ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡ್ತಿದೆ 'ರೈಸ್ ಆಫ್ ಅಶೋಕ'; ಟ್ರೇಲರ್ ನಲ್ಲಿ ಕಿಚ್ಚು ಹಚ್ಚಿದ ಅಶೋಕ

ಸತೀಶ್ ನೀನಾಸಂ ನಟನೆಯ ಹೊಚ್ಚ ಹೊಸ ಸಿನಿಮಾ 'ದಿ ರೈಸ್ ಆಫ್ ಅಶೋಕ' ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ಸಿನಿಮಾ ಪ್ರಚಾರವನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಕೊನೆಗೆ ಸತೀಶ್ ನೀನಾಸಂ ಅವರೇ ಮುಂದೆ ನಿಂತು ಈ ಸಿನಿಮಾವನ್ನು ಫಿನಿಶ್ ಮಾಡಿದ್ದಾರೆ. ಈಗ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ.

'ದಿ ರೈಸ್ ಆಫ್ ಅಶೋಕ' ಸಿನಿಮಾ ಇದೇ ತಿಂಗಳ ಅಂದರೆ, ಫೆಬ್ರವರಿ 27 ರಂದು ಹಲವು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ರಿಲೀಸ್ ಆಗುತ್ತಿರುವ ಭಾಷೆಯಲ್ಲಿ ಪ್ರಚಾರ ಕೂಡ ಮಾಡುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ದೊಡ್ಡ ನಿರ್ಮಾಣ ಸಂಸ್ಥೆಗಳ ಸತೀಶ್ ನೀನಾಸಂ ಜೊತೆ ಕೈ ಜೋಡಿಸಿದ್ದಾರೆ.

Sathish Ninasam and Sapthami Gowda movie Rise Of Ashoka Trailer is trending

ಇತ್ತೀಚೆಗೆ 'ದಿ ರೈಸ್ ಆಫ್ ಅಶೋಕ' ಸಿನಿಮಾ ಟ್ರೈಲರ್ ರಿಲೀಸ್ ಆಗಿತ್ತು. ಚಿತ್ರರಂಗದ ಗಣ್ಯರು ಜೊತೆಯಾಗಿ ಬಂದು ಈ ಸಿನಿಮಾದ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದಾರೆ. ಈ ಅದ್ಧೂರಿ ಸಮಾರಂಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್​, ದುನಿಯಾ ವಿಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದಿಗಂತ್, ನಾಗಭೂಷಣ್ ಮತ್ತು ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ಚಿತ್ರರಂಗದ ಗಣ್ಯರು ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಟ್ರೈಲರ್ ಇವೆಂಟ್‌ ಬಗ್ಗೆ ಮಾತಾಡಿದ್ದಾರೆ. "ಸತೀಶ್ ಸಿನಿಮಾದ ಟ್ರೈಲರ್, ಹಾಡು ಯಾವುದೂ ಕಾಣಿಸಲಿಲ್ಲ. ನಿನ್ನ ಕಣ್ಣಲ್ಲಿ ನೀರು ಕಾಣಿಸಿತು. ಅದು ಹೊರಗಡೆ ಬರಲಿಲ್ಲ. ನೀನು ಅಲ್ಲೇ ಅರ್ಧ ಗೆದ್ದಾಯ್ತು. ಗಂಡಸು ಕಣ್ಣೀರು ಹಾಕಬಾರದು.‌ ಒಳಗೆ ಇಟ್ಟುಕೊಳ್ಳಬೇಕು. ಸಿನಿಮಾ ಮೇಲೆ ಪ್ರೀತಿ, ಆಸೆ, ಕನಸು ಇದೆ ಅನ್ನೋದು ನಿನ್ನ ಮಾತು, ನಿನ್ನ ಸ್ನೇಹಿತರು ಹೇಳ್ತಾರೆ. ನಿನ್ನ ಕನಸು, ಆಸೆ ನಿಜ ಆಗಲಿ. ಹೆಣ್ಮಕ್ಕಳಿಗೆ ಡೆಲಿವರಿ ನೋವು ಗೊತ್ತು. ಆದರೆ ಪ್ರತಿ ಸಿನಿಮಾ ಮಾಡುವಾಗ ಆಗುವುದು ಡೆಲಿವರಿ ನೋವೇ. ಆ ಆಪರೇಷನ್ ಮಾಡುವುದು ಪ್ರೇಕ್ಷಕರು. ‌ ಮೊದಲು ಆಪರೇಷನ್ ಮಾಡಿ.‌ ಮೊದಲು ಬದುಕಿಸಲು ಪ್ರಯತ್ನಿಸಿ." ಎಂದು ಕ್ರೇಜಿಸ್ಟಾರ್ ಹೇಳಿದ್ದಾರೆ.

ಇದೇ ವೇಳೆ ವಿಮರ್ಶೆ ಮಾಡುವ ಬಗ್ಗೆನೂ ಕಿಡಿಕಾರಿದ್ದರು "ಮೊದಲು ಸಿನಿಮಾ ನೋಡಿ. ಪ್ರೇಕ್ಷಕರ ಆಗಿ ಸಿನಿಮಾಗೆ ಹೋಗಿ ನೋಡಿ. ವಿಮರ್ಶೆ ಮಾಡಲು ಹೋಗಬೇಡಿ. ಸಿನಿಮಾದವರು ಲೈಕ್‌ಗೆ ಸಾಯುವುದನ್ನು ಬಿಡಿ. ಪ್ರೇಕ್ಷಕರನ್ನು ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಬಿಡಿ. ಎರಡೂವರೆ ಗಂಟೆ ಅವರನ್ನು ಮೈಮರೆಸಲು ಬಿಡಿ. ಚೆನ್ನಾಗಿ ಮಾಡುವುದು ಸಿನಿಮಾದವರ ಕೆಲಸ. ಒಬ್ಬನಿಗೆ ನೂರು ರೂಪಾಯಿ ಕೊಟ್ಟು ಸಿನಿಮಾ ನೋಡಿ. ಒಂದಷ್ಟು ಸಿನಿಮಾ ಗೆಲ್ಲಿಸಿ" ಎಂದು ಪ್ರೇಕ್ಷಕರಿಗೆ ಸಲಹೆ ನೀಡಿದರು.

ಇದೇ ವೇಳೆ ಸತೀಶ್ ನೀನಾಸಂ ಭಾವುಕರಾಗಿ ಮಾತಾಡಿದ್ದಾರೆ. "ರವಿಚಂದ್ರನ್ ನಮಗೆ ತಂದೆ ಸಮನ. ವಿಜಿ ಸರ್ ಒಂದು ಕಾಲ್‌ಗೆ ಬಂದ್ರು. ಯೋಗಿ ನನ್ನ ಗೆಳೆಯ. ವಸಿಷ್ಠ ಹಾರ್ಟ್ಲಿ ಮಾತನಾಡುವ ಗೆಳೆಯ. ನಾಗಭೂಷಣ್, ದಿಗ್ಗಿ, ಕೆಆರ್ ಪೇಟೆ ಎಲ್ಲರೂ ನನಗೆ ಸಪೋರ್ಟ್ ಮಾಡಲು ಬಂದಿರುವುದಕ್ಕೆ ಧನ್ಯವಾದ. ನಮ್ಮ ದಿ ರೈಸ್ ಆಫ್ ಅಶೋಕ ಸಿನಿಮಾವನ್ನು ಇದೇ ತಿಂಗಳ 27 ರಂದು ಪ್ರೇಕ್ಷಕರ ಮುಂದೆ ಇಡುತ್ತಿದ್ದೇವೆ." ಎಂದು ಸತೀಶ್ ಹೇಳಿದ್ದಾರೆ.

ಹಾಗೇ ಸಿನಿಮಾದ ನಾಯಕಿ ಬಗ್ಗೆನೂ ಮಾತಾಡಿದ್ದಾರೆ "ಸಪ್ತಮಿ ನನ್ನ ರೀತಿ ಚಿತ್ರದ ಹೀರೋ. ತೆಲುಗು, ತಮಿಳು ಮಾಡ್ತೀನಿ ಎಂದು ಹೇಳಿಕೊಂಡು ಬರ್ತಿದ್ದೆ. ಎಲ್ಲರೂ ಇವನಿಗೆ ಕೆಜಿಎಫ್, ಕಾಂತಾರ ಹುಚ್ಚು ಹಿಡಿದಿದೆ ಎಂದು ಮಾತನಾಡಿಕೊಂಡರು. ನನಗೆ ಕೆಜಿಎಫ್, ಕಾಂತಾರ ಹುಚ್ಚು ಹಿಡಿದಿಲ್ಲ. ನನ್ನ ಸಿನಿಮಾದ ಹುಚ್ಚು ಅದು.‌ ನಮ್ಮ ಸಿನಿಮಾವನ್ನು ಅವರು ನೋಡಲಿ. ಮೊದಲು ಸಿನಿಮಾ ತೋರಿಸಿದೆ. ಸಿನಿಮಾ ಸಖತ್ ಆಗಿ ಇದೆ ಎಂದು ತೆಲುಗು, ತಮಿಳಿನಲ್ಲಿ 200 ಥಿಯೇಟರ್‌ನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಜಾಸ್ತಿ ಮಾತಾನಾಡಲ್ಲ. ಇದೇ ತಿಂಗಳ 27ಕ್ಕೆ ದಿ ರೈಸ್ ಆಫ್ ಅಶೋಕ ತೆರೆಗೆ ಬರ್ತಿದೆ" ಎಂದು ಹೇಳಿದ್ದಾರೆ.

'ದಿ ರೈಸ್ ಆಫ್ ಅಶೋಕ' ಸಿನಿಮಾದಲ್ಲಿ ಸತೀಶ್ ನೀನಾಸಂ ಜೊತೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ, ಜಗಪ್ಪ ನಟಿಸಿದ್ದಾರೆ. ಈ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

More from Filmibeat

English summary
Sathish Ninasam and Sapthami Gowda movie Rise Of Ashoka Trailer is trending.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X