Ayogya 2: ಮತ್ತೆ ಬಂದ 'ಅಯೋಗ್ಯ'ನ ಬಿಡುಗಡೆ ಮುಹೂರ್ತ ಫಿಕ್ಸ್; ಸತೀಶ್ ನೀನಾಸಂ, ರಚಿತಾ ರಾಮ್ ಮಿಂಚಿಂಗ್

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಸತೀಶ್ ನೀನಾಸಂ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಅವರ ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಅಯೋಗ್ಯ 2' ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ಈ ಹಿಂದೆ ಈ ಜೋಡಿ ನಟಿಸಿದ 'ಅಯೋಗ್ಯ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಈ ಕಾರಣಕ್ಕೆ 'ಅಯೋಗ್ಯ 2' ಮೇಲೆ ಸಹಜವಾಗಿಯೇ ನಿರೀಕ್ಷೆ ಹುಟ್ಟಿಕೊಂಡಿದೆ.

'ಅಯೋಗ್ಯ' ಹಾಡುಗಳಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬಂದಿತ್ತು. ಈಗ 'ಅಯೋಗ್ಯ 2' ಮೇಲೂ ಕೂಡ ಅದೇ ನಿರೀಕ್ಷೆಯಿದೆ. ಅರ್ಜುನ್ ಜನ್ಯ ಈ ಹಾಕಿರೋ ಟ್ಯೂನ್‌ಗಳನ್ನು ಕೇಳುವುದಕ್ಕೆ ಸಿನಿಪ್ರಿಯರ ತುದಿಗಾಲಲ್ಲಿ ನಿಂತಿದ್ದರು. ನಿರೀಕ್ಷೆ ಮಾಡಿದ್ದಂತೆ ಸತೀಶ್ ಹುಟ್ಟುಹಬ್ಬಕ್ಕೆ 'ಅಯೋಗ್ಯ 2' ಸಿನಿಮಾದ ರೊಮ್ಯಾಂಟಿಕ್ ರಿಲೀಸ್ ಆಗಿ ಭರವಸೆಯನ್ನು ಮೂಡಿಸಿದೆ.

Sathish Ninasam Rachita Ram movie Ayogya 2 releasing on August 14th

ಸತೀಶ್‌ ನಿನಾಸಂ ಹಾಗೂ ರಚಿತಾ ರಾಮ್‌ ಅಭಿನಯದ 'ಅಯೋಗ್ಯ 2' ಸಿನಿಮಾದ ಮೊದಲ ರೊಮ್ಯಾಂಟಿಕ್‌ ಹಾಡು ಬಿಡುಗಡೆ ಆಗಿದೆ..ನಟ ಸತೀಶ್‌ ಹುಟ್ಟುಹಬ್ಬದಂದೆ ಹಾಡು ಬಿಡುಗಡೆ ಆಗಿರೋದು ವಿಶೇಷ..ಈಗಾಗಲೇ ಹಿಟ್‌ ಜೋಡಿ ಎನ್ನಿಸಿಕೊಂಡಿರೋ ರಚಿತಾ ಹಾಗೂ ಅಯೋಗ್ಯ ಇಬ್ಬರು ಒಟ್ಟಿಗೆ ಮತ್ತೆ ಅಯೋಗ್ಯ೨ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ...ಅಯೋಗ್ಯ೨ ಸಿನಿಮಾ ರಿಲೀಸ್‌ ಗೆ ರೆಡಿಯಾಗಿದ್ದು ಚಿತ್ರತಂಡ ಮೊದಲಿಗೆ ರೊಮ್ಯಾಂಟಿಕ್‌ ಹಾಡನ್ನ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಶುರು ಮಾಡಿದೆ.

ಇಂದು ಅಯೋಗ್ಯ೨ ಸಿನಿಮಾದ ಪುಟ್‌ ಲಕ್ಷ್ಮೀ ಹಾಡನ್ನ ವಿಶೇಷವಾಗಿ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಬಿಡುಗಡೆ ಮಾಡಿದ್ರು...ಹಾಡು ಬಿಡುಗಡೆ ಮಾಡಿ ಮಾತನಾಡಿದ ಅರ್ಜುನ್‌ ಜನ್ಯ ಈ ೨೨ ವರ್ಷದಲ್ಲಿ ಇದೇ ಮೊದಲ ಬಾರಿಗೆ ನಾನು ಹಾಡೋಂದನ್ನ ಗೆಸ್ಟ್‌ ಆಗಿ ಬಿಡುಗಡೆ ಮಾಡ್ತಿರೋದು ಎಂದರು..ಹಾಡು ಹಾಡಿರೋ ಪೃಥ್ವಿ ಭಟ್‌ ತುಂಬಾ ಚೆನ್ನಾಗಿ ಹಾಡಿದ್ದಾರೆ ಎಂಟು ವರ್ಷದ ಹಿಂದೆ ಅಯೋಗ್ಯ ಸಿನಿಮಾಗೆ ಹಾಡು ಕಂಪೋಸ್ ಮಾಡುವಾಗ ಹೇಗಿತ್ತು ಅನ್ನೋ ಹಳೆಯ ದಿನಗಳನ್ನ ನೆನಪು ಮಾಡಿಕೊಂಡರು..

ಇನ್ನು ಚಿತ್ರಕ್ಕೆ ಸಂಬಾಷಣೆ ಬರೆದಿರೋ ಮಾಸ್ತಿ ಮಾತನಾಡಿ ಅಯೋಗ್ಯ೨ ಸಿನಿಮಾದ ಡೈಲಾಗ್ಸ್‌ ತುಂಬಾ ಚೆನ್ನಾಗಿ ಮೂಡಿ ಬಂದಿದೆ..ಈ ತಂಡದ ಜೊತೆ ಕೆಲಸ ಮಾಡೋದೇ ಖುಷಿ ಎಂದರು. ಸಿನಿಮಾದಲ್ಲಿ ಅಭಿನಯಿಸಿರೋ ಶಿವರಾಜ್‌ ಕೆಆರ್‌ ಪೇಟೆ , ಮಂಜು ಪಾವಗಡ ಹಾಗೂ ಕಿರಣ್‌ ನಾಯ್ಕ್‌ ಅಯೋಗ್ಯ೨ ಸಿನಿಮಾ ಅವಕಾಶ ಸಿಕ್ಕಿದ್ದು ಖುಷಿ ಇದೇ ಹೆಚ್ಚು ಕಲಾವಿದರು ಇರೋದ್ರಿಂದ ಎಂಟರ್ಟೈನೆಮೆಂಟ್‌ ಕೂಡ ಹೆಚ್ಚಾಗಿರುತ್ತೆ ಅಂದ್ರು...

ಇನ್ನು ನಿರ್ದೇಶಕ ಮಹೇಶ್‌ ಕುಮಾರ್‌ ಮಾತನಾಡಿ ಇಡೀ ತಂಡದ ಸಹಕಾರದ ಬಗ್ಗೆ ಮಾತನಾಡಿದ್ರು.ಎಂಟು ವರ್ಷದ ನಂತರ ಬರ್ತಿದ್ದೀವಿ ಈ ಹಾಡು ನಿಮ್ಮೆಲ್ಲರಿಗೂ ಖುಷಿ ಕೊಡುತ್ತೆ.ಶೂಟ್‌ ಸಮಯದಲ್ಲಿ ನಡೆದ ಘಟನೆಗಳನ್ನ ಮೆಲುಕು ಹಾಕಿದ್ರು..ಅಯೋಗ್ಯ ಸಿನಿಮಾಗಿಂತಲೂ ಅಯೋಗ್ಯ ೨ ಚಿತ್ರದಲ್ಲಿ ಹೆಚ್ಚು ಎಂಟರ್ಟೈನ್ಮೆಂಟ್‌ ಇದೆ ಎಂದರು.

ಇನ್ನು ನಟ ಸತೀಶ್‌ ನಿನಾಸಂ ಹಾಗೂ ನಟಿ ರಚಿತಾ ರಾಮ್‌ ಇಬ್ಬರು ಒಟ್ಟಿಗೆ ವೇದಿಕೆಗೆ ಬಂದು ಹಾಡನ್ನ ಬರೆದಿರುವ ಚೇತನ್‌ ಕುಮಾರ್‌ ,ಹಾಡಿರೋ ಸಿದ್‌ ಶ್ರೀರಾಮ್‌ ಪೃಥ್ವಿ ಭಟ್‌ ಅವರಿಗೆ ಥ್ಯಾಂಕ್ಸ್‌ ಹೇಳಿದ್ರು. ಜೊತೆಯಲ್ಲಿ ನಟಿಸಿದಕ್ಕಾಗಿ ಇಬ್ಬರು ಪರಸ್ಪರ ಧನ್ಯವಾದ ತಿಳಿಸಿದ್ರು .ಅಯೋಗ್ಯ೨ ಸಿನಿಮಾವನ್ನ ಮುನೇಗೌಡರು ನಿರ್ಮಾಣ ಮಾಡುತ್ತಿದ್ದು ಅಯೋಗ್ಯ 2' ಚಿತ್ರದ ಆಡಿಯೋ ಹಕ್ಕನ್ನು ರೂ.2 ಕೋಟಿ ಕೊಟ್ಟು ಆನಂದ್‌ ಆಡಿಯೋ ಖರೀದಿಸಿದೆ .ಇನ್ನು ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಮಂಜು ಪಾವಗಡ ತಾರಾಗಣದಲ್ಲಿದ್ದಾರೆ. ಸಿನಿಮಾದ ಪ್ರಚಾರ ಕೆಲಸ ಶುರುವಾಗಿದ್ದು ಆಗಸ್ಟ್‌ ೧೪ ರಂದು ಸಿನಿಮಾ ಬಿಡುಗಡೆ ಆಗಲಿದೆ.

English summary
Sathish Ninasam, Rachita Ram movie Ayogya 2 releasing on August 14th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X