ಹಿರಿಯ ನಟ ಬಿರಾದರ್‌ 500ನೇ ಸಿನಿಮಾ ತಂಡಕ್ಕೆ ಸಿಕ್ತು ಬಂಪರ್ ಗಿಫ್ಟ್

ಸ್ಯಾಂಡಲ್‌ವುಡ್ ಹಿರಿಯ ನಟ ಬಿರಾದರ್ ಯಾರಿಗೆ ಗೊತ್ತಿಲ್ಲ. ಹಲವು ವರ್ಷಗಳಿಂದ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿರೋ ನಟನೀಗ ಹೀರೊ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅದುವೇ '90 ಬಿಡಿ ಮನೀಗ್ ನಡಿ'. ಬಿರಾದರ್ ಸಿನಿಮಾ ತಂಡಕ್ಕೀಗ ಬಂಪರ್ ಗಿಫ್ಟ್ ಸಿಕ್ಕಿದೆಯಂತೆ.

ಹಾಸ್ಯ ನಟ ಬಿರಾದರ್ 500ನೇ ಸಿನಿಮಾದ ಹಾಡುಗಳನ್ನು ಆಡಿಯೋ ಕಂಪನಿಯೊಂದು ಭಾರಿ ಮೊತ್ತಕ್ಕೆ ಸೇಲ್ ಆಗಿದೆ. 'A2 ಮ್ಯೂಸಿಕ್' ಆಡಿಯೋ ಕಂಪೆನಿ ಈ ಸಿನಿಮಾದ ಹಾಡುಗಳನ್ನು ಭಾರಿ ಮೊತ್ತಕ್ಕೆ ಕೊಂಡುಕೊಂಡಿದೆಯಂತೆ. ಚಿತ್ರತಂಡ ನಿರೀಕ್ಷಿಯನ್ನೂ ಮಾಡದಷ್ಟು ಮೊತ್ತ ಕೊಟ್ಟು ಕೊಂಡುಕೊಂಡಿದೆ ಅಂತ ಚಿತ್ರತಂಡ ಹೇಳಿಕೊಂಡಿದೆ.

ಅಂದ್ಹಾಗೆ ಹಿರಿಯ ನಟ ವೈಜನಾಥ ಬಿರಾದಾರ್ ನಟಿಸುತ್ತಿರುವ 500ನೇ ಸಿನಿಮಾ. ಹಿರಿಯ ನಟನ ಸಿನಿಮಾಗೆ ಆಡಿಯೋ ಕಂಪನಿ ನೀಡಿರುವ ಮೊತ್ತ ಅಚ್ಚರಿಯಷ್ಟೇ ಅಲ್ಲ ಸಿನಿಮಾ ತಂಡಕ್ಕೆ ಹೊಸ ಹುರುಪು ನೀಡಿದೆ. ಈ ಮೂಲಕ ಹಾಸ್ಯನಟ ಬಿರಾದಾರ್ ಸಿನಿಮಾ ಅಡಿಯೋ ಕಮರ್ಷಿಯಲ್ ನಾಯಕರ ಸಿನಿಮಾಗಳಂತೆಯೇ ಸೇಲ್ ಆಗಿದೆ. ಸಿನಿಮಾ ತಂಡದ ಈ ಸಾಹಸಕ್ಕೆ ತೋರಿದ ಬಾಗಲಕೋಟೆಯ 'ಅಮ್ಮಾ ಟಾಕೀಸ್' ಖುಷಿಯಾಗಿದೆ.

Senior Actor Biradar 500th Movie 90 Bidi Manig Nadi Audio Rights Sold for Big Amount

ಬಿರಾದರ್ 500ನೇ ಸಿನಿಮಾಗೆ '90 ಹೊಡಿ ಮನೀಗ್ ನಡಿ' ಎಂದು ಟೈಟಲ್ ಇಡಲಾಗಿತ್ತು. ಆದರೆ, ಸೆನ್ಸಾರ್ ಮಂಡಳಿ ಈ ಸಿನಿಮಾದ ಟೈಟಲ್‌ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿಯೇ ಮನಸ್ಸಿಲ್ಲದೆ '90 ಬಿಡಿ ಮನೀಗ್ ನಡಿ' ಎಂದು ಟೈಟಲ್ ಬದಲಾಯಿಸಿಕೊಂಡಿದೆ. ಈಗ ಸಿನಿಮಾದ ಆಡಿಯೋ ಸಿಕ್ಕಿರುವ ಮೊತ್ತದಿಂದ ಚಿತ್ರತಂಡ ಫುಲ್ ಖುಷಿಯಾಗಿದೆ.

ಬಿರಾದರ್ ಅವರಿಗೀಗ 70 ವರುಷ. ಇಂತಹ ಪ್ರತಿಭಾವಂತ ಹಿರಿಯ ನಟನನ್ನ ಇಟ್ಟುಕೊಂಡು ಕಮರ್ಷಿಯಲ್ ಚಿತ್ರಕ್ಕೆ ಹಾಕಿ ಮೊದಲ ಹಂತದಲ್ಲಿಯೇ ಯಶಸ್ವಿಯಾಗಿದ್ದಾರೆ. ಅದರಂತೆ ಇದೀಗ ಸಿನಿಮಾ ಪೂರ್ಣಗೊಂಡು ಫಸ್ಟ್ ಕಾಪಿ ರೆಡಿಯಾಗಿದೆ. ಅಲ್ಲದೆ ಚಿತ್ರತಂಡ ಸೆನ್ಸಾರ್ ಕೂಡ ಮುಗಿಸಿದೆ. ಈಗ ಹಾಡುಗಳಿಗೆ ಭಾರಿ ಬೆಲೆ ಸಿಕ್ಕಿದ್ದು, ಚಿತ್ರತಂಡ ಖುಷಿಯಲ್ಲಿ ತೇಲಾಡುತ್ತಿದೆ.

Senior Actor Biradar 500th Movie 90 Bidi Manig Nadi Audio Rights Sold for Big Amount

"ಮೊದಲಿಗೆ ನಾವು ತೋರಿಸಿದ ಪ್ರಿವ್ಯೂವ್ ಹಾಡು ಕಂಡ ಕಂಪೆನಿಯವರು, ಎಪ್ಪತ್ತು ವರ್ಷದ ಬಿರಾದಾರ್ ಡಾನ್ಸ್ ಸ್ಟೆಪ್ಸ್ ಗೆ ಫುಲ್ ಫಿದಾ ಆಗಿ, ನಮ್ಮ ಈ ಸಾಹಸಕ್ಕೆ ಬೆನ್ನು ತಟ್ಟಿ ಭೇಷ್ ಎಂದಿದ್ದಾರೆ" ಎಂದು ಸಿನಿಮಾದ ಜಂಟಿ ನಿರ್ದೇಶಕ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಹರ್ಷ ವ್ಯಕ್ತಪಡಿಸಿದ್ದಾರೆ. ಖುದ್ದು ಆಡಿಯೋ ಕಂಪೆನಿ ಮಾಲೀಕರು ಕೂಡ ಸಿನಿಮಾದ ಹಾಡುಗಳು ಸದ್ದು ಮಾಡುತ್ತವೆ ಎಂದಿದ್ದಾರಂತೆ.

ಅದೇ ಖುಷಿಯಲ್ಲಿ '90 ಹೊಡಿ ಮನೀಗ್ ನಡಿ' ಟೀಸರ್ ಒಂದನ್ನು ಜನರ ಮುಂದಿಡುವ ತಯಾರಿ ಕೂಡ ನಡೆಯುತ್ತಿದೆ. ಈ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರೊಬ್ಬರು ಸಾಥ್ ನೀಡುತ್ತಿದ್ದಾರಂತೆ. ಅಂದ್ಹಾಗೆ ಈ ಸಿನಿಮಾ ಕಾಮಿಡಿ ಹಾಗೂ ಕ್ರೈಂ ಥ್ರಿಲ್ಲರ್ ಕಥೆ ಹೊಂದಿದ್ದು, ಶೀಘ್ರದಲ್ಲೇ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ.

Recommended Video

ಯಶ್‌ಗೆ ವಿಶೇಷ ಬೇಡಿಗೆ ಇಟ್ಟ ಮಹಾರಾಷ್ಟ್ರ ಫ್ಯಾನ್ಸ್ | #Yash

More from Filmibeat

English summary
Senior Actor Biradar 500th Movie 90 Bidi Manig Nadi Audio Rights Sold for Big Amount . Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X