ರೋಮ್ಯಾಂಟಿಕ್‌ ಮೂಡ್ನಲ್ಲಿ ರಚಿತಾ ರಾಮ್-ಸತೀಶ್: ಪ್ರೇಮಿಗಳ ದಿನಕ್ಕೆ 'ಮ್ಯಾಟ್ನಿ' ಗಿಫ್ಟ್

ಸ್ಯಾಂಡಲ್‌ವುಡ್‌ನಲ್ಲಿ ಪ್ರೇಮಿಗಳ ದಿನಗಳದ ಸಂಭ್ರಮ ಜೋರಾಗಿ ನಡೆಯುತ್ತಿದೆ. ಕನ್ನಡದ ಹಲವು ಸಿನಿಮಾಗಳು ವ್ಯಾಲೆಂಟೈನ್ಸ್ ಡೇ ದಿನದಂದು ತಮ್ಮ ಸಿನಿಮಾದ ಪೋಸ್ಟರ್, ಸಾಂಗ್, ಟೀಸರ್ ಅನ್ನು ಬಿಡುಗಡೆ ಮಾಡಿವೆ. ಅದರಂತೆ ಸ್ಯಾಂಡಲ್‌ವುಡ್‌ನ ಹಿಟ್ ಜೋಡಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಅಭಿನಯದ ಮ್ಯಾಟ್ನಿ ಸಿನಿಮಾ ಕೂಡ ರೊಮ್ಯಾಂಟಿಕ್ ಟೀಸರ್ ಅನ್ನು ರಿಲೀಸ್ ಮಾಡಿದೆ.

ಸ್ಯಾಂಡಲ್‌ವುಡ್‌ನ ಸೂಪರ್ ಹಿಟ್ ಸಿನಿಮಾ 'ಅಯೋಗ್ಯ' ಬಳಿಕ ಮತ್ತೆ ರಚಿತಾ ರಾಮ್ ಹಾಗೂ ಸತೀಶ್ ಒಟ್ಟಿಗೆ ನಟಿಸುತ್ತಿದ್ದಾರೆ. ಅದುವೇ 'ಮ್ಯಾಟ್ನಿ'. ಈ ಸಿನಿಮಾದ ಪ್ರಮುಖ ಆಕರ್ಷಣೆಯೇ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್. ಈ ಹಿಟ್ ಕಾಂಬಿನೇಷನ್ ಮತ್ತೆ ತೆರೆಮೇಲೆ ನೋಡುವುದಕ್ಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಲು 'ಮ್ಯಾಟ್ನಿ' ಟೀಸರ್ ರಿಲೀಸ ಆಗಿದೆ. ಈ ವ್ಯಾಲೆಂಟೈನ್ಸ್ ಡೇ ಟೀಸರ್ ಬಗ್ಗೆ ನೀನಾಸಂ ಸತೀಶ್ ಫಿಲ್ಮಿಬೀಟ್ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

 'ಮ್ಯಾಟ್ನಿ' ಟೀಸರ್ ರಿಲೀಸ್

'ಮ್ಯಾಟ್ನಿ' ಟೀಸರ್ ರಿಲೀಸ್

ರಚಿತಾ ರಾಮ್ ಹಾಗೂ ಸತೀಶ್ ಕಾಂಬಿನೇಷನ್‌ನಲ್ಲಿ ಶೂಟ್ ಆಗುತ್ತಿರುವ ಸಿನಿಮಾ 'ಮ್ಯಾಟ್ನಿ' ಟೀಸರ್ ಗಮನ ಸೆಳೆದಿದೆ. ಟೀಸರ್‌ನಲ್ಲಿ ತೋರಿಸಿದ ಒಂದೊಂದು ಫ್ರೇಮ್ ಗ್ರ್ಯಾಂಡ್ ಆಗಿದೆ. ಈ ಟೀಸರ್ ಬಗ್ಗೆ ಸತೀಶ್ ಫುಲ್ ಖುಷಿಯಾಗಿದ್ದಾರೆ. "ಮ್ಯಾಟ್ನಿ ಟೀಸರ್ ಅನ್ನು ವ್ಯಾಲೆಂಟೈನ್ಸ್ ಡೇ ಬಿಡುಗಡೆ ಮಾಡಬೇಕು ಅಂತಲೇ ಡಿಸೈಡ್ ಮಾಡಿದ್ದೆವು. ಅದಕ್ಕಾಗಿಯೇ ಟೀಸರ್ ಅನ್ನು ಕಟ್ ಮಾಡಿದ್ದೆವು. ಸಿನಿಮಾ ಲವ್ ಇದೆ. ಆದರೆ, ಲವ್ ಬಿಟ್ಟು ಬೇರೆನೂ ಒಂದಿಷ್ಟು ವಿಷಯಗಳಿವೆ. ಸ್ನೇಹ, ಲವ್, ಮದುವೆ ಹೀಗೆ ಬೇರೆ ಬೇರೆ ವಿಷಯವಿದೆ. ಪ್ರತಿಯೊಂದು ಫ್ರೇಮ್ ಕೂಡ ಇಷ್ಟೇ ಬ್ಯೂಟಿಫುಲ್ ಆಗಿರುತ್ತೆ. ಇಡೀ ಸಿನಿಮಾ ಗ್ರ್ಯಾಂಡ್ ಆಗಿರುತ್ತೆ." ಅಂತ ನೀನಾಸಂ ಸತೀಶ್ ಭರವಸೆ ಕೊಡುತ್ತಾರೆ.

 'ಮ್ಯಾಟ್ನಿ ಟೀಸರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ'

'ಮ್ಯಾಟ್ನಿ ಟೀಸರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ'

"ರಚಿತಾ ರಾಮ್ ಹಾಗೂ ನನ್ನದು ಹಿಟ್ ಪೇರ್ ಆಗಿರುವುದರಿಂದ, ಮೊದಲ ಸಿನಿಮಾ ಹಿಟ್ ಆಗಿರುವುದರಿಂದ, ಏನಮ್ಮಿ ಯಾಕಮ್ಮಿ ವರ್ಕ್‌ಔಟ್ ಆಗಿರುವುದರಿಂದ ಈ ಸಿನಿಮಾ ನೋಡುವವರಿಗೆ ಎಕ್ಸ್‌ಪೆಕ್ಟೆಷನ್ ಇರುತ್ತೆ. ಮುಂದಿನ ಸಿನಿಮಾ ಹೇಗಿರಬಹುದು ಅಂತಿರುತ್ತೆ. ಮತ್ತೊಂದು ಲೆವೆಲ್‌ನಲ್ಲಿ ಇರಬೇಕು ಅಂತಾನೇ ಟೈಮ್ ತೆಗೆದುಕೊಂಡು ಮಾಡಿದ್ದು, ಈ ಮ್ಯಾಟ್ನಿ ಟೀಸರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ರೆಸ್ಪಾನ್ಸ್ ಚೆನ್ನಾಗಿ ಸಿಗುತ್ತೆ ಇದೆ." ಪ್ರೇಮಿಗಳ ದಿನ ಬಿಟ್ಟ ಟೀಸರ್ ಬಗ್ಗೆ ಸತೀಶ್ ಹರ್ಷ ವ್ಯಕ್ತಪಡಿಸಿದ್ದಾರೆ.

 'ಸಂಜೆ ಮೇಲೆ ಹಾಡು ಸೂಪರ್ ಹಿಟ್ ಆಗುತ್ತೆ'

'ಸಂಜೆ ಮೇಲೆ ಹಾಡು ಸೂಪರ್ ಹಿಟ್ ಆಗುತ್ತೆ'

"ನಮ್ಮಿಬ್ಬರ ಲವ್ ಸ್ಟೋರಿ ಮತ್ತು ಒಂದು ಸಾಂಗ್ ಇದೆ. ಅದು ತುಂಬಾನೇ ಚೆನ್ನಾಗಿ ಮೂಡಿಬಂದಿದೆ. ಈ ಹಾಡು ಜನರಿಗೆ ತುಂಬಾನೇ ಇಷ್ಟ ಆಗುತ್ತೆ. ಏನಮ್ಮ ಯಾಕಮ್ಮಿ ಹಾಡನ್ನು ಕ್ರಾಸ್ ಮಾಡುತ್ತೆ ಅಂತೆಲ್ಲಾ ಹೇಳುವುದಕ್ಕೆ ಆಗುವುದಿಲ್ಲ. ಅದು ನಮ್ಮ ಕೈಯಲ್ಲಿ ಇಲ್ಲ. ಏನಮ್ಮಿ ಹಾಡಿಗಿಂತಲೂ ಈ ಹಾಡನ್ನು ವಿಜ್ಯೂವಲಿ ತುಂಬಾನೇ ಚೆನ್ನಾಗಿ ತೆಗೆದಿದ್ದಾರೆ. ಸಂಜೆ ಮೇಲೆ ಸುಮ್ನೆ ಹಂಗೆ ಫೋನ್ ಮಾಡ್ಲಾ ನಿಂಗೆ' ಅನ್ನುವ ಹಾಡು ಅದು. ಸಾಹಿತ್ಯನೇ ಕಿಕ್ ಕೊಡುತ್ತೆ." ಅಂತ ಹಾಡಿನ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

 50% ಶೂಟಿಂಗ್ ಆಗಿದೆ ಅಷ್ಟೇ

50% ಶೂಟಿಂಗ್ ಆಗಿದೆ ಅಷ್ಟೇ

"ಸಿನಿಮಾ ಇನ್ನೂ ಕಂಪ್ಲೀಟ್ ಆಗಬೇಕು. ಕೇವಲ 50 ಪರ್ಸೆಂಟ್ ಶೂಟಿಂಗ್ ಆಗಿದೆ ಅಷ್ಟೇ. ಇನ್ನೂ 3- 4 ತಿಂಗಳ ಮೇಲೆ ಆಗುತ್ತೆ. ಇನ್ನೂ ಶೂಟಿಂಗ್ ತುಂಬಾನೇ ಇದೆ. ಸಿನಿಮ್ಯಾಟೋಗ್ರಫಿ, ಪೂರ್ಣ ಅವರ ಮ್ಯೂಸಿಕ್ ತುಂಬಾನೇ ಚೆನ್ನಾಗಿದೆ. ರಚಿತಾ ರಾಮ್ ಹಾಗೂ ನನ್ನ ಕಾಂಬಿನೇಷನ್‌ನನ್ನು ಇಷ್ಟ ಪಡುತ್ತಾರೆ. ಪ್ಯಾಷನೇಟ್ ಟೀಂ ಇದೆ. ಸಿನಿಮಾ ಇಷ್ಟ ಪಡುತ್ತಾರೆ ಅನ್ನುವುದು ನನ್ನ ನಂಬಿಕೆ." ಎನ್ನುತ್ತಾರೆ ಸತೀಶ್ ನೀನಾಸಂ.

More from Filmibeat

English summary
Sathish Ninasam and Rachita Ram Starrer Matinee Movie Teaser Released. After Ayogya movie Rachita Ram and Sathish will be seen in Matinee movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X