ನಿರ್ದೇಶಕರ ನಿಧನದ ಬಳಿಕ ರೈಸ್ ಆದ 'ಅಶೋಕ'; ನೀನಾಸಂ ಸತೀಶ್, ಸಪ್ತಮಿ ಗೌಡ ಸಿನಿಮಾ ರಿಲೀಸ್ ಯಾವಾಗ?
ಆರಂಭದಲ್ಲಿ 'ಅಶೋಕ ಬ್ಲೇಡ್' ಎಂಬ ಹೆಸರಿನಿಂದ ಶುರುವಾಗಿದ್ದ ಸಿನಿಮಾ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದೇ ಹೆಚ್ಚು. ನೀನಾಸಂ ಸತೀಶ್ ಅಭಿನಯದ ಈ ಸಿನಿಮಾ ಒಂದಷ್ಟು ದಿನ ಚಿಕ್ಕ ಪುಟ್ಟ ಸಮಸ್ಯೆಗಳಿಂದ ನಿಂತೇ ಹೋಗಿತ್ತು. ಇದೇ ವೇಳೆ ಈ ಸಿನಿಮಾದ ನಿರ್ದೇಶಕ ವಿನೋದ್ ದೊಂಡಾಲೆ ವೈಯಕ್ತಿಕ ಕಾರಣದಿಂದ ದುಡಿಕಿನ ನಿರ್ಧಾರ ತೆಗೆದುಕೊಂಡು ಜೀವವನ್ನೇ ಕಳೆದುಕೊಂಡಿದ್ದರು. ಇಲ್ಲಿಗೆ ಸಿನಿಮಾ ನಿಂತೇ ಹೋಯಿತು ಎಂದು ಭಾವಿಸಲಾಗಿತ್ತು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೀನಾಸಂ ಸತೀಶ್ ಮುಂದೆ ಬಂತು ಈ 'ಅಶೋಕ ಬ್ಲೇಡ್' ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದರು. ಆರಂಭದಿಂದಲೂ ಹಲವು ವಿಘ್ನಗಳನ್ನು ಎದುರಿಸಿದ್ದ 'ಅಶೋಕ ಬ್ಲೇಡ್' ಟೈಟಲ್ ಅನ್ನು ಬದಲಾಯಿಸಿ 'ದಿ ರೈಸ್ ಆಫ್ ಅಶೋಕ' ಎಂದು ಹೊಸ ಟೈಟಲ್ ಅನ್ನು ಬದಲಾವಣೆ ಮಾಡಲಾಯಿತು. ಮತ್ತೆ ಅದೇ ಜೋಷ್‌ನಲ್ಲಿ ಈ ಸಿನಿಮಾವನ್ನು ಆರಂಭ ಮಾಡಲಾಯಿತು.

ನೀನಾಸಂ ಸತೀಶ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾಗೆ 'ಕಾಂತಾರ' ಬೆಡಗಿ ಸಪ್ತಮಿ ಗೌಡ ಹೊಸದಾಗಿ ಸೇರ್ಪಡೆಯಾದರು. ಈ ಪ್ರಾಜೆಕ್ಟ್ ಈಗ ಯಶಸ್ವಿಯಾಗಿ ಮುಗಿದಿದೆ. ಸಿನಿಮಾದ ಶೂಟಿಂಗ್ ಮುಗಿಸಿದ ಖುಷಿಯಲ್ಲಿ ನೀನಾಸಂ ಸತೀಶ್ ಹಾಗೂ ಅವರ ತಂಡವಿದೆ. ಇದು ಅಭಿನಯ ಚತುರ ನೀನಾಸಂ ಸತೀಶ್ ಅವರ ಮೋಸ್ಟ್ ಎಕ್ಸ್‌ಪೆನ್ಸೀವ್ ಸಿನಿಮಾ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಿನಿಮಾದಲ್ಲಿ ಇಲ್ಲಿವರೆಗೂ ಏನೇನಾಗಿದೆ? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಈಗಾಗಲೇ ನೀನಾಸಂ ಸತೀಶ್ ಹಾಗೂ ಸಪ್ತಮಿ ಗೌಡ ಕಾಂಬಿನೇಷನ್ ಸಿನಿಮಾ 'ದಿ ರೈಸ್ ಆಫ್ ಅಶೋಕ' ಟೈಟಲ್ ಹಾಗೂ ಪೋಸ್ಟರ್‌ಗಳು ಸದ್ದು ಮಾಡುತ್ತಿವೆ. ಸಿನಿಮಾ ಬಗ್ಗೆ ಸತೀಶ್ ಹಾಗೂ ಸಪ್ತಮಿ ಗೌಡ ಇಬ್ಬರೂ ಕುತೂಹಲವನ್ನು ಹುಟ್ಟಿಸಿದ್ದಾರೆ. ಈ ಸಿನಿಮಾ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭ ಆಗಿವೆ.
'ದಿ ರೈಸ್ ಆಫ್ ಅಶೋಕ' ಸಿನಿಮಾ 70ರ ದಶಕದಲ್ಲಿ ನಡೆಯುವ ಕಥೆ. ಆ ಸಮಯದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಅವನ ಸಂಘರ್ಷದ ಕುರಿತು ಕಥೆ. ಆ ಸಿನಿಮಾದಲ್ಲಿ ನೀನಾಸಂ ಸತೀಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಪ್ತಮಿ ಗೌಡ ಕೂಡ ಮತ್ತೆ ರಗಡ್ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷ. ಇವರಿಬ್ಬರದ್ದು ಇದು ಮೊದಲ ಕಾಂಬಿನೇಷನ್. ಹೀಗಾಗಿ ಈ ಕೆಮಿಸ್ಟ್ರಿಯನ್ನು ತೆರೆಮೇಲೆ ನೋಡುವುದಕ್ಕೆ ಪ್ರೇಕ್ಷಕರು ಕಾತುರದಿಂದ ಕಾದು ಕೂತಿದ್ದಾರೆ.

ಶ್ರೀರಂಗಪಟ್ಟಣ, ನಂಜನಗೂಡು, ಗುಂಡ್ಲುಪೇಟೆ ಹಾಗೂ ಬೆಂಗಳೂರು ಸುತ್ತಮುತ್ತ ಈ ಸಿನಿಮಾದ ಶೂಟಿಂಗ್ ನಡೆದಿದೆ. 'ದಿ ರೈಸ್ ಆಫ್ ಅಶೋಕ' ಸಿನಿಮಾದಲ್ಲಿ ಕ್ರಾಂತಿಕಾರಿ ಯುವಕನಾಗಿ ಹೇಗೆಲ್ಲ ಅಬ್ಬರಿಸುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿಲ್ಲ. ಈ ಸಿನಿಮಾದಲ್ಲಿ ಸತೀಶ್ ಹಾಗೂ ಸಪ್ತಮಿ ಗೌಡ ಜೊತೆ ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರಿಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ ಅಭಿನಯಿಸಿದ್ದಾರೆ.
ಈಗಾಗಲೇ 'ದಿ ರೈಸ್ ಆಫ್ ಅಶೋಕ' ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ. ಮಚ್ಚು ಹಿಡಿದು ತುಂಬ ರಗಡ್ ಲುಕ್ನಲ್ಲಿ ನೀನಾಸಂ ಸತೀಶ್ ಅವರು ಕಾಣಿಸಿಕೊಂಡಿದ್ದಾರೆ. ಅವರ ಸಿನಿಕರಿಯರನ ಅತಿದೊಡ್ಡ ಬಜೆಟ್ ಸಿನಿಮಾ ಆಗಿದ್ದು, ಅವರ ವೃತ್ತಿ ಬದುಕಿಗೆ ಹೊಸ ತಿರುವು ಸಿಗಲಿದೆ ಎಂದು ಹೇಳಲಾಗಿದೆ. ಈ ಸಿನಿಮಾವನ್ನು ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲೂ ರಿಲೀಸ್ ಮಾಡಲಾಗುತ್ತೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ವರ್ಧನ್ ನರಹರಿ, ಜೈಷ್ಣವಿ ಹಾಗೂ ನೀನಾಸಂ ಸತೀಶ್ ನಿರ್ಮಾಣ ಮಾಡಿದ್ದಾರೆ. ರಿಲೀಸ್ ಬಗ್ಗೆ ಇನ್ನೂ ಮಾಹಿತಿ ಹಂಚಿಕೊಳ್ಳಬೇಕಿದೆ.


Click it and Unblock the Notifications











