ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿ ಮದುವೆಗೆ ಮುಹೂರ್ತ ಫಿಕ್ಸ್; ಯಾವಾಗ ಮದುವೆ?
ದಕ್ಷಿಣ ಭಾರತದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ದಳಪತಿ ವಿಜಯ್ ಅಭಿನಯಿಸಿದ್ದ 'ಲಿಯೋ' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದರು. ಈ ಪಾತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೂವರೆಗೂ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಅರ್ಜುನ್ ಸರ್ಜಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಅರ್ಜುನ್ ಸರ್ಜಾ ಸಿನಿಮಾ ಜರ್ನಿಯ ಜೊತೆ ವೈಯಕ್ತಿಕ ಬದುಕಿನಲ್ಲೂ ಬ್ಯುಸಿಯಾಗಿದ್ದಾರೆ. 61 ವರ್ಷದ ನಟ ಅರ್ಜುನ್ ಸರ್ಜಾ ಸದ್ಯ ತಮ್ಮ ಮೊದಲನೇ ಮಗಳು ಐಶ್ವರ್ಯಾ ಮದುವೆ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷವಷ್ಟೇ ತಮಿಳಿನ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಜೊತೆ ನಿಶ್ಚಿತಾರ್ಥ ಮಾಡಿದ್ದರು.

ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಹಾಗೂ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಇಬ್ಬರೂ ಕಳೆದ ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯವನ್ನು ಮನೆಯವರಿಗೆ ತಿಳಿಸಿದ ಬಳಿಕ ಕಳೆದ ಅಕ್ಟೋಬರ್ 27ಕ್ಕೆ ಚೆನ್ನೈನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೇರಿದಂತೆ ಕುಟುಂಬಸ್ಥರು ಭಾಗವಹಿಸಿದ್ದರು.
ಅರ್ಜುನ್ ಸರ್ಜಾ ಹಾಗೂ ತಂಬಿ ರಾಮಯ್ಯ ಇಬ್ಬರೂ ತಮಿಳು ಚಿತ್ರರಂಗದ ಜನಪ್ರಿಯ ನಟರು. ಇಬ್ಬರಿಗೂ ಚಿತ್ರರಂಗದಲ್ಲಿ ಉತ್ತಮ ಹೆಸರು ಇದೆ. ಉಮಾಪತಿ ರಾಮಯ್ಯ ಕೂಡ ತಮಿಳಿನ ಯುವ ನಟ. ಇತ್ತ ಐಶ್ವರ್ಯಾ ಅರ್ಜುನ್ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಸಿನಿಮಾಗಳು ಕೈ ಹಿಡಿಯಲಿಲ್ಲ. ಕೆಲವು ದಿನ ಸೈಲೆಂಟ್ ಆಗಿದ್ದ ನಟಿ ಈಗ ಮದುವೆ ಆಗುವುದಕ್ಕೆ ಸಜ್ಜಾಗಿದ್ದಾರೆ.

ಸದ್ಯ ಐಶ್ವರ್ಯಾ ಅರ್ಜುನ್ ಹಾಗೂ ಉಮಾಪತಿ ರಾಮಯ್ಯ ಇಬ್ಬರ ಮದುವೆ ಡೇಟ್ ಫಿಕ್ಸ್ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಇಬ್ಬರ ಮದುವೆ ಚೆನ್ನೈನಲ್ಲೇ ನಡೆಯಲಿದ್ದು, ಜೂನ್ 10ರಂದು ಸಂಪ್ರದಾಯಬದ್ಧವಾಗಿ ಮದುವೆ ಮಾಡುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅರ್ಜುನ್ ಸರ್ಜಾ ಆಂಜನೇಯ ಸ್ವಾಮಿಯ ಭಕ್ತ. ಹೀಗಾಗಿ ಸಂಪ್ರದಾಯದಂತೆ ಮದುವೆ ಸಮಾರಂಭಗಳು ಜರುಗಲಿವೆ.
ಅರ್ಜುನ್ ಸರ್ಜಾ ಮಗಳ ಮದುವೆ ಸಂಭ್ರಮಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇವರೊಂದಿಗೆ ಉಮಾಪತಿ ರಾಮಯ್ಯ ಕುಟುಂಬ ಈ ಮದುವೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಮದುವೆ ಸಂಬಂಧಿಕರು ಹಾಗೂ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇವರ ಮದುವೆಯಲ್ಲಿ ತಮಿಳು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.


Click it and Unblock the Notifications











