'ಮ್ಯಾಟ್ನಿ' ಡಬ್ಬಿಂಗ್ ಮುಗಿಸಿದ ನೀನಾಸಂ ಸತೀಶ್: ಮುಂದೇನು?

ರಾಜ್ಯ ವಿಧಾನ ಸಭೆ ಚುನಾವಣೆ ಮುಗಿದಿದೆ. ಎಲ್ಲಾ ಖಾತೆ ಹಂಚಿಕೆ, ಪ್ರಮಾಣ ವಚನ ಅಂತ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ಐಪಿಎಲ್ ಕೊನೆಯ ಹಂತಕ್ಕೆ ಬಂದು ನಿಂತಿದೆ. ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಚಟುವಟಿಕೆಗಳು ನಿಧಾನವಾಗಿ ಆರಂಭ ಆಗಿವೆ.

ಇಷ್ಟು ದಿನ ಸೈಲೆಂಟ್ ಆಗಿದ್ದ ನೀನಾಸಂ ಸತೀಶ್ ಈಗ ಫುಲ್ ಆಕ್ಟಿವ್ ಆಗಿದ್ದಾರೆ. ತಮ್ಮ ಬಹುನಿರೀಕ್ಷಿತ ಸಿನಿಮಾ 'ಮ್ಯಾಟ್ನಿ' ರಿಲೀಸ್ ಮಾಡುವ ತವಕದಲ್ಲಿದ್ದಾರೆ. ಹೀಗಾಗಿ ಬಾಕಿ ಉಳಿದ ಕೆಲಸವನ್ನು ಚುರುಕಾಗಿ ಮುಗಿಸುತ್ತಿದ್ದಾರೆ.

Sathish Ninasam, Rachita Ram, Aditi Prabhudeva Movie Matinee dubbing finished

'ಮ್ಯಾಟ್ನಿ' ಸಿನಿಮಾವನ್ನು ಇದೂವರೆಗೂ ಸದ್ದಿಲ್ಲದೆ ಶೂಟಿಂಗ್ ಮಾಡಿತ್ತು. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಮತ್ತೆ ಜೋಡಿಯಾಗಿ ನಟಿಸಿರುವುದರಿಂದ ನಿರೀಕ್ಷೆಗಳು ಗಗನಕ್ಕೇರಿವೆ. ಈ ಹಿಟ್ ಕಾಂಬಿನೇಷನ್ ಸಿನಿಮಾವನ್ನು ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ಕಾರಣಕ್ಕೆ 'ಮ್ಯಾಟ್ನಿ' ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದೆ.

'ಮಾಟ್ನಿ' ಡಬ್ಬಿಂಗ್ ಮುಗಿಸಿದ ನೀನಾಸಂ ಸತೀಶ್

ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಐದು ವರ್ಷಗಳ ಬಳಿಕ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರೇ ನಟಿಸಿದ್ದ 'ಅಯೋಗ್ಯ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್‌ ಹಿಟ್ ಅಂತ ಸಾಬೀತಾಗಿತ್ತು. ಈಗ 'ಮ್ಯಾಟ್ನಿ'ಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

Sathish Ninasam, Rachita Ram, Aditi Prabhudeva Movie Matinee dubbing finished

'ಮಾಟ್ನಿ' ಸಿನಿಮಾ ಮೇಲೆ ನೀನಾಸಂ ಸತೀಶ್ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಸಿನಿಪ್ರಿಯರಿಗೆ ಇಷ್ಟ ಆಗುತ್ತೆ ಅನ್ನೋ ಅಚಲ ನಂಬಿಕೆಯಲ್ಲಿದ್ದಾರೆ. ಸದ್ಯ ನೀನಾಸಂ ಸತೀಶ್ ಈ ಸಿನಿಮಾದ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ.

'ಮ್ಯಾಟ್ನಿ' ತಂಡದಲ್ಲಿ ಅದಿತಿ ಪ್ರಭುದೇವ

'ಮ್ಯಾಟ್ನಿ' ರೊಮ್ಯಾಂಟಿಕ್‌ನಲ್ಲಿ ಕೇವಲ ನೀನಾಸಂ ಸತೀಶ್, ರಚಿತಾ ಅಷ್ಟೇ ಅಲ್ಲ. ಇವರೊಂದಿಗೆ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ನಟಿ ಅದಿತಿ ಪ್ರಭುದೇವ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ನಡುವೆ ರೊಮ್ಯಾಂಟಿಕ್ ಸನ್ನಿವೇಶಗಳು ಇವೆ. ಹಿಮದ ಬ್ಯಾಕ್‌ಗ್ರೌಂಡ್‌ನಲ್ಲಿ ಸಿನಿಮಾ ಶೂಟಿಂಗ್ ಕೂಡ ನಡೆದಿದೆ. ಇತ್ತೀಚೆಗೆ ಪ್ರೇಮಿಗಳ ದಿನದಂದು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸಿಂಗ್ ಟೀಸರ್ ರಿಲೀಸ್ ಮಾಡಿ ಅಚ್ಚರಿ ಮೂಡಿದ್ದರು.

ರೊಮ್ಯಾಂಟಿಕ್ ಲವ್ ಸ್ಟೋರಿ

'ಮ್ಯಾಟ್ನಿ' ಸಿನಿಮಾವನ್ನು ಮನೋಹರ್ ಕಾಂಪಲಿ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ ಕೂಡ ಹೌದು. ಪಕ್ಕಾ ರೊಮ್ಯಾಂಟಿಕ್ ಸಿನಿಮಾ ಆಗಿರೋ ನೀನಾಸಂ ಸತೀಶ್ ಶ್ರೀಮಂತ ಮನೆತನದ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ವರದಿಯಾಗಿದೆ.

ಸತೀಶ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿರೋದಷ್ಟೇ. ಇನ್ನುಳಿದಂತೆ ಸಿನಿಮಾದ ಸೀಕ್ರೆಟ್ ಅನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಅಯೋಗ್ಯ ಕಾಂಬಿನೇಷನ್ ಈ ಸಿನಿಮಾದಲ್ಲಿ ನಟಿಸಿರೋದ್ರಿಂದ ಈ ಸಿನಿಮಾ ಬಗ್ಗೆ ಸಹಜವಾಗಿಯೇ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ಡಬ್ಬಿಂಗ್ ಮುಗಿದಿದ್ದು, ಸಿನಿಮಾ ಬಿಡುಗಡೆಗೆ ತಯಾರಿ ನಡೆದಿದೆ.

More from Filmibeat

English summary
Sathish Ninasam, Rachita Ram, Aditi Prabhudeva Movie Matinee dubbing finished, know more.'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X