"ದರ್ಶನ್ ಆಡಲೂ ಇಲ್ಲ.. ಬೀಳಲೂ ಇಲ್ಲ..; ದರ್ಶನ್ 25ನೇ ವರ್ಷದ ಜರ್ನಿ ಬಗ್ಗೆ ವಿನೋದ್ ರಾಜ್ ಹೇಳಿದ್ದೇನು?
ಒಂದೇ ವಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಎರಡೆರಡು ಸಂಭ್ರಮ. ಒಂದ್ಕಡೆ ದರ್ಶನ್ ಹುಟ್ಟುಹಬ್ಬ. ಇನ್ನೊಂದು ಕಡೆ ದರ್ಶನ್ 25 ವರ್ಷಗಳ ಸಿನಿಮಾ ಜರ್ನಿಯ ಸಂಭ್ರಮ. ಇವೆರಡೂ ಒಂದೇ ವಾರದಲ್ಲಿ ನಡೆಯುತ್ತಿರುವುದು ಅಭಿಮಾನಿಗಳಿಗೆ ಮತ್ತೊಂದು ಖುಷಿ.
ಹೌದು, ನಾಳೆ( ಫೆಬ್ರವರಿ 16) ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮ ಮುಗಿಯುತ್ತಿದ್ದಂತೆ ಅಭಿಮಾನಿಗಳು ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳನ್ನು ಪೂರೈಸಿದ್ದ ಬೆನ್ನಲ್ಲೇ 'D-25' ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಈ ವಾರ ಡಿ ಬಾಸ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ ಸಿಗೋದು ಗ್ಯಾರಂಟಿ.

ಸ್ಯಾಂಡಲ್‌ವುಡ್ ತಾರೆಯರು ದರ್ಶನ್ 25 ವರ್ಷಗಳ ಜರ್ನಿಗೆ ಸಾಕ್ಷಿಯಾಗಲಿದ್ದಾರೆ. ಕನ್ನಡದ ಚಿತ್ರರಂಗದ ಸ್ಟಾರ್ ನಟರು ಹಾಗೂ ನಟಿಯರು ಭಾಗವಹಿಸುವುದು ಬಹುತೇಕ ಕನ್ಫರ್ಮ್ ಆಗಿದೆ. ಇದೇ ವೇಳೆ ವಿನೋದ್ ರಾಜ್ ವಿಡಿಯೋ ಮೂಲಕ ತಮ್ಮ ದರ್ಶನ್‌ಗೆ ಶುಭ ಕೋರಿದ್ದಾರೆ. ದರ್ಶನ್ ಬಗ್ಗೆ ವಿನೋದ್ ರಾಜ್ ಹೇಳಿದ್ದೇನು? ಡಿ ಬಾಸ್ ಬೆಳ್ಳಿ ಪರ್ವಕ್ಕೆ ಬರುವ ಅತಿಥಿಗಳ್ಯಾರು? ತಿಳಿಯಲು ಮುಂದೆ ಓದಿ..
ದರ್ಶನ್ ಸಿನಿ ಪಯಣಕ್ಕೆ 25 ವರ್ಷ. ಈ ಹಿನ್ನೆಲೆಯಲ್ಲಿ ದರ್ಶನ್ ಆಪ್ತರಾಗಿರುವ ಇಂಡುವಾಳು ಸಚ್ಚಿದಾನಂದ ಬೆಳ್ಳಿ ಪರ್ವ ಸಂಭ್ರಮದ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಭರದಿಂದ ಸಿದ್ಧತೆಗಳು ಆರಂಭ ಆಗಿವೆ. ಇದೇ ಸಂದರ್ಭದಲ್ಲಿ ಸ್ಯಾಂಡಲ್‌ವುಡ್‌ನ ಗಣ್ಯರಿಗೆ ಆಹ್ವಾನ ನೀಡಿಲಾಗಿದೆ. ಹಿರಿಯ ನಟ ವಿನೋದ್ ರಾಜ್ ಅವರಿಗೂ ಆಹ್ವಾನ ಬಂದಿದೆ.

D-25 ಬೆಳ್ಳಿ ಪರ್ವಕ್ಕೆ ಆಹ್ವಾನ ಬಂದ ಬೆನ್ನಲ್ಲೆ ವಿನೋದ್ ರಾಜ್ ವಿಡಿಯೋ ಮೂಲಕ ಕಾರ್ಯಕ್ರಮಕ್ಕೆ ಬರುವುದನ್ನು ಕನ್ಫರ್ಮ್ ಮಾಡಿದ್ದಾರೆ. " ಡಿ ಬಾಸ್ ಅಂತಹ ನಿಮ್ಮೆಲ್ಲರ ಪ್ರೀತಿಯಲ್ಲಿ ಖ್ಯಾತಿಯಾಗಿರುವ ನಮ್ಮ ದರ್ಶನ್‌ರವರು ಚಲನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳೇ ಆಯ್ತು. 25 ವರ್ಷ ಎಷ್ಟು ಬೇಗ ಉರುಳಿ ಹೋಯ್ತು. ಆದರೆ, ದರ್ಶನ್‌ರವರು ಆಡಲೂ ಇಲ್ಲ. ಬೀಳಲೂ ಇಲ್ಲ. ಚೆನ್ನಾಗಿ ನಿಂತು ಬಿಟ್ಟರು. ಸ್ಥಿರವಾಗಿ ನಿಂತು ಬಿಟ್ಟರು. " ಎಂದು ವಿನೋದ್ ರಾಜ್ ವಿಡಿಯೋದಲ್ಲಿ ಹೇಳಿದ್ದಾರೆ.
ಹಾಗೇ "ಇದೇ ಶನಿವಾರ ಸಂಜೆ 5 ಗಂಟೆಗೆ ಶ್ರೀರಂಗ ಪಟ್ಟಣದ ರಂಗನಾಥ ಸ್ವಾಮಿ ಮೈದಾನದಲ್ಲಿ 25ಕ್ಕೆ ಪಾದಾರ್ಪಣೆ ಮಾಡಿ ಜಯಭೇರಿ ಹೊಡೆದುಕೊಂಡು ಹೋಗುತ್ತಿರುವ ನಮ್ಮ ದರ್ಶನ್ ಅವರನ್ನು ನಾವೆಲ್ಲರೂ ಅಭಿನಂದಿಸೋಣ. ನಾನು ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ. ನೀವು ಬರೋದಿಲ್ಲ ಅಂತ ಹೇಳುವುದಕ್ಕೆ ಆಗೋದಿಲ್ಲ. ದರ್ಶನ್ ಅವರಿಗೋಸ್ಕರ ನೀವು ಬರುತ್ತಿದ್ದೀರ.. ನಾನು ಬರುತ್ತಿದ್ದೇನೆ. ಬನ್ನಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸೋಣ. " ಎಂದು ವಿನೋದ್ ರಾಜ್ ಹೇಳಿದ್ದಾರೆ.
'D-25 ಬೆಳ್ಳಿ ಪರ್ವ' ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಪಟ್ಟಿ ಹೀಗಿದೆ. ವಿನೋದ್ ರಾಜ್, ಬೃಂದಾ ಆಚಾರ್ಯ, ಸೋನುಗೌಡ, ಪ್ರಿಯಾಂಕಾ, ಸಾನ್ಯಾ ಐಯ್ಯರ್, ಶರಣ್ಯ ಶೆಟ್ಟಿ, ತನ್ವಿ ಬಾಲರಾಜ್, ಸುಮಲತಾ ಅಂಬರೀಶ್, ಶರಣ್, ವಿನೋದ್ ಪ್ರಭಾಕರ್, ನೀನಾಸಂ ಸತೀಶ್, ಧನಂಜಯ್, ಪ್ರಜ್ವಲ್ ದೇವರಾಜ್, ಅಭಿಷೇಕ್ ಅಂಬರೀಶ್, ಧನ್ವೀರ್, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ಝೈದ್ ಖಾನ್, ಸೂರಜ್, ಯಶಸ್ ಸೂರ್ಯ, ನೆನಪಿರಲಿ ಪ್ರೇಮ್ ಈ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ.


Click it and Unblock the Notifications











