ಮನಾಲಿಯಲ್ಲಿ 'ಮ್ಯಾಟ್ನಿ': ಹಿಮದ ನಡುವೆ ನೀನಾಸಂ ಸತೀಶ್,ಅದಿತಿ ರೊಮ್ಯಾಂಟಿಕ್ ಸಾಂಗ್
ಸುಮಾರು ಐದು ವರ್ಷಗಳ ಬಳಿಕ ಮತ್ತೆ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಕಾಂಬಿನೇಷನ್‌ನಲ್ಲೊಂದು ಸಿನಿಮಾ ಬರ್ತಿದೆ. ಅದುವೇ 'ಮ್ಯಾಟ್ನಿ'. ಸತೀಶ್, ರಚಿತಾ ಜೊತೆ ಮತ್ತೊಬ್ಬ ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಕೂಡ ಕಾಣಿಸಿಕೊಂಡಿದ್ದಾರೆ.
'ಮ್ಯಾಟ್ನಿ' ಇದೂವರೆಗೂ ಸದ್ದಿಲ್ಲದೆ ಶೂಟಿಂಗ್ ಮಾಡುತ್ತಿದೆ. ಸದ್ಯ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ರೊಮ್ಯಾಂಟಿಕ್ ಸ್ಪಾಟ್ ಮನಾಲಿಗೆ ಹೋಗಿ ಬಂದಿದೆ.ಇಲ್ಲೊಂದು ರೊಮ್ಯಾಂಟಿಕ್ ಸಾಂಗ್ ಶೂಟ್ ಕೂಡ ಆಗಿದೆ.
ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ನಡುವಿನ ರೊಮ್ಯಾಂಟಿಕ್ ಸಾಂಗ್ ಇದಾಗಿದ್ದು, ಹಿಮದ ಬ್ಯಾಕ್‌ಗ್ರೌಂಡ್‌ನಲ್ಲಿ ಸಿನಿಮಾ ಶೂಟಿಂಗ್ ನಡೆದಿದೆ. ಈ ಬಗ್ಗೆ ನೀನಾಸಂ ಸತೀಶ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮನಾಲಿಯಲ್ಲಿ ನಡೆದ ಶೂಟಿಂಗ್ ಹೇಗಿತ್ತು? ಸಿನಿಮಾ ಶೂಟಿಂಗ್ ಎಲ್ಲಿಗೆ ಬಂದಿದೆ? ಹೀಗೆ ಒಂದು ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.

ಇದೊಂದು ರೊಮ್ಯಾಂಟಿಕ್ ಸಾಂಗ್
" ಈ ಹಾಡು ನನ್ನ ಮತ್ತು ಅದಿತಿ ನಡುವೆ ಬರುವ ರೊಮ್ಯಾಂಟಿಕ್ ಹಾಡು. ಈ ಹಾಡನ್ನು ಸಂತೋಷ್ ಕೊರಿಯೋಗ್ರಫಿ ಮಾಡಿದ್ದಾರೆ. ಮನೋಹರ್ ನಿರ್ದೇಶನ ಮಾಡಿದ್ದಾರೆ. ಈ ಹಾಡು ಬಿಟ್ಟರೆ, ಇನ್ನೊಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ನಾನು, ನಾಗಭೂಷಣ್, ಪೂರ್ಣ, ದಿಗಂತ್ ಹಾಗೂ ಶಿವರಾಜ್ ಕೆ ಆರ್ ಪೇಟೆ ಸೇರಿ ಐದು ಜನರ ಸಾಂಗ್ ಇದೆ." ಎಂದು ನೀನಾಸಂ ಸತೀಶ್ ಮಾಹಿತಿ ಹಂಚಿಕೊಂಡಿದ್ದಾರೆ.

–5 ಡಿಗ್ರಿಯಲ್ಲಿ ಮ್ಯಾಟ್ನಿ ರೊಮ್ಯಾಂಟಿಕ್ ಶೂಟ್
"ಈ ಜಾಗಕ್ಕೆ ಎಲ್ಲರನ್ನೂ ಬಿಡೋದಿಲ್ಲ. ಯಾಕಂದ್ರೆ, ಆಕ್ಸಿಜನ್ ಕಡಿಮೆ ಇರುವಂತಹ ಜಾಗ. ವಾತಾವರಣ ಕೂಡ -5 ಡಿಗ್ರಿ ಇತ್ತು. ನಾವು ಹೋದಾಗ ಸ್ನೋಫಾಲ್ ಆಗುತ್ತಿತ್ತು. ಅದು ಕೂಡ ತುಂಬಾನೇ ಚೆನ್ನಾಗಿ ಸಿಕ್ಕಿತು.ಅದು ಸಿಗೋದೇ ಕಷ್ಟ ಅಂತೆ ನಾವು ಲಕ್ಕಿ. ನಮಗೆ ಸಿಕ್ಕಿತು. ಒಂಥರಾ ಇಂಗ್ಲಿಷ್ ಸಿನಿಮಾ ರೇಂಜಿಗೆ ಎಲ್ಲಾ ಫ್ರೇಮ್‌ಗಳೂ ಸಿಗುತ್ತಿವೆ. ಬಹಳ ಬ್ಯೂಟಿಫುಲ್ ಆಗಿ ಬಂದಿದೆ ರೊಮ್ಯಾಂಟಿಕ್ ಸಾಂಗ್.ನನಗೆ ತುಂಬಾ ಖುಷಿಯಾಗಿದೆ. ಯಾವ ಸ್ವಿಡ್ಜರ್‌ಲ್ಯಾಂಡ್? ಇಷ್ಟೊಂದು ಅದ್ಭುತವಾಗಿದೆ ಅಂತ ಅನಿಸಿಬಿಡ್ತು." ಎನ್ನುತ್ತಾರೆ ನಟ ನೀನಾಸಂ ಸತೀಶ್.

ಪೂರ್ಣ ಚಂದ್ರ ತೇಜಸ್ವಿ ಮ್ಯೂಸಿಕ್
" ಮ್ಯೂಸಿಕ್ ಪೂರ್ಣಚಂದ್ರ ತೇಜಸ್ವಿ ಮಾಡುತ್ತಿದ್ದಾರೆ. ಬಾಕಿ ಎಲ್ಲಾ ಕೆಲಸಗಳೂ ನಡೆಯುತ್ತಿದೆ. ಈ ಹಾಡನ್ನು ಕೀರ್ತನ್ ಪೂಜಾರಿ ಅನ್ನೋರು ಶೂಟ್ ಮಾಡಿದ್ದಾರೆ. ಬೇರೆ ಎವೆಲ್‌ಗೆ ಸಿನಿಮಾ ಮೂಡಿ ಬರುತ್ತಿದೆ. ಗ್ರ್ಯಾಂಡ್ ಆಗಿ, ಹೈ ಬಜೆಟ್‌ನಲ್ಲಿ ಮೂಡಿಬರುತ್ತಿದೆ. ಇದು ನನ್ನ ಹಾಗೂ ಅದಿತಿ ಹಾಡು. ರಚಿತಾ ಅವರದ್ದು ಹಾಗೂ ನನ್ನದು ಶೂಟಿಂಗ್ ಆಗಿದೆ. ಸೆಟ್ ಸಾಂಗ್ ಅದು, ಬಿಗ್ ಬಜೆಟ್ ಸಾಂಗ್. ನನ್ನ ಅದಿತಿ ಸಾಂಗ್ ಮುಗಿದಿದೆ. ಇನ್ನೊಂದು ಸಾಂಗ್ ಮುಗಿದರೆ, ಕಂಪ್ಲೀಟ್ ಆಗಿ ಶೂಟಿಂಗ್ ಮುಗಿಯುತ್ತೆ." ಎಂದು ಮ್ಯಾಟ್ನಿ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

'ಅಯೋಗ್ಯ' ಕಾಂಬಿನೇಷನ್
ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಕಾಂಬಿನೇಷನ್ ಸಿನಿಮಾ 'ಅಯೋಗ್ಯ' ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆ ಸಿನಿಮಾ ಬಳಿಕ ಮತ್ತೆ 'ಮ್ಯಾಟ್ನಿ'ಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಜೊತೆಗೆ ಅದಿತಿ ಪ್ರಭುದೇವ ಕೂಡ ಈ ತಂಡ ಸೇರಿಕೊಂಡಿದ್ದು, ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.


Click it and Unblock the Notifications











