ರೆಬೆಲ್ ಸ್ಟಾರ್ ಜನ್ಮದಿನಕ್ಕೆ ನಟ ನೀನಾಸಂ ಸತೀಶ್ ಹಾಡಿನ ಗೌರವ
ರೆಬೆಲ್ ಸ್ಟಾರ್ ಅಂಬರೀಷ್ ನಮ್ಮೊಂದಿಗೆ ಇದ್ದಿದ್ದರೆ ಮೇ 29ಕ್ಕೆ 68 ವರ್ಷ. ಕಳೆದ ವರ್ಷದಿಂದ ಅಂಬರೀಷ್ ಜನ್ಮದಿನಕ್ಕೆ ಸಡಗರದ ವಾತಾವರಣವಿಲ್ಲ. ಅಂಬರೀಷ್ ಅನುಪಸ್ಥಿತಿ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಲಾಕ್ ಡೌನ್ ನಡುವೆಯೂ ಅಂಬರೀಷ್ ಅವರ ನೆನಪಲ್ಲಿ ಅವರ ಹುಟ್ಟುಹಬ್ಬದ ಆಚರಣೆಗೆ ವಿವಿಧ ರೀತಿಯಲ್ಲಿ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
Recommended Video
ಅಂಬರೀಷ್ ಜನ್ಮದಿನಕ್ಕೆ ನಟ ಸತೀಶ್ ನೀನಾಸಂ ವಿಶೇಷ ಹಾಡೊಂದನ್ನು ಅರ್ಪಿಸುತ್ತಿದ್ದಾರೆ. ನಟನೆಯ ಮೂಲಕ ಗಮನ ಸೆಳೆದಿರುವ ಸತೀಶ್ ನೀನಾಸಂ, ಅಂಬರೀಷ್ ಜನ್ಮದಿನ ಪ್ರಯುಕ್ತ ಹಾಡಿರುವ ವಿಶೇಷ ಹಾಡೊಂದು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಬಿಡುಗಡೆಯಾಗಲಿದೆ. 'ಬಹದ್ದೂರ್' ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಈ ಹಾಡು ರಚಿಸಿದ್ದಾರೆ.
'ನಿಂತಿಲ್ಲ ಕನ್ವರ್ ಲಾಲ್ ಕನವರಿಕೆ. ನೀನಾಸಂ ಸತೀಶನ ಹಾಡುಗಾರಿಕೆ. ಬರ್ತಿದೆ ಭರ್ಜರಿ ಬರ್ಥಡೇ ಉಡುಗೊರೆ. ಡೆಡಿಕೇಟೆಡ್ ಟು ನಮ್ಮೂರ ಹಮ್ಮೀರನೆಂಬ ಮಂಡ್ಯದ ದೊರೆ' ಎಂದು ಬರೆದಿರುವ ಪೋಸ್ಟರ್ ವಿನ್ಯಾಸವನ್ನು ಚೇತನ್ ಹಂಚಿಕೊಂಡಿದ್ದಾರೆ.

ನವೀನ್ ಸಜ್ಜು ಸಂಗೀತ ನಿರ್ದೇಶನದಲ್ಲಿ ಈ ಹಾಡು ಸಿದ್ಧವಾಗಿದೆ. 'ನಮ್ಮೂರ ಹಮ್ಮೀರ ಮಂಡ್ಯದ ಗಂಡು' ವರ್ಣನೆ ಇರುವ ಈ ಹಾಡಿಗೆ ನೀನಾಸಂ ಸತೀಶ್ ಧ್ವನಿಯಾಗಿದ್ದಾರೆ. ಅಯೋಗ್ಯ ಚಿತ್ರದಲ್ಲಿ ಅಂಬರೀಷ್ ಅಭಿಮಾನಿಯಾಗಿ ಸತೀಶ್ ನಟಿಸಿದ್ದರು.


Click it and Unblock the Notifications











