ ಮಾನಹಾನಿ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತಮ್ಮ ವಿರುದ್ಧ ಇಂತಹ ಮಾನಹಾನಿಯಾಗುವಂತೆ ಹೇಳಿಕೆಗಳನ್ನು ಅವರು ನೀಡದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಶ್ರೀದೇವಿ ತಮ್ಮ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಕಾಜ್ಞೆ ನೀಡುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಶ್ರೀದೇವಿ ಭೈರಪ್ಪಗೆ ನೋಟೀಸ್ ಜಾರಿ ಮಾಡುವಂತೆ ಆದೇಶ ಮಾಡಿದೆ. ಈ ಆದೇಶದ ಬಳಿಕ ಶ್ರೀದೇವಿ ಬೈರಪ್ಪ ಅವರ ಮುಂದಿನ ಹೆಜ್ಜೆ ಏನು? ಅನ್ನೋದು ಕುತೂಹಲ ಸೃಷ್ಟಿಸಿದೆ. ಯಾಕಂದ್ರೆ, ಯುವ ನೋಟೀಸ್‌ಗೆ ಉತ್ತರ ನೀಡುವ ಪ್ರಕ್ರಿಯೆಯಲ್ಲಿ ಸಪ್ತಮಿ ಗೌಡ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಸದ್ಯ ಅಮೆರಿಕದಲ್ಲಿರುವ ಶ್ರೀದೇವಿ ಬೈರಪ್ಪ ಭಾರತಕ್ಕೆ ಹಿಂತಿರುಗಿದ ಬಳಿಕ ಏನೆಲ್ಲಾ ಆಗುತ್ತೆ ಅನ್ನೋದು ಗೊತ್ತಾಗುತ್ತೆ.


Click it and Unblock the Notifications











