"ಶೆಟ್ರು ಗ್ಯಾಂಗ್ ವಾರಕ್ಕೆ 5 ರಿಂದ 10 ಪರ್ಸೆಂಟ್ ಬಡ್ಡಿ ತಿನ್ನೋರು"- ಮೈಕೋ ನಾಗರಾಜ್

ಒಂದು ಸಿನಿಮಾ ನಿರ್ಮಾಣ ಆಗುವುದಕ್ಕೆ ಮೊದಲು ನಿರ್ಮಾಪಕ ಬೇಕು. ಯಾರ ಹತ್ತಿರ ಅದೆಷ್ಟೇ ಉತ್ತಮವಾದ ಕಥೆ ಇದ್ದರೂ, ಅದನ್ನು ತೆರೆಮೇಲೆ ತರುವುದಕ್ಕೆ ನಿರ್ಮಾಪಕ ಬೇಕು. ಅವನು ಹಣ ಹಾಕಿದರೇ ಸಿನಿಮಾ ಟೇಕಾಫ್ ಆಗೋದು. ಕೆಲವೊಮ್ಮೆ ನಿರ್ಮಾಪಕ ಅಂದುಕೊಳ್ಳೋದೆ ಒಂದು, ಅದು ಆಗೋದು ಒಂದು. ತನ್ನ ಹಾಕಿದ ಬಜೆಟ್ ಎಲ್ಲವೂ ತಲೆ ಕೆಳಗಾಗುತ್ತೆ. ಸಾಲಾದ ಮೇಲೆ ಸಾಲ ಮಾಡಿ ಸಿನಿಮಾವನ್ನು ರಿಲೀಸ್ ಮಾಡುತ್ತಾನೆ. ಇಂತಹ ಸಂದರ್ಭಗಳಲ್ಲಿ ನಿರ್ಮಾಪಕ ಸಂಕಷ್ಟಕ್ಕೆ ಸಿಲುಕುತ್ತಾನೆ.

ಕೆಲವೊಮ್ಮೆ ಸಿನಿಮಾವನ್ನು ಕಂಪ್ಲೀಟ್ ಮಾಡಿದ್ದರೂ, ಅದನ್ನು ಥಿಯೇಟರ್‌ವರೆಗೂ ತೆಗೆದುಕೊಂಡು ಬರೋಕೆ ಆಗದೆ ಪರದಾಡುತ್ತಾನೆ. ಆ ವೇಳೆ ನಿರ್ಮಾಪಕರ ಕೈಗೆ ಸಿಗೋದು ಬಡ್ಡಿ ವ್ಯವಹಾರ ಮಾಡುವವರು. ಸಿನಿಮಾ ಮಂದಿ ಸಂಕಷ್ಟದಲ್ಲಿ ಇರುತ್ತಾರೆ ಅನ್ನೋದು ಗೊತ್ತೇ ಇರುತ್ತೆ. ಇಂತಹವರಿಗೆ ಹಣ ಕೊಟ್ಟು ಬಳಿಕ ಅವರಿಂದ 5 ಪಟ್ಟು ಹೆಚ್ಚು ಹಣ ಪೀಕುವ ಗ್ಯಾಂಗ್ ಎಲ್ಲಾ ಚಿತ್ರರಂಗದಲ್ಲಿ ಇರುತ್ತೆ. ಇಂತಹದ್ದೊಂದು ಗ್ಯಾಂಗ್ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ನಟ ಮೈಕೋ ನಾಗರಾಜ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

Senior actor and Financier Mico Nagaraj revealed about Shetty Gang in film industry

ಮೈಕೋ ನಾಗರಾಜ್ ಇತ್ತೀಚೆಗೆ ಸುದ್ದಿಮನೆ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ವೇಳೆ ಕನ್ನಡ ಚಿತ್ರರಂಗದಲ್ಲಿ ಇರುವ ಬಡ್ಡಿ ವ್ಯವಹಾರ ಮಾಡುವ ಗ್ಯಾಂಗ್ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ 5 ರಿಂದ 10 ಪರ್ಸೆಂಟ್ ಬಡ್ಡಿ ಹಣ ಕೊಟ್ಟು ಸುಲಿಗೆ ಮಾಡುವ ಶೆಟ್ಟಿ ಗ್ಯಾಂಗ್ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಿದ್ದರೆ, ಆ ಶೆಟ್ಟಿ ಗ್ಯಾಂಗ್ ಯಾವುದು?

ಸಿನಿಮಾ ಇಂಡಸ್ಟ್ರಿಯಲ್ಲಿರುವ ಕೆಲವು ಮನಸ್ಥಿತಿಗಳ ಬಗ್ಗೆ ಮೈಕೋ ನಾಗರಾಜ್ ಈ ಸಂದರ್ಶನದಲ್ಲಿ ಮಾತಾಡಿದ್ದರೆ. "ಕೆಲವರು ನೋಡುತ್ತಿರುತ್ತಾರೆ. ನಿಮ್ಮ ಜೇಬಿನಲ್ಲಿ ದುಡ್ಡಿ ಇದ್ದರೆ, ನಾನು ಆ ದುಡ್ಡಿನ ಬಗ್ಗೆ ಯೋಚನೆ ಮಾಡಿರಲ್ಲ. ನೀವೂ ಕೂಡ ಅಷ್ಟು ಯೋಚನೆ ಮಾಡಿರಲ್ಲ. ಅವನ ಹತ್ತಿರ ದುಡ್ಡಿದೆ ಅದನ್ನು ಹೇಗೆ ಆಚೆ ತೆಗಿಸಬೇಕು. ಅದನ್ನು ಹೇಗೆ ಖರ್ಚು ಮಾಡಿಸಬೇಕು ಅಂತ ನೋಡೋರು ತುಂಬಾ ಜನ ಇದ್ದಾರೆ. 100ಕ್ಕೆ 70 ಜನರು ಇದ್ದಾರೆ." ಎಂದು ಹೇಳಿದ್ದಾರೆ.

Also Read
ಅವತ್ತು ಆ ನಟ ನನ್ನೊಟ್ಟಿಗೆ ಒರಟಾಗಿ ನಡೆದುಕೊಂಡಿದ್ದ.. ಬಳಿಕ ಅವನ ಸಿನ್ಮಾ ನೋಡೊದು ಬಿಟ್ಟೆ; ಯಶ್
ಅವತ್ತು ಆ ನಟ ನನ್ನೊಟ್ಟಿಗೆ ಒರಟಾಗಿ ನಡೆದುಕೊಂಡಿದ್ದ.. ಬಳಿಕ ಅವನ ಸಿನ್ಮಾ ನೋಡೊದು ಬಿಟ್ಟೆ; ಯಶ್

ಇದೇ ಸಂದರ್ಶನದಲ್ಲಿ ತಾನು ಕೂಡ ನಿರ್ಮಾಪಕರಿಗೆ ಸಾಲ ಕೊಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಹೀಗೆ ಸಾಲಕೊಟ್ಟು ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. "ನಾನು ಕಷ್ಟದಲ್ಲಿರೋ ತುಂಬಾ ಜನಕ್ಕೆ ಸಾಲು ಕೊಡುತ್ತಿದ್ದೆ. ಹಾಗೇ ಸಾಲ ಕೊಡಿಸುತ್ತಿದ್ದೆ. ಸಾಲ ಕೊಡಿಸಿ ಸಿಕ್ಕಿಕೊಂಡಿದ್ದೇನೆ. ಸಾಲ ಕೊಟ್ಟು ಕಳೆದುಕೊಂಡಿದ್ದೇನೆ. ಅದು ಆ ದೇವರಿಗೆ ಗೊತ್ತು ಅಷ್ಟೇ." ಎಂದು ಒಪ್ಪಿಕೊಂಡಿದ್ದಾರೆ.

Senior actor and Financier Mico Nagaraj revealed about Shetty Gang in film industry

ಮೈಕೋ ನಾಗರಾಜ್ ಕನ್ನಡ ಚಿತ್ರರಂಗದಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಆದರೆ, ಅದು ನಿರ್ಮಾಪಕರಿಗೆ ಹೊರೆಯಾಗುತ್ತಿರಲಿಲ್ಲ. ತಿಂಗಳಿಗೆ ಎರಡರಿಂದ ಮೂರು ಪರ್ಸೆಂಟ್ ಬಡ್ಡಿಗೆ ಸಾಲುತ್ತಿದ್ದರಂತೆ. ಅದೇ ಶೆಟ್ಟಿ ಗ್ಯಾಂಗ್ ವಾರಕ್ಕೆ ಐದರಿಂದ ಹತ್ತು ಪರ್ಸೆಂಟ್‌ಗೆ ಬಡ್ಡಿ ಕೊಡುತ್ತಿತ್ತು ಎಂದಿದ್ದಾರೆ. "ಗಾಂಧಿನಗರದಲ್ಲಿ ಮೊದಲು ನಾನು ಬಡ್ಡಿಗೆ ಕೊಡುತ್ತಿದ್ದೆ. 2-3 ಪರ್ಸೆಂಟ್‌ಗೆ ಕೊಡುತ್ತಿದ್ದೆ. ತುಂಬಾ ಜನ ಫೈನಾನ್ಸ್ ಅವರು ನನ್ನ ಮೇಲೆ ಗಲಾಟೆ ಮಾಡಿದರು. ಅವರು ವಾರಕ್ಕೆ 5-10 ಪರ್ಸೆಂಟ್ ತೆಗೆದುಕೊಳ್ಳೋರು. ಆಗ ಎಲ್ಲರೂ ನಮ್ಮ ಕಡೆ ತಿರುಗಿದರು. ಅಶ್ವಥ್ ಅಂತಿದ್ದ, ಶೆಟ್ಟಿ ಅಂತಿದ್ದ. ತುಂಬಾ ಜನರು ಬಂದು ನಮ್ಮ ಮೇಲೆ ಗಲಾಟೆ ಮಾಡಿದರು. ನಮ್ಮ ಬಾಯಿಗೆ ಮಣ್ಣು ಹಾಕುತ್ತಿದ್ದೀಯಾ ಅಂತ ಹೇಳಿದ್ದರು" ಎಂದು ಆ ಗ್ಯಾಂಗ್ ಅನ್ನು ನೆನಪಿಸಿಕೊಂಡಿದ್ದಾರೆ.

ನಿರ್ಮಾಪಕರು ಈ ಬಡ್ಡಿ ವ್ಯವಹಾರದಲ್ಲಿ ಹೇಗೆ ಸಿಕ್ಕಿಕೊಳ್ಳುತ್ತಾರೆ ಅನ್ನೋದನ್ನು ವಿವರಿಸಿದ್ದಾರೆ. "ಆಗೆಲ್ಲ ಸಿನಿಮಾ ರಿಲೀಸ್‌ಗೂ ಮುಂಚೆ, ನಾಳೆ ಸಿನಿಮಾ ರಿಲೀಸ್.. ಪ್ರಿಂಟ್ ಹಾಕಿಸಬೇಕು. ಲ್ಯಾಬ್ ಹತ್ತಿರ ಈ ಗ್ಯಾಂಗ್ ಬರುತ್ತಿತ್ತು. ಶೆಟ್ರು ಗ್ಯಾಂಗ್. ಸೂಟ್‌ಕೇಸ್‌ನಲ್ಲಿ ದುಡ್ಡು ಇಟ್ಕೊಂಡು ಅಲ್ಲೇ ಓಡಾಡೋರು. ಕೊನೆಯಲ್ಲಿ ಲ್ಯಾಬ್ ಕ್ಲಿಯರೆನ್ಸ್ ಆಗಲಿಲ್ಲ. ಪ್ರಿಂಟ್ ಹಾಕುತ್ತಿರಲಿಲ್ಲ. ಫೈನಾನ್ಸ್ ಅವರು ಯಾರಾದರೂ ದುಡ್ಡು ತೆಗೆದುಕೊಂಡಿದ್ದಾರೆ ಅಂತ ಗೊತ್ತಾದರೆ ಲ್ಯಾಬ್‌ನವರು ಪ್ರಿಂಟ್ ಹಾಕುತ್ತಿರಲಿಲ್ಲ. ಪ್ರಡ್ಯೂಸರ್ ಏನು ಮಾಡಬೇಕು. ನಾಳೆ ಡೇಟ್ ಅನೌನ್ಸ್ ಮಾಡಿದ್ದಾರೆ. ಆಗ ಇಲ್ಲಿ ಬಂದಿರೋರ ಬಳಿಕ ವಾರಕ್ಕೆ ಇಷ್ಟು ಅಂತ ದುಡ್ಡು ತೆಗೆದುಕೊಳ್ಳೋರು. ನಾನು ನಮ್ಮ ಒಂದಿಬ್ಬರು ಫ್ರೆಂಡ್ಸ್ ಆ ರೂಲ್ಸ್ ಅನ್ನೇ ಬದಲಾಯಿಸಿಬಿಟ್ಟಿದ್ವಿ" ಎಂದು ಮೈಕೋ ನಾಗರಾಜ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

English summary
Senior actor and Financier Mico Nagaraj revealed about Shetty Gang in film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X